ಹುಣಸೂರು: ಜಾನುವಾರು ಸಾಗಿಸುತ್ತಿದ್ದ ಲಾರಿ ಕಂಟೇನರ್ ಮೇಲೆ ಬಿಳಿಕೆರೆ ಸಮೀಪದ ಮನುಗನಹಳ್ಳಿ ಚೆಕ್‌ಪೋಸ್ಟ್ ಬಳಿ ದಾಳಿ ನಡೆಸಿರುವ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು, 42 ಜಾನುವಾರು ರಕ್ಷಿಸಿದ್ದಾರೆ.
ತಾಲ್ಲೂಕಿನ ರತ್ನಾಪುರಿ ಗ್ರಾಮದಿಂದ ಚಾಮರಾಜನಗರಕ್ಕೆ ಕೆ.ಆರ್.ನಗರ ಹಾಗೂ ಗೊಮ್ಮಟಗಿರಿ ಮಾರ್ಗವಾಗಿ ಮೈಸೂರಿನ ಕಡೆಗೆ ಸಾಗುತ್ತಿದ್ದಾಗ ಲಾರಿ ಕಂಟೇನರ್ ಅನ್ನು ಪೊಲೀಸರು ತಪಾಸಣೆ ನಡೆಸಿದಾಗ ಜಾನುವಾರು ಪತ್ತೆಯಾಗಿವೆ.
ಈ ಸಂಬಂಧ ಲಾರಿ ಚಾಲಕ ಸೇರಿದಂತೆ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ತಿಳಿಸಿದ್ದಾರೆ.
ವಶಕ್ಕೆ ಪಡೆದ ಜಾನುವಾರನ್ನು ಮೈಸೂರಿನ ಪಿಂಜ್ರಾಪೋಲ್‌ಗೆ ಬಿಡಲಾಗಿದೆ.