ಎಚ್.ಡಿ. ಕೋಟೆ : ಒಂದು ವರ್ಷದಿಂದ ಮೇಟಿಕುಪ್ಪೆ ಅರಣ್ಯ ವಲಯದಲ್ಲಿ ಹುಲಿ ಮತ್ತು ಆನೆಗಳ ದಾಳಿ ನಡೆಯದೇ ಇರುವುದಕ್ಕೆ ಇಲ್ಲಿನ ಅರಣ್ಯ ಸಿಬ್ಬಂದಿಯ ಸೇವೆಯೇ ಕಾರಣ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಬೊಮ್ಮಲಾಪುರ ಬೂದನೂರು ಗ್ರಾಮದ ಸಂಪರ್ಕ ರಸ್ತೆಯಲ್ಲಿನ ಸೇತುವೆ ಬಳಿಯಿಂದ ಬಸವರಾಜನಕಟ್ಟೆವರೆಗೆ ಅರಣ್ಯದಂಚಿನ 2.9 ಕಿ.ಮೀ. ರೈಲ್ವೇ ಬ್ಯಾರಿಕೇಡ್ ಅಳವಡಿಸಲು ₹ 5 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಬೊಮ್ಮಲಾಪುರ ಹಾಡಿಯ ಆದಿವಾಸಿಗಳಿಗೆ 10 ಮನೆಗಳು ಮಂಜೂರಾಗಿದ್ದು, ಅರಣ್ಯ ಇಲಾಖೆ ಅನುಮತಿಗಾಗಿ ಮತ್ತೊಮ್ಮೆ ಪರಿಶೀಲನೆ ನಡೆಸಲು ಮನವಿಮಾಡಿದರು. 9 ಗ್ರಾಮಗಳ 19 ಕೆರೆಗಳನ್ನು ತುಂಬಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.

ಡಿಎಫ್ಒ ಸೀಮಾ ಮಾತನಾಡಿ, ರೈಲ್ವೆ ಬ್ಯಾರಿಕೇಡ್ ನಿಂದ ಕಾಡು ಪ್ರಾಣಿಗಳ ಉಪಟಳ ಉಪಟಳ ಶೇ 90 ಕಡಿಮೆಯಾಗಲಿದೆ. ತಾಲ್ಲೂಕಿನಲ್ಲಿ 5.4 ಕಿ.ಮೀ. ಕಾಮಗಾರ ಅಗತ್ಯವಿದೆ ಎಂದರು. ಬೂದನೂರು ಗ್ರಾಮದಲ್ಲಿ ಒಂಟಿ ಕಾಡಾನೆ ಹಾನಿ ಮಾಡುತ್ತಿದ್ದು, ಅದನ್ನು ಸೆರೆಹಿಡಿಯಲು ರೈತ ಮುಖಂಡ ಉಡ ನಾಗರಾಜು ಒತ್ತಾಯಿಸಿದರು.

ಎಸಿಎಫ್ ಲಕ್ಷ್ಮಿನಾರಾಯಣ್, ಬಿ.ವಿ. ಬಸವರಾಜು, ಸೌಮ್ಯ, ಕಾಳೇಗೌಡ, ಸುರೇಶ್, ವಿಎಸ್ಎಸ್ಎನ್ಅಧ್ಯಕ್ಷ ಚಂದ್ರಶೇಖರ್, ಅಜಾರ್, ಆರ್.ಎಫ್.ಒ ವಿನೋದ್ ಗೌಡ, ನಾಗರಾಜು, ರವಿಕುಮಾರ್, ಕಾಳಕಲ್ಕರ್, ಮುರುಳಿ, ಬೆಟ್ಟಸ್ವಾಮಿ, ಪಟೇಲ್ ಕಾಳಿಂಗೇಗೌಡ, ರಾಜೇಗೌಡ, ಉಡನಾಗರಾಜು, ರವಿವರ್ಮ, ನಂಜುಂಡೇಗೌಡ, ಆನಂದ, ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-38-17186985

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.