ಸರಗೂರು: ನುಗು ವನ್ಯಜೀವಿ ವಲಯದ ಕಾಡಿನಿಂದ ಹೊರ ಬಂದ ಕಾಡಾನೆ ಅರಣ್ಯ ಇಲಾಖೆ ವಾಹನದ ಮೇಲೆ ಭಾನುವಾರ ದಾಂಧಲೆ ನಡೆಸಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಡಾನೆಗಳನ್ನು ನುಗು ಜಲಾಶಯದ ಮೀನು ಮರಿ ಉತ್ಪಾದನಾ ಕೇಂದ್ರದ ಮೂಲಕ ಮತ್ತೆ ಕಾಡಿಗೆ ಓಡಿಸುವಾಗ ಅಡ್ಡಲಾಗಿ ಬಂದ ಇಲಾಖೆ ವಾಹನಕ್ಕೆ ಬಲವಾಗಿ ಗುದ್ದಿದೆ. ಅದೃಷ್ಟವಶಾತ್ ವಾಹನ ಬಲ ಬದಿ ಸ್ವಲ್ಪ ಜಖಂಗೊಂಡಿದೆ. ಆದರೆ, ವಾಹನ ಚಾಲಕನಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹಲಸೂರು ಜಮೀನುಗಳಿಗೆ ನುಗ್ಗಿ ಬೆಳೆ ತಿಂದು ನಾಶಗೊಳಿಸಿದ್ದವು. ಮೀನು ಮರಿ ಉತ್ಪಾದನಾ ಕೇಂದ್ರದಲ್ಲಿ ಮರಗಳ ತೋಪು ಇರುವುದರಿಂದ ಆ ಮೂಲಕ ನುಗು ಜಲಾಶಯ ಹಾದು ಹಳೇಹೆಗ್ಗುಡಿಲು ಗ್ರಾಮದ ಹತ್ತಿರವಿರುವ ಕಾಡಿನಲ್ಲಿ ತಗ್ಗುತ್ತಿದ್ದವು. ಕಾಡಾನೆಗಳನ್ನು ನಿಯಂ ತ್ರಿಸಲು ಮುಂದಾದಾಗ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಆಕ್ರೋಶ: ಈ ಭಾಗದಲ್ಲಿ ಕಾಡಿ ನಿಂದ ಹೊರ ಬಂದ ಕಾಡಾನೆಗಳು ಪ್ರತಿದಿನ ಜಲಾಶಯ ಈಜಿಕೊಂಡು ಬರುತ್ತಿವೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಕ್ರಮ ವಹಿಸುತ್ತಿಲ್ಲ. ಮೇಲಾಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ವಹಿಸಬೇಕೆಂದು ರೈತರು ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-38-768805301

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.