ಮೈಸೂರು: ‘ಹೋರಾಟದಿಂದ ಮಾತ್ರ ಸಮಾನತೆಯ ಆಧಾರದ ಮೇಲೆ ಹೊಸ ಸಮಾಜ ನಿರ್ಮಾಣ ಸಾಧ್ಯವಿದೆ’ ಎಂದು ಎಸ್ಯುಸಿಐಸಿ ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಬಿ. ರವಿ ಹೇಳಿದರು.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದ (ಎಐಎಂಎಸ್ಎಸ್) ಇಲ್ಲಿನ ಎಂಜಿನಿಯರ್ಗಳ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 5ನೇ ಜಿಲ್ಲಾ ಮಟ್ಟದ ಮಹಿಳಾ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಹೆಣ್ಣು ಮಕ್ಕಳು ಸಾಕಷ್ಟು ಮುಂದುವರಿದಿದ್ದಾರೆ. ಅಂತೆಯೇ ಅವರಿಲ್ಲದ ಕ್ಷೇತ್ರಗಳಿಲ್ಲ. ಆದರೂ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿವೆ. ದೌರ್ಜನ್ಯಕ್ಕೆ ಒಳಗಾಗುತ್ತಿರುವವರು ಅವಿದ್ಯಾವಂತರು, ಬಡ ಹೆಣ್ಣು ಮಕ್ಕಳು ಮಾತ್ರವಲ್ಲ, ವಿದ್ಯಾವಂತ, ಮಧ್ಯಮ, ಮೇಲ್ಮಧ್ಯಮ ವರ್ಗದ ಹೆಣ್ಣು ಮಕ್ಕಳು ಕೂಡ ಹಲವು ರೀತಿಯ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ತಡೆಯುವುದಕ್ಕೆ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಅಧಿಕಾರಕ್ಕೆ ಬರಬೇಕು’ ಎಂದರು.

‘ಶೋಷಣೆಗಳು ಹೋಗಬೇಕಾದರೆ ಉತ್ಪಾದನೆಯ ಮೇಲಿನ ಖಾಸಗಿ ನಾಯಕತ್ವ ಹೋಗಬೇಕು. ಈ ಹೋರಾಟದಲ್ಲಿ ಮಹಿಳೆಯರು ಮತ್ತು ಪುರುಷರು ಒಟ್ಟಾಗಿ ಭಾಗಿಯಾಗಬೇಕು. ಆಗ ಮಾತ್ರ ಸಮಾಜದಲ್ಲಿ ಮೂಲ ಬದಲಾವಣೆ ಬರಲು ಸಾಧ್ಯ’ ಎಂದು ಹೇಳಿದರು.

