ಮೈಸೂರು: ‘ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಶಪಥ ಮಾಡಬೇಕು. ಜಾತಿ ವ್ಯವಸ್ಥೆಯಿಂದ ಜಡ್ಡುಗಟ್ಟಿರುವ ಸಮಾಜದಲ್ಲಿ ಚಲನಶೀಲತೆ ತರಲು ವೈಜ್ಞಾನಿಕ, ವೈಚಾರಿಕ ಶಿಕ್ಷಣ ಪಡೆಯಲೇಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಇಲ್ಲಿನ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಬಸವ ಬಳಗಗಳ ಒಕ್ಕೂಟವು ಸೋಮವಾರ ಆಯೋಜಿಸಿದ್ದ ಬಸವ ಜಯಂತಿಯಲ್ಲಿ ಬೀದರ್ನ ಕೌಠಾ(ಬಿ) ಬಸವ ಯೋಗಾಶ್ರಮದ ಸಿದ್ಧರಾಮ ಶರಣ ಬೆಲ್ದಾಳ ಅವರಿಗೆ ‘ಬಸವ ರಾಷ್ಟ್ರೀಯ ಪುರಸ್ಕಾರ’ ಪ್ರದಾನ ಮಾಡಿ ಮಾತನಾಡಿ, ‘ಶರಣರ ಕನಸಿನ ಸಮಾಜವನ್ನು ಸಾಕಾರಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಕೂಡ ಬಸವ ತತ್ವದಂತೆ ಎಲ್ಲರನ್ನೂ ಒಳಗೊಂಡಿದೆ. ನಾನು ಬಸವಣ್ಣನವರ ಪಕ್ಕಾ ಅನುಯಾಯಿ’ ಎಂದರು.

‘ವೈಚಾರಿಕ ಶಿಕ್ಷಣ ಎಲ್ಲರಿಗೂ ಸಿಗುತ್ತಿಲ್ಲ. ಅದಕ್ಕಾಗಿಯೇ ವ್ಯವಸ್ಥೆಯ ಜೊತೆ ರಾಜಿ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಭದ್ರ ಮನುವಾದಿಗಳು ಮೂಢನಂಬಿಕೆಗಳನ್ನು ಬಿತ್ತಿ, ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಲೇ ಇರುತ್ತಾರೆ. ಅಸಮಾನತೆಯ ಸಮಾಜದಲ್ಲಿ ನಾವು ಇನ್ನೂ ಎಷ್ಟು ದಿನ ಇರಬೇಕು? ನಾವು ಯಾಕೆ ಅನಕ್ಷರಸ್ಥರು, ಬಡವರು, ಸೂರಿಲ್ಲದವರು ಎಂಬ ಕಾರಣ ಎಲ್ಲರೂ ತಿಳಿದುಕೊಳ್ಳಬೇಕು. ಬಸವಣ್ಣ, ಬುದ್ಧ, ಗಾಂಧೀಜಿ, ಅಂಬೇಡ್ಕರ್ ಹೋರಾಟ ನೆನೆಯಬೇಕು. ಚರಿತ್ರೆ ಅರಿತು ಇತಿಹಾಸ ಸೃಷ್ಟಿಸಬೇಕು’ ಎಂದು ಹೇಳಿದರು.
.ಬಸವ ಜ್ಞಾನವರುಹಿತು ಶರೀರವಿಲ್ಲದಿದ್ದರೆ ಜನ್ಮ ಇರುತ್ತಿರಲಿಲ್ಲಾ! ಮನವೇ.ಸಂಗತ | ವಿಶ್ವಮಾನವ ತತ್ತ್ವ: ಬಸವ ಪ್ರತಿಮೆಯ ಕನ್ನಡಿ.
‘ಸಾಮಾಜಿಕ ಮತ್ತು ಆರ್ಥಿಕ ತಳಹದಿಯ ಮೇಲೆ ರಾಜಕೀಯ ಸ್ವಾತಂತ್ರ್ಯ ನಿಂತಿದೆ. ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು. ಇಲ್ಲದಿದ್ದರೆ ಪಟ್ಟಭದ್ರ ಹಿತಾಸಕ್ತಿಗಳು ವಿಜೃಂಭಿಸುತ್ತಾರೆ. ಅವರ ಕರ್ಮ, ವರ್ಣಾಶ್ರಮ ಸಿದ್ಧಾಂತವನ್ನು ತಿರಸ್ಕರಿಸಿ’ ಎಂದರು.

