ಶುಕ್ರವಾರ, ಡಿಸೆಂಬರ್ 2, 2022
19 °C

ದೇವರ ಹೆಸರಲ್ಲಿ ಥಳಿತ; ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ಮೈಮೇಲೆ ದೇವರು ಬಂದಿದೆ ಎಂದು ಗೃಹಿಣಿಗೆ ಬೆತ್ತದಿಂದ ಹಿಗ್ಗಾಮುಗ್ಗ ಥಳಿಸಿ ಗಾಯಗೊಳಿಸಿದ ಘಟನೆ ತಾಲ್ಲೂಕಿನ ಕಿರಂಗೂರು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಘಟನೆ ವಿವರ: ಗ್ರಾಮದ ಸಿದ್ದಯ್ಯ ಎಂಬುವವರ ಮನೆಯಲ್ಲಿ ಕಾರ್ತೀಕ ಮಾಸದ ಅಂಗವಾಗಿ ಭೈರವೇಶ್ವರ ದೇವರ ವಿಶೇಷ ಪೂಜೆ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ನಟರಾಜ್ ಮತ್ತು ಪತ್ನಿ ಪವಿತ್ರ ತೆರಳಿದ್ದರು. ಪೂಜಾ ಸಮಯದಲ್ಲಿ ಗುಡ್ಡಪ್ಪ ಶಿವಕುಮಾರ್ (ಪೂಜಾರಿ), ದೇವರು ಬಂದಿದೆ ಎಂದು ಕುಣಿಯಲಾರಂಭಿಸಿ ಆತನ ಕೈಯಲ್ಲಿದ್ದ ಬಿದಿರು ಕಡ್ಡಿಯಿಂದ ಹಿಗ್ಗಾಮುಗ್ಗ ಪವಿತ್ರಳಿಗೆ ಥಳಿಸಿದ್ದಾನೆ.

ತೀವ್ರ ಗಾಯಗೊಂಡ ಪವಿತ್ರರನ್ನು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ಸೋಮವಾರ ಪ್ರಕರಣ ದಾಖಲಿಸಲಾಗಿದೆ.

ನಾಪತ್ತೆ: ಮಹಿಳೆಗೆ ಥಳಿಸಿದ ಗುಡ್ಡಪ್ಪ ಶಿವಕುಮಾರ್ ನಾಪತ್ತೆಯಾಗಿದ್ದು, ಈತನ ಹುಡುಕಾಟ ನಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು