ಮೈಸೂರು: ‘ವಿದ್ಯುತ್ ವಿತರಣಾ ವ್ಯವಸ್ಥೆ ಬಲಪಡಿಸುವ ಜೊತೆಗೆ ಆದಾಯ ಸಂಗ್ರಹ ವೃದ್ಧಿಗೂ ಕಾರ್ಯಪ್ರವೃತ್ತರಾಗಬೇಕು’ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಕಡಕೊಳದ ಕೆಇಬಿ ಎಂಜಿನಿಯರ್ಗಳ ಸಂಘದ ಸಭಾಂಗಣದಲ್ಲಿ ಸೋಮವಾರ ನಡೆದ ‘ಸೆಸ್ಕ್’ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ವಿದ್ಯುತ್ ವಿತರಣೆಯಲ್ಲಿ ಏರಿಕೆ ಕಂಡುಬಂದರೆ ಆದಾಯವೂ ಹೆಚ್ಚಾಗಬೇಕು. ಸರ್ಕಾರದ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು. ಗ್ರಾಹಕರಿಗೆ ಅಡಚಣೆ ರಹಿತ ವಿದ್ಯುತ್ ಪೂರೈಕೆ ಜೊತೆಗೆ ಕಂದಾಯ ಸಂಗ್ರಹಕ್ಕೂ ಗಮನಹರಿಸಬೇಕು. ಗಂಗಾ ಕಲ್ಯಾಣ ಯೋಜನೆ ಅನುಷ್ಠಾನದಲ್ಲಿ ವಿಳಂಬ ಆಗದಂತೆ ನೋಡಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

‘ಕುಡಿಯುವ ನೀರು ಪೂರೈಕೆಯಲ್ಲಿ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು. ಇದಕ್ಕಾಗಿ, ವಿಭಾಗ ಹಾಗೂ ಉಪ ವಿಭಾಗಕ್ಕೆ ಭೇಟಿ ನೀಡಿ ನೈಜ ಪರಿಸ್ಥಿತಿ ಅರಿತುಕೊಳ್ಳಬೇಕು’ ಎಂದು ‘ಸೆಸ್ಕ್’ ಎಂಡಿಗೆ ಸೂಚಿಸಿದರು.

‘ಸೆಸ್ಕ್’ ವ್ಯವಸ್ಥಾಪಕ ನಿರ್ದೇಶಕಿ ಎಂ.ಎಸ್. ಅರ್ಚನಾ, ‘ಕುಸುಮ್-ಬಿ’ ಯೋಜನೆ ನಿಧಾನಗತಿಯಲ್ಲಿ ಪ್ರಗತಿ ಕಾಣುತ್ತಿದೆ. ‘ಕುಸುಮ್-ಸಿ’ ಯೋಜನೆಯಲ್ಲಿ ಕೆಲವೆಡೆ ಭೂಮಿ ನೀಡಲು ರೈತರು ನಿಗದಿಗಿಂತಲೂ ಹೆಚ್ಚಿನ ಲೀಸ್(ಭೋಗ್ಯ) ಮೊತ್ತ ಕೇಳುತ್ತಿರುವುದರಿಂದ ಪ್ರಗತಿ ನಿಧಾನವಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ‘ಸೆಸ್ಕ್’ ತಾಂತ್ರಿಕ ನಿರ್ದೇಶಕರಾದ ಶರಣಮ್ಮ ಜಂಗಿನ, ‘ಸೆಸ್ಕ್’ ಮುಖ್ಯ ಎಂಜಿನಿಯರ್ ಎಲ್. ಲೋಕೇಶ್ ಇದ್ದರು.

400 ಕೆ.ವಿ. ಉಪ ಕೇಂದ್ರ ಪರಿಶೀಲನೆ

ಕಡಕೊಳದಲ್ಲಿ ಕೆಪಿಟಿಸಿಎಲ್ನಿಂದ ನಿರ್ಮಿಸುತ್ತಿರುವ 400 ಕೆವಿ ಉಪ ಕೇಂದ್ರಕ್ಕೆ ಭೇಟಿ ನೀಡಿದ ಗೌರವ್ ಗುಪ್ತ, ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.

ಕಾಮಗಾರಿ ನಿಗದಿತ ವೇಳೆಗೆ ಪೂರ್ಣಗೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಟೆಂಡರ್ ಪಡೆದಿರುವ ಏಜೆನ್ಸಿಯವರು ಕ್ರಮವ ವಹಿಸಬೇಕು ಎಂದು ಸೂಚಿಸಿದರು.

ಕೆಪಿಟಿಸಿಎಲ್ ಯೋಜನೆಗಳ ಅನುಷ್ಠಾನಕ್ಕೆ 18 ಕಡೆ ಅಗತ್ಯವಿದ್ದ ಸರ್ಕಾರಿ, ಖಾಸಗಿ ಭೂಮಿಯನ್ನು ಕೆಪಿಟಿಸಿಎಲ್ಗೆ ಹಸ್ತಾಂತರಿಸಲು ಸಹಕರಿಸಿದ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರನ್ನು ಶ್ಲಾಘಿಸಿದರು. 400 ಕೆ.ವಿ. ಉಪ ಕೇಂದ್ರ ಹಾಗೂ ಸಂಬಂಧಿಸಿದ ಪ್ರಸರಣ ಮಾರ್ಗಗಳ ನಿರ್ಮಾಣಕ್ಕೆ ಅಡಚಣೆಯಾದರೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಹಕಾರ ಪಡೆಯುವಂತೆ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಸೂಚಿಸಿದರು.

ಕೆಪಿಟಿಸಿಎಲ್ ನಿರ್ದೇಶಕ (ಯೋಜನೆ) ಗಿರಿಧರ್ ಕುಲಕರ್ಣಿ, ಎಸ್ಇ ರಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.