ಪುರಸ್ಕಾರ ಸ್ವೀಕರಿಸಿದ ಸಿದ್ಧರಾಮ ಶರಣ ಬೆಲ್ದಾಳ ಮಾತನಾಡಿ, ‘ರಾಜ್ಯ ಸರ್ಕಾರದಿಂದ ಬಸವ ಪರ ಕಾರ್ಯಗಳು ಆಗಿವೆ. ಸಾಂಸ್ಕೃತಿಕ ನಾಯಕ ಘೋಷಣೆ, ಕಚೇರಿಗಳಲ್ಲಿ ಭಾವಚಿತ್ರ ಸ್ಥಾಪನೆ, ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ, ಗ್ಯಾರಂಟಿಗಳ ಅನುಷ್ಠಾನವು ಬಸವ ತತ್ವದ ಕನಸುಗಳಾಗಿವೆ’ ಎಂದು ಶ್ಲಾಘಿಸಿದರು.

‘ಮಾನವತೆ ಒಂದಾಗಬೇಕು. ಹಿಂದೂ ಒಂದು ಎಂಬುದು ಬೋಗಸ್ಸು. ಸಮ ಸಮಾಜ ನಿರ್ಮಾಣದಿಂದ ಮಾತ್ರವೇ ಭಾರತವು ಒಂದಾಗುತ್ತದೆ. ಬಸವನ ಅನುಯಾಯಿ ಎಂಬುದಕ್ಕೆ ಎದೆಗಾರಿಕೆ ಬೇಕು. ಅದನ್ನು ಸಿದ್ದರಾಮಯ್ಯ, ಮಹದೇವಪ್ಪ ಯಾವಾಗಲೂ ಹೇಳಿಕೊಳ್ಳುತ್ತಾರೆ’ ಎಂದರು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಜನರ ಭಾಷೆಯಾದ ಕನ್ನಡವನ್ನು ದೈವ ಭಾಷೆಯಾಗಿಸಿದ ನಾಯಕ ಬಸವಣ್ಣ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ನಾಡಿನ ಧ್ರುವತಾರೆಗಳು’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ‘ಸಮುದಾಯಗಳ ನಡುವೆ ಸಾಮರಸ್ಯ ಮೂಡಿಸಲು, ಬಸವ ತತ್ವಗಳ ಅನುಷ್ಠಾನ ಸೇವೆಯಲ್ಲಿ ನಿರತರಾಗಿರುವ ಸಿದ್ಧರಾಮ ಶರಣರಿಗೆ ಬಸವ ರಾಷ್ಟ್ರೀಯ ಪುರಸ್ಕಾರ ನೀಡಲಾಗಿದೆ. ಕಲ್ಯಾಣ ಕ್ರಾಂತಿ ವಿಚಾರಗಳನ್ನು ಪಸರಿಸುತ್ತಿರುವ ಅವರಿಗೆ ಮಹಾರಾಷ್ಟ್ರ ಸರ್ಕಾರದ ಬಸವ ಭೂಷಣ ಪ್ರಶಸ್ತಿಯೂ ಬಂದಿದೆ’ ಎಂದು ಹೇಳಿದರು.

