ಮೈಸೂರು: ಇಲ್ಲಿನ ವಿಜಯನಗರದ ಜಗನ್ನಾಥ್ ಸೆಂಟರ್ ಫಾರ್ ಆರ್ಟ್ ಅಂಡ್ ಕಲ್ಚರ್ ಸೆಂಟರ್ (ಜೆಸಿಎಸಿ)ಯಲ್ಲಿ ಮೇ 8ರಿಂದ 10ರವರೆಗೆ ಹೆಗ್ಗೋಡು-ಭೀಮನಕೋಣೆಯ ‘ಚರಕ’ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದಿಂದ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ, ಕೊಡು- ಕೊಳ್ಳುವವರ ಸಮಾವೇಶ ಆಯೋಜಿಸಲಾಗಿದೆ.

ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆಯ ‘ಪವಿತ್ರವಸ್ತ್ರ’ ಯೋಜನೆಯಡಿ ಹಮ್ಮಿಕೊಂಡಿರುವ ಮೇಳವನ್ನು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮೇ 8ರಂದು ಮಧ್ಯಾಹ್ನ 12ಕ್ಕೆ ಉದ್ಘಾಟಿಸುವರು. ಅತಿಥಿಯಾಗಿ ಮೈಸೂರು ಬುಕ್ಕ್ಲಬ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕಿ ಶುಭಾ ಸಂಜಯ್ ಅರಸ್ ಭಾಗವಹಿಸುವರು. ‘ಚರಕ’ದ ಸಂಸ್ಥಾಪಕ, ರಂಗಕರ್ಮಿ ಪ್ರಸನ್ನ ಪಾಲ್ಗೊಳ್ಳುವರು.

ಸಮಾರಂಭದಲ್ಲಿ ಮಠಾಧೀಶರು ತೊಡುವ ಕಷಾಯವಸ್ತ್ರ ಬಿಡುಗಡೆ, ಬೇವು ಮತ್ತು ಅರಿಸಿನ ಬಣ್ಣದ ದ್ಧ ಉಡುಪುಗಳು ಅನಾವರಣಗೊಳ್ಳಲಿವೆ. ‘ಚರಕ’ದ ನೈಸರ್ಗಿಕ ಬಣ್ಣದ ಕೈಮಗ್ಗದ ಬಟ್ಟೆಗಳು, ಸಿದ್ಧ ಉಡುಪುಗಳು, ಉತ್ತರಕರ್ನಾಟಕದ ಕೈಮಗ್ಗದ ಸೀರೆಗಳು, ನೈಸರ್ಗಿಕ ಬಣ್ಣದ ಬೆಡ್ ಸ್ಪ್ರೆಡ್, ಜಮ್ದಾನಿ ಸೀರೆ, ಕುರ್ತಾ, ಶರ್ಟ್ ಹಾಗೂ ಗೃಹಾಲಂಕಾರ ಉಡುಪುಗಳು ದೊರೆಯಲಿವೆ.

ಮೇಳವು ಬೆಳಿಗ್ಗೆ 10.30ರಿಂದ ಸಂಜೆ 7.30ರವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ. ಮಾಹಿತಿಗೆ 63638 85215/ 74111 20862 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.