ಧರ್ಮಾಪುರ: ಕಾರ್ತಿಕ ಮಾಸದ ಕೊನೆಯ ಸೋಮವಾರ ಇಲ್ಲಿಯ ಚೆನ್ನಕೇಶವ ಸ್ವಾಮಿಯ ಜಾತ್ರಾ ಮಹೋತ್ಸವ ಹಾಗೂ ಓಕುಳಿ ನಡೆಯಲಿದ್ದು, ಮಂಗಳವಾರ ಈಶ್ವರ ಹಾಗೂ ಮಾದೇಶ್ವರ ಸ್ವಾಮಿಯ ಕೊಂಡೋತ್ಸವಕ್ಕೆ ಸಿದ್ಧತೆಗಳು ನಡೆದಿವೆ.

ಹುಣಸೂರು ತಾಲ್ಲೂಕು ಕೇಂದ್ರದಿಂದ 15 ಕಿ.ಮೀ ದೂರದಲ್ಲಿರುವ ಧರ್ಮಪುರದಲ್ಲಿ ಇತಿಹಾಸ ಪ್ರಸಿದ್ಧ ಹೊಯ್ಸಳರ ದೊರೆ ವಿಷ್ಣುವರ್ಧನ ಮಗ ವೀರನರಸಿಂಹ ಕ್ರಿ.ಶ. 1162 ರಲ್ಲಿ ಚನ್ನಕೇಶವ ದೇವಾಲಯವನ್ನು ಸ್ಥಾಪಿಸಿದ, ಈ ಗ್ರಾಮದಲ್ಲಿ ಧಾನ ಧರ್ಮಗಳನ್ನು ಹೆಚ್ಚಾಗಿ ಮಾಡುತ್ತಿದ್ದರಿಂದ ಧರ್ಮಾಪುರ ಗ್ರಾಮ ಎಂದು ಕರೆಯಲಾಗಿದೆ ಎಂದು ಇಲ್ಲಿ ದೊರೆತಿರುವ ಶಾಸನಗಳಿಂದ ತಿಳಿದು ಬರುತ್ತದೆ.

ಹೊಯ್ಸಳರು ನಿರ್ಮಿಸಿದ ದೇವಾಲಯಗಳಲ್ಲಿ ಎಲ್ಲಾ ಪ್ರವಾಸಿಗರು ಬೇಲೂರು, ಹಳೇಬೀಡಿನ ದೇಗುಲಗಳ ವಾಸ್ತುಶಿಲ್ಪ ನೋಡಲು ಹೋಗುತ್ತಾರೆ. ಮೈಸೂರಿನಲ್ಲಿರುವ ಹೊಯ್ಸಳರ ವಾಸ್ತುಶಿಲ್ಪದ ಧರ್ಮಾಪುರದ ಚನ್ನಕೇಶವ ದೇವಾಲಯವನ್ನು ಸರ್ಕಾರ ಮತ್ತಷ್ಟು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ರೂಪಿಸಬೇಕೆಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರತತ್ವ ಅಧ್ಯಯನ ಸಂಶೋಧನಾ ವಿಭಾಗದ ಅಧ್ಯಕ್ಷರು ಹಾಗೂ ಪ್ರಾಧ್ಯಾಪಕರಾದ ಪ್ರೊ. ಶೆಲ್ವ ಪಿಳ್ಳೆ ಅಯ್ಯಂಗಾರ್ ತಿಳಿಸಿದರು.

ಸೋಮವಾರ ಸಂಜೆ 5 ಗಂಟೆಗೆ ಚೆನ್ನಕೇಶವ ಸ್ವಾಮಿಯ ಓಕುಳಿ ಉತ್ಸವ, ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಈಶ್ವರ, ಮಾದೇಶ್ವರ ಸ್ವಾಮಿಯ ಕೊಂಡೋತ್ಸವ ನಡೆಯಲಿದೆ. ಗ್ರಾಮದ ಮಹಿಳೆಯರು ಸೋಮವಾರ ಸಂಜೆ ಸಾಂಪ್ರದಾಯಿಕ ಉಡುಪು ಧರಿಸಿ ಗ್ರಾಮದ ಮೂಡಲಕೆರೆಯಿಂದ ಕಳಸಗಳ ಮೂಲಕ ನೀರನ್ನು ತಂದು ಓಕುಳಿ ಗುಂಡಿಗೆ ನೀರನ್ನು ತುಂಬಿಸುತ್ತಾರೆ. ನಂತರ ರಾತ್ರಿ 7 ಗಂಟೆಗೆ ಈಶ್ವರ, ಮಾದೇಶ್ವರ, ಚೆನ್ನಕೇಶವ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮಾಡಿ ಭಕ್ತರು ಓಕುಳಿ ಆಡುತ್ತಾರೆ.

