ಬಾಳೆ ಹಣ್ಣು ವ್ಯಾಪಾರ ನಡೆಸುತ್ತಿದ್ದ ಮಹದೇವ ಎಂಬಾತನಿಂದ ನಾಗರಿಕರ ಓಡಾಟಕ್ಕೆ ಸಮಸ್ಯೆ ಎದುರಾಗಿತ್ತು. ಪೊಲೀಸ್ ಸಿಬ್ಬಂದಿ ಅಂಗಡಿ ತೆರವುಗೊಳಿಸುವಂತೆ ಸೂಚಿಸಿದರು. ಸ್ಪಂದಿಸದ ಕಾರಣ ಕ್ರಮಕ್ಕೆ ಮುಂದಾದಾಗ ಮಾತಿನ ಚಕಮಕಿ ನಡೆಸಿದ ವ್ಯಾಪಾರಿ ಎಎಸ್ಐ ನಂದೀಶ್ ಮತ್ತು ಪೊಲೀಸ್ ಕಾನ್ ಸ್ಟೆಬಲ್ ಗಿರೀಶ್ ಮೇಲೆ ಹಲ್ಲೆ ಮಾಡಲು ಮುಂದಾಗಿ ಸಮವಸ್ತ್ರ ಹರಿದಿದ್ದಾನೆ ಎಂದು ಪಿಎಸ್ಐ ಜಮೀರ ಅಹಮ್ಮದ್ ತಿಳಿಸಿದರು. ಕೂಡಲೆ ಆರೋಪಿ ಮಹದೇವನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ ಎಂದು ತಿಳಿಸಿದರು.