‘ಬುದ್ಧ, ಬಸವ, ಅಂಬೇಡ್ಕರ್, ಜ್ಯೋತಿಬಾಫುಲೆ, ನಾರಾಯಣಗುರು, ಮಹಾತ್ಮ ಗಾಂಧೀಜಿ, ಪೆರಿಯಾರ್, ಲೋಹಿಯಾ ಅವರು ವರ್ಣಾಶ್ರಮ ಧರ್ಮದ ತಾರತಮ್ಯ ವಿರೋಧಿಸಿದರು. 800 ವರ್ಷದ ಹಿಂದೆಯೇ ಅನುಭವ ಮಂಟಪ ಸ್ಥಾಪಿಸಿ, ಜಾತಿ ಬಲವಿಲ್ಲದ ಅಲ್ಲಮಪ್ರಭು ಅವರನ್ನು ಶೂನ್ಯ ಪೀಠದ ಅಧ್ಯಕ್ಷರಾಗಿ, ಯಾವುದೇ ತಾರತಮ್ಯ ಇಲ್ಲದ ಪ್ರಜಾಪ್ರಭುತ್ವವಾದಿ ಸಭೆಗಳನ್ನು ನಡೆಸಿದರು. ಆದರೆ, ಈಗ ಜಾತಿ ಇಲ್ಲದವರಿಗೆ, ಮಹಿಳೆಯರಿಗೆ ಯಾರು ಅಧಿಕಾರ ಕೊಡುತ್ತಾರೆ’ ಎಂದು ಪ್ರಶ್ನಿಸಿದರು.

‘ಮಹಿಳೆಯರಿಗೆ ಆಸ್ತಿ ಹಕ್ಕು ನೀಡುವ ಅಂಬೇಡ್ಕರ್ರ ಹಿಂದೂ ಕೋಡ್ ಮಸೂದೆಗೆ ಸಂಸತ್ತಿನಲ್ಲಿ ಸೋಲಿಸಿದವರು, ಸತಿಸಹಗಮನ ಪದ್ಧತಿ ಪರ ಇದ್ದ ಸನಾತನವಾದಿಗಳೇ ಇಂದು ಮಹಿಳೆಯರ ಸ್ಥಾನಮಾನದ ಬಗ್ಗೆ ಮಾತನಾಡುತ್ತಾರೆ. ಸನಾತನವಾದದ ವಿರುದ್ಧ ಹೋರಾಡಿದ ಲಿಂಗಾಯತ ಧರ್ಮದ ಆಶಯಗಳನ್ನು ನಾವು ಎತ್ತಿ ಹಿಡಿಯಬೇಕಿದೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ‘ಯುವಕರು ಕೋಮುವಾದಕ್ಕೆ ಬಲಿಯಾಗದೇ ಬಸವ ತತ್ವಗಳನ್ನು ಅನುಸರಿಸಬೇಕು. ಜಾಗೃತಿ ಮೂಡಿಸಲು ಇಲಾಖೆಯು ಪ್ರತಿ ಜಿಲ್ಲೆಯಲ್ಲಿಯೂ ಬಸವ ಜಯಂತಿ ಆಚರಿಸುತ್ತಿದೆ’ ಎಂದು ಹೇಳಿದರು.

ಇದೇ ವೇಳೆ ಸಿದ್ಧಾರ್ಥನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಬಸವೇಶ್ವರ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆಯ ಶಿಲಾನ್ಯಾಸ ಅನಾವರಣಗೊಳಿಸಲಾಯಿತು. ‘ಸಾಂಸ್ಕೃತಿಕ ನಾಯಕ ಬಸವಣ್ಣ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ಸಂಸದ ಸುನಿಲ್ ಬೋಸ್, ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ಜಿ.ಟಿ.ದೇವೇಗೌಡ, ಗಣೇಶ್ ಪ್ರಸಾದ್, ವಿಜಯಾನಂದ ಕಾಶಪ್ಪನವರ್, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಕೆ.ಶಿವಕುಮಾರ್, ಡಾ.ಯತೀಂದ್ರ ಸಿದ್ದರಾಮಯ್ಯ, ಭೋವಿ ಅಭಿವೃದ್ಧಿ ನಿಗಮದ ಎಂ.ರಾಮಪ್ಪ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೆ.ಮಂಜುನಾಥ್, ನಿರ್ದೇಶಕ ಬಿ.ಎಸ್.ಮಂಜುನಾಥ ಸ್ವಾಮಿ, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.