ಸಂಘಟನೆಯ ರಾಜ್ಯ ಕಾರ್ಯದರ್ಶಿ ಶೋಭಾ ಮಾತನಾಡಿ, ‘ಹೆಣ್ಣು ಮಕ್ಕಳು ಸಾಮಾಜಿಕ ಚಳವಳಿಯಲ್ಲಿ ಕಾಲಿಡುವುದು ಬಹಳ ಕಷ್ಟ. ಆದರೆ, ಒಮ್ಮೆ ಕಾಲಿಟ್ಟರೆ ಅದೊಂದು ದೊಡ್ಡ ಶಕ್ತಿ. ಹೆಣ್ಣು ಮಕ್ಕಳ ಭಾಗವಹಿಸುವಿಕೆ ಇಲ್ಲದ ಕಾರಣದಿಂದ ಸಮಾಜದಲ್ಲಿ ಮೂಲಭೂತ ಬದಲಾವಣೆಯಾಗಿಲ್ಲ’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷೆ ನಳಿನಾ ಮಾತನಾಡಿ, ‘ಹೆಣ್ಣು ಮಕ್ಕಳು ವಿದ್ಯೆಗೆ ಅರ್ಥ ಕಲ್ಪಿಸಬೇಕಾದರೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ವ್ಯಕ್ತಿತ್ವಗಳನ್ನು ಸರಿಯಾದ ದಾರಿಯಲ್ಲಿ ರೂಪಿಸಿಕೊಳ್ಳಬೇಕು’ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ರಾಜ್ಯಾಧ್ಯಕ್ಷೆ ಮಂಜುಳಾ ಮಾತನಾಡಿ, ‘ಹುಟ್ಟುವುದಕ್ಕೂ ಅನುಮತಿ ಬೇಕಿರುವ ಅಥವಾ ನಿರಾಕರಣೆ ಇರುವ ಸಮಾಜದಲ್ಲಿ ಮಹಿಳೆಯರು ಸ್ವಾತಂತ್ರ್ಯಕ್ಕಾಗಿ ಪರದಾಡುತ್ತಿದ್ದಾರೆ. ಪುರುಷ ಪ್ರಧಾನ ಮನಸ್ಸುಗಳನ್ನು ನಿರಾಕರಿಸಿದರೆ ಅದನ್ನು ಜೀರ್ಣಿಸಿಕೊಳ್ಳಲು ಆಗದ ಸಮಾಜದಲ್ಲಿ ಆಕೆ ಬದುಕುತ್ತಿದ್ದಾಳೆ. ಹೆಣ್ಣು ಮಕ್ಕಳಿಗೆ ಬೇಕಾದ ಸ್ವಾತಂತ್ರ್ಯ ಹಾಗೂ ಗೌರವ ಭಗವಂತನಲ್ಲಿ ಮಾಡುವ ಪ್ರಾರ್ಥನೆಯಿಂದಾಗಲಿ, ಸರ್ಕಾರಗಳಿಂದಾಗಲಿ, ನ್ಯಾಯಾಂಗ ಅಥವಾ ಪೊಲೀಸ್ ವ್ಯವಸ್ಥೆಗಳಿಂದಾಗಲಿ ಸಿಕ್ಕಿಲ್ಲ. ಇದರಿಂದಾಗಿ ಹೆಣ್ಣು ಮಕ್ಕಳ ಬದುಕು ಸುಧಾರಿಸುವುದಿಲ್ಲ’ ಎಂದರು.

ಜಿಲ್ಲಾ ಕಾರ್ಯದರ್ಶಿ ಸೀಮಾ ಜಿ.ಎಸ್. ಮಾತನಾಡಿದರು.

ಇದಕ್ಕೂ ಮುನ್ನ, ಚಿಂತಕ ಮುಜಾಫರ್ ಅಸ್ಸಾದಿ, ಸಮಾಜವಾದಿ ಪ. ಮಲ್ಲೇಶ್ ಹಾಗೂ ಪಂಡಿತ್ ರಾಜೀವ ತಾರಾನಾಥ ಅವರಿಗೆ ಗೌರವ ಸಲ್ಲಿಸಲಾಯಿತು.

ಪದಾಧಿಕಾರಿಗಳ ಆಯ್ಕೆ

ಸಂಘಟನೆಯ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ನಳಿನಾ ಉಪಾಧ್ಯಕ್ಷರಾಗಿ ಶೀಬಾ ಸೀಮಾ ಜಿ.ಎಸ್. ರೂಪಾ ದೇಶಪಾಂಡೆ ಕಾರ್ಯದರ್ಶಿಯಾಗಿ ಆಸಿಯಾ ಬೇಗಂ ಕಚೇರಿ ಕಾರ್ಯದರ್ಶಿಯಾಗಿ ಪುಷ್ಪಾ ಜಿ. ಹಾಗೂ ಕಾರ್ಯಕಾರಿ ಸಮಿತಿಗೆ ಸ್ನೇಹಾ ಗೌರಿ ಪುಷ್ಪಾ ಪ್ರೇಮಾ ಸುಮಾ ಗಾಯತ್ರಿ ಮತ್ತು ಸಿಂಧು ಆಯ್ಕೆಯಾದರು. 15 ಮಂದಿಯನ್ನು ಕೌನ್ಸಿಲ್ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.