ಮೈಸೂರು: 13 ಕಡೆ ನಡೆದ ಯೋಗದಸರಾ

7
5 ದಿನಗಳ ಕಾಲದ ಮನೆಮನೆ ಯೋಗ ಕಾರ್ಯಕ್ರಮಕ್ಕೆ ಚಾಲನೆ

ಮೈಸೂರು: 13 ಕಡೆ ನಡೆದ ಯೋಗದಸರಾ

Published:
Updated:
Deccan Herald

ಮೈಸೂರು: ನಗರದಲ್ಲಿ ಶುಕ್ರವಾರ ಬೆಳಿಗ್ಗೆ ಏಕಕಾಲಕ್ಕೆ 13 ಕಡೆ 5 ದಿನಗಳ ಕಾಲ ನಡೆಯುವ ಯೋಗ ದಸರಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಕುವೆಂಪುನಗರ ಸೌಗಂಧಿಕ ಉದ್ಯಾನದಲ್ಲಿ ಸಚಿವ ಜಿ.ಟಿ.ದೇವೇಗೌಡ, ಶಾಸಕ ಎಸ್.ಎ.ರಾಮದಾಸ್, ಪಾಲಿಕೆ ಸದಸ್ಯ ರಮೇಶ್ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಿಕಾ ಸುರೇಶ್ ಯೋಗ ದಸರಾ ಉದ್ಘಾಟಿಸಿ, ತಾವೂ ಯೋಗ ಮಾಡಿದರು. ಯೋಗ ಗುರು ಪ್ರಕಾಶ್ ಯೋಗವನ್ನು ಹೇಳಿಕೊಟ್ಟರು. ಇಲ್ಲಿ ನಡೆದ ಕಾರ್ಯಕ್ರಮದಲ್ಲಿ 300ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

ಸರಸ್ವತಿಪುರಂನ ಜವರೇಗೌಡ ಉದ್ಯಾನ, ಜೆ.ಪಿ.ನಗರದ ಪುಟ್ಟರಾಜು ಗವಾಯಿ ಕ್ರೀಡಾಂಗಣ, ಸಿದ್ಧಾರ್ಥನಗರದ ಜೆಎಸ್ಎಸ್ ಪಬ್ಲಿಕ್ ಶಾಲೆ, ನಜರ್‌ಬಾದ್‌ನ ಚಾಮುಂಡೇಶ್ವರಿ ಒಳಾಂಗಣ ಕ್ರೀಡಾಂಗಣ, ನಾಯ್ಡುನಗರದ ಕೆಎಸ್ಆರ್‌ಟಿಸಿ ಬಸ್‌ನಿಲ್ದಾಣ, ವಿಜಯನಗರದ 1ನೇ ಹಂತದ ಕ್ರೀಡಾಂಗಣ, 2ನೇ ಹಂತದ ಪುಷ್ಕರಣಿ ಶಾಲೆ ಸಮೀಪದ ಮೈದಾನ, ಹೆಬ್ಬಾಳ 1ನೇ ಹಂತದ ಬಸವನಗುಡಿ, ವಿಜಯನಗರದ ರೈಲ್ವೆ ಬಡಾವಣೆ, ಭೋಗಾದಿಯ ಬೆಂಚ್‌ಕಟ್ಟೆ ಮಾರಮ್ಮನ ದೇವಸ್ಥಾನದ ಉದ್ಯಾನದಲ್ಲಿ ಏಕಕಾಲಕ್ಕೆ ಬೆಳಿಗ್ಗೆ 6ರಿಂದ 7ರವರೆಗೆ ಯೋಗ ಕಾರ್ಯಕ್ರಮ ನಡೆಯಿತು. ಪ್ರತಿಯೊಂದು ಕಡೆಯೂ ನೂರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಇದೇ ರೀತಿ ಇಲ್ಲೆಲ್ಲ ಒಟ್ಟು 5 ದಿನಗಳ ಕಾಲ ಯೋಗ ಕಾರ್ಯಕ್ರಮ ನಡೆಯಲಿದೆ.

ಸೌಗಂಧಿಕ ಉದ್ಯಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗ ದಸರಾ ಉಪಸಮಿತಿಯ ಉಪವಿಶೇಷಾಧಿಕಾರಿ ರಮ್ಯಾ ಹಾಗೂ ಕಾರ್ಯದರ್ಶಿ ಡಾ.ಬಿ.ಎಸ್.ಸೀತಾಲಕ್ಷ್ಮೀ ಭಾಗವಹಿಸಿದ್ದರು.

ಇಂದು ಯೋಗಚಾರಣ:

ಯೋಗ ದಸರಾ ಕಾರ್ಯಕ್ರಮದ ನಿಮಿತ್ತ ಶನಿವಾರ ಬೆಳಿಗ್ಗೆ 7ಕ್ಕೆ ಯೋಗಚಾರಣ ಕಾರ್ಯಕ್ರಮವು ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಡೆಯಲಿದೆ. ಸುಮಾರು ಸಾವಿರಕ್ಕೂ ಅಧಿಕ ಮಂದಿ ಇಲ್ಲಿ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಹತ್ತಲಿದ್ದಾರೆ. 8 ಗಂಟೆಗೆ ಚಾಮುಂಡಿಬೆಟ್ಟದಲ್ಲಿ ಯೋಗಾಸನದ ಮೂಲಕ ದುರ್ಗಾ ನಮಸ್ಕಾರ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !