ಬೆಟ್ಟದಪುರ: ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಬೆಟ್ಟದಪುರವು 130ಕ್ಕೂ ಹೆಚ್ಚು ಹಳ್ಳಿಗಳನ್ನು ಹೊಂದಿರುವ ದೊಡ್ಡ ಹೋಬಳಿ ಕೇಂದ್ರವಾಗಿದೆ. ಸಾವಿರಾರು ಜನರು ಹಳ್ಳಿಗಳಿಂದ ಬರುತ್ತಿದ್ದು, ಪ್ರಯಾಣಿಕರ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ. ಆದರೆ, ಇಲ್ಲಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಮರ್ಪಕ ಮಾಹಿತಿ ನೀಡುವ ವ್ಯವಸ್ಥೆಯೇ ಇಲ್ಲ.

ಒಂದು ಊರಿನಿಂದ ಇನ್ನೊಂದು ಕಡೆಗೆ ಹೋಗುವ ಬಸ್ಗಳ ಹಳೆಯ ವೇಳಾಪಟ್ಟಿ ಇದ್ದರೂ ಅದು ಅಪ್ಡೇಟ್ ಆಗಿಲ್ಲ. ಮಾಹಿತಿ ನೀಡುವ ಸಿಬ್ಬಂದಿಯೂ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

‘ಬಸ್ಗಳ ಆಗಮನ ಹಾಗೂ ನಿರ್ಗಮನದ ಕುರಿತು ಮಾಹಿತಿ ನೀಡುವ ಮಾರ್ಗದರ್ಶಕರು ಇಲ್ಲದೆ, ಮಹಿಳೆಯರು, ವೃದ್ಧರು ಹಾಗೂ ಗ್ರಾಮೀಣ ಭಾಗಗಳಿಂದ ಬಂದ ಜನರು ಬಸ್ಗಳಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಸಾರ್ವಜನಿಕರು ದೂರಿದ್ದಾರೆ.

‘ಬಸ್ ನಿಲ್ದಾಣದೊಳಗೆ ಹಾಗೂ ಸುತ್ತ ಸ್ವಚ್ಛತೆ ಕೊರತೆ ಇದ್ದು, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಶೌಚಾಲಯ ಹಾಗೂ ಇತರ ಮೂಲ ಸೌಕರ್ಯಗಳ ಅಭಾವದಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ನಿಲ್ದಾಣದ ಸುತ್ತ ಕಸ ಸಂಗ್ರಹವಾಗಿದ್ದು, ದುರ್ವಾಸನೆ ಬೀರುವ ಪರಿಸ್ಥಿತಿ ಉಂಟಾಗಿದೆ’ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

‘ಪ್ರತಿ ದಿನ ಸಾವಿರಾರು ಜನರು ಬರುವ ಈ ಬಸ್ ನಿಲ್ದಾಣದಲ್ಲಿ ಕನಿಷ್ಠ ಮೂಲ ಸೌಕರ್ಯಗಳನ್ನಾದರೂ ಕಲ್ಪಿಸಬೇಕು. ಮಹಿಳೆಯರು ಮತ್ತು ವೃದ್ಧರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ತಕ್ಷಣ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿದಿನ ಇಲ್ಲಿ ಪ್ರಯಾಣಿಸುವ ಕೊಣಸೂರು ಗ್ರಾಮದ ಮಂಜುಳಾ ಒತ್ತಾಯಿಸಿದರು.

ಬಸ್ ನಿಲ್ದಾಣದ ಸಮಸ್ಯೆಗಳಬಗ್ಗೆ ಪ್ರತಿಕ್ರಿಯೆ ಪಡೆಯಲು ಸಂಚಾರ ನಿಯಂತ್ರಕರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಲಭಿಸಿಲ್ಲ. ನಿಲ್ದಾಣದಲ್ಲಿರುವ ಕಾರ್ಯಾಲಯವೂ ಬೀಗ ಹಾಕಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-38-1936345239

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.