ಮೈಸೂರು: ಚನ್ನಸಂದ್ರ ನಿಲ್ದಾಣದಲ್ಲಿ ಯಾರ್ಡ್ ಮರುವಿನ್ಯಾಸ ಕಾಮಗಾರಿ ಕೈಗೊಂಡಿರುವ ಕಾರಣದಿಂದ, ಕೆಲವು ರೈಲುಗಳ ಸೇವೆಯನ್ನು ಭಾಗಶಃ ರದ್ದುಪಡಿಸಲಾಗಿದೆ ಹಾಗೂ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗ ತಿಳಿಸಿದೆ.

ರೈಲು ಸಂಖ್ಯೆ 20687 ಹುಬ್ಬಳ್ಳಿ – ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ ಏ.29ರಿಂದ ಮೇ 1ರವರೆಗೆ ಯಶವಂತಪುರ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಿದೆ. ಇದು ಯಶವಂತಪುರದಲ್ಲೇ ಕೊನೆಗೊಳ್ಳಲಿದೆ.

ರೈಲು ಸಂಖ್ಯೆ 20688 ಕೆಎಸ್ಆರ್ ಬೆಂಗಳೂರು – ಹುಬ್ಬಳ್ಳಿ ಎಕ್ಸ್ಪ್ರೆಸ್ ಏ.30ರಿಂದ ಮೇ 2ರವರೆಗೆ ಕೆಎಸ್ಆರ್ ಬೆಂಗಳೂರು ಮತ್ತು ಯಶವಂತಪುರ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಕೆಎಸ್ಆರ್ ಬೆಂಗಳೂರು ಬದಲಿಗೆ ಯಶವಂತಪುರದಿಂದ ನಿಗದಿತ ವೇಳೆಗೆ ಹೊರಡಲಿದೆ.

ರೈಲುಗಳ ಮಾರ್ಗ ಬದಲಾವಣೆ

ರೈಲು ಸಂಖ್ಯೆ 12785 ಕಾಚಿಗುಡ – ಅಶೋಕಪುರಂ ಎಕ್ಸ್ಪ್ರೆಸ್ ಏ.29ರಿಂದ ಮೇ 2ರವರೆಗೆ ಯಲಹಂಕ, ಯಶವಂತಪುರ ಹಾಗೂ ಕೆಎಸ್ಆರ್ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಬೆಂಗಳೂರು ಈಸ್ಟ್ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ.

ರೈಲು ಸಂಖ್ಯೆ 12786 ಅಶೋಕಪುರಂ – ಕಾಚಿಗುಡ ಎಕ್ಸ್ಪ್ರೆಸ್ ಏ.30ರಿಂದ ಮೇ 2ರವರೆಗೆ ಕೆಎಸ್ಆರ್ ಬೆಂಗಳೂರು, ಯಶವಂತಪುರ ಹಾಗೂ ಯಲಹಂಕ ಮಾರ್ಗವಾಗಿ ಸಂಚರಿಸಲಿದೆ. ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ ಎಂದು ವಿಭಾಗೀಯ ಹಣಕಾಸು ವ್ಯವಸ್ಥಾಪಕ ಪೃಥ್ವಿ ಎಸ್. ಹುಲ್ಲತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.