ಮೈಸೂರು: ಜೀವಧಾರ ರಕ್ತ ನಿಧಿ ಕೇಂದ್ರ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಮತ್ತು ಬ್ಲಡ್ ಆನ್ ಕಾಲ್ ಕ್ಲಬ್ ವತಿಯಿಂದ ಏ.5ರಂದು ಬೆಳಿಗ್ಗೆ 10.30ಕ್ಕೆ ನಗರದ ರೈಲು ನಿಲ್ದಾಣ ಮುಂಭಾಗದ ಜೆ.ಕೆ. ಮೈದಾನದ ಸಭಾಂಗಣದಲ್ಲಿ ‘ರಕ್ತ ದಾನಿಗಳ ಹಬ್ಬ’ ಆಯೋಜಿಸಲಾಗಿದೆ.

15ಕ್ಕೂ ಹೆಚ್ಚು ಬಾರಿ ಸ್ವಯಂ ಪ್ರೇರಿತವಾಗಿ ರಕ್ತ ದಾನ ಮಾಡಿದ 300ಕ್ಕೂ ಹೆಚ್ಚು ಸ್ವಯಂ ಪ್ರೇರಿತ ರಕ್ತದಾನಿಗಳನ್ನು ಸನ್ಮಾನಿಸಲಾಗುವುದು. ಈ ಕಾರ್ಯಕ್ರಮದ ಪೋಸ್ಟರ್ಗಳನ್ನು ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಪೀಠಾಧಿಪತಿ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ಬಿಡುಗಡೆ ಮಾಡಿದರು.

‘ರಕ್ತ ದಾನ ಅತ್ಯಂತ ಶ್ರೇಷ್ಠವಾದುದು. ಅದು ಜೀವ ರಕ್ಷಕ ಸಾಧನ. ಜೀವವನ್ನು ಉಳಿಸಬಲ್ಲದು. ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕು’ ಎಂದರು.

ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಸಾಮಾಜಿಕ ಹೋರಾಟಗಾರ ವಿಕಾಶ್ ಶಾಸ್ತ್ರಿ, ಬ್ಲಡ್ ಆನ್ ಕಾಲ್ ಕ್ಲಬ್ ಮೈಸೂರು ದೇವೇಂದ್ರ ಪರಿಹಾರಿಯ, ಆನಂದ್, ನವೀನ್, ರಾಮಚಂದ್ರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.