ಮೈಸೂರು: ನಗರದ ವರ್ತುಲ ರಸ್ತೆಯ ಮಾನಸಿ ನಗರದ ಬಳಿ ಕಾರು ನಿಯಂತ್ರಣ ತಪ್ಪಿ ಎಲೆಕ್ಟ್ರಿಕ್ ಕಂಬಕ್ಕೆ ಡಿಕ್ಕಿಯಾಗಿದ್ದು, ವಿದ್ಯಾರ್ಥಿ ಮೃತಪಟ್ಟಿದ್ದಾನೆ.

ವಿಟಿಯು ಕಾಲೇಜಿನ ಪ್ರಥಮ ವರ್ಷದ ಎಂ.ಟೆಕ್ ಓದುತ್ತಿದ್ದ, ರಾಯಚೂರು ನಿವಾಸಿ ಸುಮಿತ್ (23) ಮೃತ ವಿದ್ಯಾರ್ಥಿ. ಆತನ ಸ್ನೇಹಿತರಾದ ಧನಂಜಯ, ರೇವಂತ್, ಪವನ್ ಮತ್ತು ಪ್ರಜ್ವಲ್ಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಮಂಗಳವಾರ ರಾತ್ರಿ 8ಕ್ಕೆ ಸಾತಗಳ್ಳಿ ಕಡೆಗೆ ವಿದ್ಯಾರ್ಥಿಗಳು ಅತಿಯಾದ ವೇಗದಲ್ಲಿ ಕಾರು ಚಲಾಯಿಸಿಕೊಂಡು ಬಂದಿದ್ದು, ಮಾನಸಿ ನಗರದ ಬಳಿ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿಯಾಗಿ ಬಳಿಕ ಎಲೆಕ್ಟ್ರಿಕ್ ಕಂಬಕ್ಕೆ ಗುದ್ದಿತ್ತು. ಸ್ಥಳೀಯರು ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಿದ್ದಾರ್ಥನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಹಾಕಿಕೊಂಡು ವೈದ್ಯ ಆತ್ಮಹತ್ಯೆ

ಮೈಸೂರು: ಎನ್.ಆರ್. ಮೊಹಲ್ಲಾದ ಸುಭಾಷ್ ನಗರದಲ್ಲಿ ಕೆ.ಆರ್. ಆಸ್ಪತ್ರೆಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಡಾ. ಸಯ್ಯದ್ ಅಹಮದ್ ಸಲೀಂ (49) ಮನೆಯ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಕೊಪ್ಪಳದಲ್ಲಿ ಎಸ್.ಆರ್ (ಸೀನಿಯರ್ ರೆಸಿಡೆನ್ಸ್) ಆಗಿ ಕರ್ತವ್ಯದಲ್ಲಿದ್ದ ಸಲೀಂ, ಕೆ.ಆರ್. ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬುಧವಾರ ಬೆಳಿಗ್ಗೆ 4ಕ್ಕೆ ರಂಜಾನ್ ಉಪವಾಸದ ಅಂಗವಾಗಿ ಕುಟುಂಬದೊಂದಿಗೆ ಆಹಾರ ಸ್ವೀಕರಿಸಿದ್ದರು. ಬೆಳಿಗ್ಗೆ ಅವರ ಕೊಠಡಿಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸಲೀಂ ದಂಪತಿಗೆ ಮದುವೆಯಾಗಿ 19 ವರ್ಷವಾದರೂ ಮಕ್ಕಳಿರಲಿಲ್ಲ. ಹೀಗಾಗಿ ಈಚೆಗೆ ಮಗು ದತ್ತು ಪಡೆದಿದ್ದರು. ಕೆಲಸದ ವಿಚಾರವಾಗಿಯೂ ಮಾನಸಿಕವಾಗಿ ನೊಂದಿದ್ದರು ಎಂಬ ಮಾಹಿತಿಯನ್ನು ಕುಟುಂಬದವರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ನರಸಿಂಹರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ರೇಡಿಂಗ್: ವೈದ್ಯರಿಗೆ ₹ 22 ಲಕ್ಷ ವಂಚನೆ

ಮೈಸೂರು: ವಿಜಯನಗರ ಎರಡನೇ ಹಂತದ ನಿವಾಸಿಯಾದ ವೈದ್ಯರೊಬ್ಬರಿಗೆ ಟ್ರೇಡಿಂಗ್ ನೆಪದಲ್ಲಿ ಅಪರಿಚಿತರು ₹22 ಲಕ್ಷ ವಂಚಿಸಿದ್ದಾರೆ.

‘ವಿಜಯ್ ಲೋದಾ ಎಂಬ ವ್ಯಕ್ತಿ ನನ್ನನ್ನು 19 ಸ್ಟಾಕ್ ಮಾರ್ಕೆಟ್ ಸ್ಟೇಬಲ್ ಪ್ರಾಫಿಟ್ ಗ್ರೂಪ್ ಎಂಬ ವಾಟ್ಸ್ ಆ್ಯಪ್ ಗುಂಪಿಗೆ ಸೇರಿಸಿದ್ದರು. ಅಲ್ಲಿ ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಿ ಹೆಚ್ಚಿನ ಲಾಭಾಂಶದ ಆಮಿಷ ತೋರಿಸಿ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗೆ ₹ 22 ಲಕ್ಷ ಹೂಡಿಕೆ ಮಾಡಿಸಿದರು. ನಂತರ ಖಾತೆಯು ಫ್ರೀಜ್ ಆಗಿದೆ. ಠೇವಣಿಯ ಶೇ. 40 ಹಣ ಪಾವತಿಸಿದರೆ, ಹೂಡಿಕೆ ಹಣ ಬಿಡುಗಡೆ ಆಗುವುದಾಗಿ ಹೇಳಿದಾಗ ವಂಚನೆಗೊಳಗಾಗಿರುವುದು ತಿಳಿಯಿತು’ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.