ಕಾಯಕಯೋಗಿ ಬಸವೇಶ್ವರರ ಜಯಂತ್ಯುತ್ಸವ ನಡೆಯಲಿದ್ದು, ಇದರ ಅಂಗವಾಗಿ ತಾಲ್ಲೂಕಿನ ಹಂಚೀಪುರ ಗ್ರಾಮದ ಗುರುಮಲ್ಲೇಶ್ವರಪಟ್ಟದ ಮಠದ ಎದುರು ಬುಧವಾರ ಪ್ರಚಾರ ರಥಕ್ಕೆ ಚಾಲನೆ ನೀಡಲಾಯಿತು.

ಮಠದ ಚನ್ನಬಸವ ಸ್ವಾಮೀಜಿ ಅವರು ರಥಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದರು.

‘ಸರಗೂರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಬಸವ ಬಳಗ ಯುವ ಘಟಕ ಬಳಗಗಳ ಒಕ್ಕೂಟದ ವತಿಯಿಂದ ಬಸವೇಶ್ವರ ಜಯಂತ್ಯುತ್ಸವ ನಡೆಯಲಿದ್ದು, ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಒಂದು ವಾರದಿಂದಲೇ ತಾಲ್ಲೂಕುಗಳಲ್ಲಿ ಪ್ರಚಾರ ನಡೆಸಲಾಗುತ್ತದೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ವೀರಭದ್ರಪ್ಪ ತಿಳಿಸಿದರು.

ಹಂಚೀಪುರ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ‘ವೀರಶೈವ ಸಮಾಜದ ಏಳಿಗೆಗಾಗಿ ಬಸವಣ್ಣ ಶಕ್ತಿಮೀರಿ ದುಡಿದಿದ್ದಾರೆ. ಸಮ ಸಮಾಜದ ಕನಸು ಕಂಡವರು. ಮೂಢನಂಬಿಕೆಗಳನ್ನು ತೊಲಗಿಸಲು ಹೋರಾಟ ನಡೆಸಿದರು. ಕಾಯಕದಿಂದಲೇ ಕೈಲಾಸ ಕಂಡವರು. ಸಮಾಜದಲ್ಲಿ ಲಿಂಗ ಅಸಮಾನತೆ, ಜಾತಿಧರ್ಮದ ವಿರುದ್ಧ ಹೋರಾಡಿದ ಬಸವಣ್ಣ ಸಮಾಜಕ್ಕೆ ಅನೇಕ ಕೊಡುಗೆ ನೀಡಿದ್ದಾರೆ’ ಎಂದು ಸ್ಮರಿಸಿದರು.

ಹಂಚೀಪುರ ಪಟ್ಟದ ಮಠದ ತೋಂಟದಾರ್ಯ ಸ್ವಾಮೀಜಿ, ‘ದೇಶದ ಅತ್ಯುತ್ತಮ ಸಮಾಜ ಸೇವಕರಲ್ಲಿ ಒಬ್ಬರಾದ ಬಸವಣ್ಣ ಅವರು ಮಾದಾರ ಚನ್ನಯ್ಯ ಆರಂಭಿಸಿದ ಭಕ್ತಿ ಆಂದೋಲನವನ್ನು ಮುಂದುವರಿಸಿದರು. ವಚನಗಳ ಮೂಲಕ ಸಮಾಜಕ್ಕೆ ಸಂದೇಶವನ್ನು ಸಾರಿದರು. ಆದರೆ, ಇತ್ತೀಚಿಗೆ ಬಸವಣ್ಣ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಿರುವುದು ನೋವಿನ ಸಂಗತಿ. ಬಸವಣ್ಣನವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸಲು ಬಸವ ಜಯಂತಿ ಆಚರಿಸಲಾಗುತ್ತಿದೆ’ ಎಂದು ಹೇಳಿದರು.

ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಹಂಚೀಪುರ ಗಣಪತಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ಅಧ್ಯಕ್ಷ ಪಿ. ನಂದೀಶ್, ಪ್ರಧಾನ ಕಾರ್ಯದರ್ಶಿ ಗುರುಸ್ವಾಮಿ ಮನುಗನಹಳ್ಳಿ, ಕಾರ್ಯದರ್ಶಿ ತೆಲುಗು ಮಸಹಳ್ಳಿ ಬಸವರಾಜು, ಉಪಾಧ್ಯಕ್ಷ ಡಿ. ಸಿ. ಸಿದ್ದಪ್ಪ, ಕೋಶಾಧ್ಯಕ್ಷ ಶಿವಪ್ರಕಾಶ್, ನಗರ ಘಟಕದ ಅಧ್ಯಕ್ಷ ಎಸ್.ಎನ್. ಮೋಹನ್ ಕುಮಾರ್, ಯುವ ಘಟಕದ ಉಪಾಧ್ಯಕ್ಷ ಶಿವಕುಮಾರ್, ಮುಖಂಡರಾದ ಕೆ.ಎಸ್.ರಾಜಪ್ಪ, ಪರಶಿವಮೂರ್ತಿ, ಬಸವಣ್ಣ, ಬಾಡಗ ಮಾದಪ್ಪ, ಸಿದ್ದಪ್ಪ, ಇಂದ್ರಪ್ಪ ಡಿ.ಎಸ್.ಮಹದೇವಸ್ವಾಮಿ, ಗುರುಸ್ವಾಮಿ, ನಿಜಗುಣ, ಎಸ್.ಎನ್. ಮಹದೇವಪ್ಪ, ಶಿವಪ್ಪ, ವಿಕೇಶ್, ಗಿರೀಶ್, ಸುರೇಶ್, ಉಮೇಶ್, ಬೊಗಮಲ್ಲಪ್ಪ, ನಿಂಗರಾಜು, ಶಿವಕುಮಾರ್, ಡಿ.ಸಿ.ಮಹೇಶ್, ಬಸವಣ್ಣ, ರಾಜೇಂದ್ರ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-38-1475536632

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.