ಸರಗೂರು: ತಾಲ್ಲೂಕಿನ ಹಾಲುಗಡು, ಇಟ್ನ ಗ್ರಾಮದಲ್ಲಿ ಮೂರು ದಿನಗಳು ನಡೆದ ಚಿಕ್ಕದೇವಮ್ಮನ ಜಾತ್ರಾ ಮಹೋತ್ಸವದಲ್ಲಿ ಸಂಪೂರ್ಣ ಪ್ರಾಣಿ ಬಲಿ ನಿಷೇಧ ಮಾಡಿದ್ದಕ್ಕೆ ಭಕ್ತರು, ಸಹಕರಿಸಿದ ತಾಲ್ಲೂಕು ಆಡಳಿತ, ಇಟ್ನ ಗ್ರಾಮಸ್ಥರಿಗೆ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಕೃತಜ್ಞತೆ ಸಲ್ಲಿಸಿದ್ದಾರೆ.

ಜಾತ್ರಾ ಸಂದರ್ಭದಲ್ಲಿ ಇಟ್ನಾ ಗ್ರಾಮದ ಕಪಿಲ ನದಿಯ ದಡದಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಭಕ್ತಾದಿಗಳು ಸಾಮೂಹಿಕವಾಗಿ ಸಸ್ಯಾಹಾರ ಭೋಜನವನ್ನು ಪ್ರಸಾದ ರೂಪದಲ್ಲಿ ಸೇವಿಸಿ ಧನ್ಯತಾಭಾವ ವ್ಯಕ್ತಪಡಿಸಿರುವುದು ಐತಿಹಾಸಿಕ ಮೈಲಿಗಲ್ಲು ಎಂದರು.

‘ದೇವಿಯ ಮೆರವಣಿಗೆ ಸಂದರ್ಭದಲ್ಲಿ, ರಸ್ತೆ ಹಾಗೂ ಅಕ್ಕಪಕ್ಕದ ಜಮೀನು, ಹಾಲುಗಡದ ಮೈದಾನ, ಕಪಿಲ ನದಿಯ ದಡದಲ್ಲಿ ಎಲ್ಲಿಯೂ ಯಾವುದೇ ಪ್ರಾಣಿಗಳ ಬಲಿ ನಡೆಯಲಿಲ್ಲ. ಬದಲಾಗಿ ತೆಂಗಿನಕಾಯಿ, ಎಳನೀರು ಅಭಿಷೇಕ, ಅರಶಿನ ಕುಂಕುಮ ಅರ್ಚನೆ ಮೂಲಕ ದೇವಿಗೆ ಪೂಜೆ ಸಲ್ಲಿಸಲಾಗಿದೆ. ಸ್ವತಃ ಭಕ್ತರೇ ಸ್ವಯಂಪ್ರೇರಣೆಯಿಂದ ಪ್ರಾಣಿಬಲಿ ಪದ್ಧತಿ ಕೈಬಿಟ್ಟು ಅಹಿಂಸಾತ್ಮಕವಾಗಿ ಧರ್ಮಾರಾಧನೆ ನಡೆಸಿರುವುದು ವಿಶೇಷ’ ಎಂದರು.

ದಯಾನಂದ ಸ್ವಾಮೀಜಿ ಮತ್ತು ತಂಡ ಅಹಿಂಸಾ ಪ್ರಾಣಿದಯಾ ಸಂದೇಶ ಯಾತ್ರೆಯ ಮೂಲಕ ಸರಗೂರು, ಕೋಟೆ ತಾಲ್ಲೂಕಿನ ವಿವಿಧ ಊರುಗಳಲ್ಲಿ ಜಾತ್ರಾ ಪರಿಸರದಲ್ಲಿ ಪ್ರಾಣಿ ಬಲಿ ತಡೆ ಕುರಿತು ಜಾಗೃತಿ ಮೂಡಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-38-1409166387

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.