ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗನರಸಿಂಹಸ್ವಾಮಿ ರಥೋತ್ಸವ ಸಂಭ್ರಮ

Last Updated 6 ಮೇ 2022, 5:16 IST
ಅಕ್ಷರ ಗಾತ್ರ

ಸಾಲಿಗ್ರಾಮ: ಪಟ್ಟಣದ ಹೊರ ವಲಯದಲ್ಲಿರುವ ಪುರಾಣ ಪ್ರಸಿದ್ಧ ಯೋಗನರಸಿಂಹಸ್ವಾಮಿ ಬ್ರಹ್ಮರ ಥೋತ್ಸವ ಅದ್ಧೂರಿಯಾಗಿ ನಡೆಯಿತು.

ದೇವಾಲಯದಲ್ಲಿಗುರುವಾರ ಮುಂಜಾನೆಯಿಂದಲ್ಲೇ ಅರ್ಚಕ ಶ್ರೀನಿವಾಸ್‌ ಅಯ್ಯಂಗಾರ್‌ ಅವರ ನೇತೃತ್ವದಲ್ಲಿ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು.

ಅರ್ಚಕ ಶ್ರೀನಿವಾಸ್ ಅಯ್ಯಂಗಾರ್ ಅವರು ಯೋಗನರಸಿಂಹಸ್ವಾಮಿ, ಭೂದೇವಿ, ಶ್ರೀದೇವಿ ಉತ್ಸವ ಮೂರ್ತಿಗಳನ್ನು ರಥಕ್ಕೆ ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ನೂರಾರು ಭಕ್ತರು ಜೈಕಾರ‌ ಹಾಕುತ್ತಾ ರಥವನ್ನು ದೇವಾಲಯದ ಸುತ್ತ ಎಳೆದರು.

ಕೋವಿಡ್‌ನಿಂದಾಗಿ ಎರಡು ವರ್ಷಗಳಿಂದ ಬ್ರಹ್ಮ ರಥೋತ್ಸವ ನಡೆದಿರಲಿಲ್ಲ. ಈ ಬಾರಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಭಕ್ತರಿಗೆ ಪ್ರತಿ ವರ್ಷದಂತೆ ಪಾನಕ ಹಾಗೂ ಪ್ರಸಾದದ ವ್ಯವಸ್ಥೆಯನ್ನು ಉಪ್ಪಾರ ಸಮುದಾಯದ ಭಕ್ತರು ಮಾಡಿದ್ದರು. ಪುನೀತ್ ರಾಜಕುಮಾರ್ ಅಭಿಮಾನಿ ಸಂಘದಿಂದ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.

ಶಾಸಕ ಸಾ.ರಾ.ಮಹೇಶ್, ಉದ್ಯಮಿ ಸಾ.ರಾ. ನಂದೀಶ್, ಬಾಬುಹನುಮಾನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಿಕಾ, ಉಪಾಧ್ಯಕ್ಷೆ ಸುಧಾ ರೇವಣ್ಣ, ಪಟೇಲ್ ಆನಂದ್, ತಹಶೀಲ್ದಾರ್. ಕೆ.ಎನ್.ಮೋಹನಕುಮಾರ್, ಗ್ರಾಮಲೆಕ್ಕಾಧಿಕಾರಿಗಳಾದ ಶಶಿಕಾಂತ್, ದರ್ಶನ್, ಎಸ್.ಎಸ್.ಸಂದೇಶ್, ಎಸ್.ಕೆ.ಮಧುಚಂದ್ರ, ಎಸ್.ಎಂ.ಸೋಮಣ್ಣ, ಕುಪ್ಪಳ್ಳಿಸೋಮು, ಗ್ರಾ.ಪಂ. ಸದಸ್ಯರಾದ ಹರೀಶ್, ದೊಡ್ಮನೆ ಮಂಜು, ಹೇಮಂತ್‌ ಎಸ್‌.ಗೌಡ, ಗೇಟಿ ಪ್ರಕಾಶ್, ಮನು, ಲೋಕೇಶ್, ಎಸ್‌.ಪಿ. ಜಗದೀಶ್, ಜವರೇಗೌಡ, ಸಹಕಾರಿ ಸಂಘದ ಅಧ್ಯಕ್ಷ ಪಾಪಣ್ಣ, ತಿಮ್ಮೇಗೌಡ, ಲಾಲೂಸಾಬ್, ದೇವಾಲಯದ ಪಾರುಪತ್ತೇದಾರ್ ಅಂಜನೀಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT