ಮೈಸೂರು: ರಕ್ಷಣಾ ಸಚಿವಾಲಯದ ಪಿಎಸ್ಯು ಕಂಪನಿಯಾದ ಬಿಇಎಂಎಲ್ ಲಿಮಿಟೆಡ್, ದೇಶದ ಮೊದಲ ಸ್ವದೇಶಿ ನಿರ್ಮಿತ 35 ಟನ್ ಎಲೆಕ್ಟ್ರಿಕ್ ಡಂಪ್ ಟ್ರಕ್ ಅನ್ನು ಇಲ್ಲಿನ ತನ್ನ ಸಂಕೀರ್ಣದಲ್ಲಿ ಶುಕ್ರವಾರ ಅನಾವರಣಗೊಳಿಸಿತು.

ಬಿಇಎಂಎಲ್ ಲಿಮಿಟೆಡ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಾಂತನು ರಾಯ್, ಎಸ್ಬಿಯು ಮುಖ್ಯಸ್ಥರು, ನಿರ್ದೇಶಕ (ಗಣಿಗಾರಿಕೆ ಮತ್ತು ನಿರ್ಮಾಣ)ರಾದ ಸಂಜಯ್ ಸೋಮ್ ಮತ್ತು ಮೇಧಾ ಅವರು ಅನಾವರಣಗೊಳಿಸಿದರು.

‘ಮೈಸೂರಿನ ಘಟಕದಲ್ಲಿ ನಿರ್ಮಿತವಾದ ಈ ಟ್ರಕ್, ಸುಸ್ಥಿರ ಗಣಿಗಾರಿಕೆ ಮತ್ತು ಮೂಲಸೌಕರ್ಯ ಪರಿಹಾರಗಳತ್ತ ಪ್ರಮುಖ ಹೆಜ್ಜೆಯಾಗಿದೆ. ಇದರೊಂದಿಗೆ ಮಹತ್ವದ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ’ ಎಂದು ಕಂಪನಿ ತಿಳಿಸಿದೆ.

‘ಈ ಎಲೆಕ್ಟ್ರಿಕ್ ಡಂಪ್ ಟ್ರಕ್ ಅನ್ನು ಶೂನ್ಯ ಟೈಲ್ಪೈಪ್ ಹೊರಸೂಸುವಿಕೆಯೊಂದಿಗೆ ಹೆಚ್ಚಿನ ಉತ್ಪಾದಕತೆ ನೀಡಲು ವಿನ್ಯಾಸಗೊಳಿಸಲಾಗಿದೆ. ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ, ಇಂಗಾಲ ಕಡಿತ ಗುರಿಯೊಂದಿಗೆ ತಯಾರಿಸಲಾಗಿದೆ. ಹೆಚ್ಚಿನ ದಕ್ಷತೆಯ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್ (ಪಿಎಂಎಸ್ಎಂ)ನಿಂದ ಚಾಲಿತವಾಗಿದೆ. ಗಣಿಗಾರಿಕೆ ಪರಿಸರದಲ್ಲಿ ಕಾರ್ಯಾಚರಣೆಗಾಗಿ ವಿನ್ಯಾಸಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದೆ.

‘35 ಟನ್ಗಳ ಪೇಲೋಡ್ ಸಾಮರ್ಥ್ಯ ಮತ್ತು ಸುಮಾರು 60 ಟನ್ಗಳ ಒಟ್ಟು ವಾಹನ ತೂಕ ಹೊಂದಿದೆ. ಸಾಂಪ್ರದಾಯಿಕ ಡೀಸೆಲ್-ಚಾಲಿತ ವಾಹನಗಳಿಗಿಂತ ಹೆಚ್ಚಿನ ದಕ್ಷತೆ ಹೊಂದಿದೆ. 60ರಿಂದ 90 ನಿಮಿಷಗಳಲ್ಲಿ ಶೇ 80ರಷ್ಟು ಚಾರ್ಜ್ ಆಗುತ್ತದೆ’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.