ಮಂಗಳವಾರ ಮುಂಜಾನೆ ಈಶ್ವರ, ಮಾದೇಶ್ವರ ಸ್ವಾಮಿಯ ಕೊಂಡೋತ್ಸವ ಜರುಗಲಿದ್ದು, ಬೆಳಿಗ್ಗೆ 7 ಗಂಟೆಗೆ ಮೂಡಲ ಕೆರೆಯಲ್ಲಿ ಸಾಂಪ್ರದಾಯಿಕ ಪೂಜೆಗಳನ್ನು ಮುಗಿಸಿ, ಗ್ರಾಮದ ಮಹದೇಶ್ವರ, ಈಶ್ವರ, ಚನ್ನಕೇಶವ, ಮಲ್ಲೆದೇವರು, ಭೈರವೇಶ್ವರ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮಾಡಿ ಅರ್ಚಕರು ಕೊಂಡ ಹಾಯುತ್ತಾರೆ.

ದಾಸಯ್ಯನವರ ಕುಣಿತ ವಿಶೇಷ ಆಕರ್ಷಣೆ: ಕೊಂಡೋತ್ಸವ ಮುಗಿದ ನಂತರ ದಾಸಯ್ಯನವರು ನಡೆಸಿಕೊಡುವ ವಿಶೇಷ ಕುಣಿತ ಜಾತ್ರೆಯ ಮತ್ತೊಂದು ವಿಶೇಷವಾಗಿದೆ. ಇದನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳಾದ ಹಳ್ಳದ ಕೊಪ್ಪಲು, ನಾಡಪ್ಪನಹಳ್ಳಿ, ಹಳೆಪುರ, ಗೌರಿಪುರ, ಮಲ್ಲೇಗೌಡನ ಕೊಪ್ಪಲು, ತರಿಕಲ್ಲು, ಗದ್ದಿಗೆ, ಕೆಂಡಗಣ್ಣಪುರ, ರತ್ನಾಪುರಿ, ಕೊಡಿ ಉದ್ದೂರು ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.

ಹಿಂದೂಗಳಷ್ಟೇ ವಾಸ: ಈ ಗ್ರಾಮದ ವಿಶೇಷತೆ ಎಂದರೆ ಇಲ್ಲಿ ಹಿಂದೂಗಳನ್ನು ಬಿಟ್ಟರೆ ಅನ್ಯ ಧರ್ಮದವರು ವಾಸ ಮಾಡಲು ಸಾಧ್ಯವಾಗುವುದಿಲ್ಲ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಲವು ಧರ್ಮದವರು ವಾಸಿಸುತ್ತಾರೆ. ಆದರೆ ಇಲ್ಲಿ ವಾಸ ಮಾಡಲು ಬಂದ ಅನೇಕ ಅನ್ಯ ಧರ್ಮದ ಜನರು ವಾಸ ಮಾಡಲು ಸಾಧ್ಯವಾಗದೆ ವಾರದೊಳಗೆ ವಾಪಸ್ ಹೋಗುತ್ತಾರೆ ಇದಕ್ಕೆ ವಿಷ್ಣು, ಈಶ್ವರ ದೇವರು ಒಂದೇ ಗ್ರಾಮದಲ್ಲಿ ನೆಲೆಸಿರುವುದೇ ಕಾರಣ ಎನ್ನುತ್ತಾರೆ ನಮ್ಮ ಪೂರ್ವಜರು. ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿ ಮಹದೇವರವರು ತಿಳಿಸಿದರು.

ಎಮ್ಮೆಗಳನ್ನು ಸಾಕುವುದಿಲ್ಲ: ಪಕ್ಕದ ಗ್ರಾಮಗಳಾದ ರತ್ನಪುರಿ, ತರಿಕಲ್, ಗದ್ದಿಗೆ, ಕೋಡಿ, ಉದ್ದೂರು ಮುಂತಾದ ಗ್ರಾಮಗಳಲ್ಲಿ ಎಮ್ಮೆಗಳನ್ನು ಸಾಕುತ್ತಾರೆ. ಆದರೆ ಇಲ್ಲಿ ಒಂದು ಎಮ್ಮೆಗಳನ್ನು ಸಾಕಲು ಸಾಧ್ಯವಾಗುವುದಿಲ್ಲ ಅವು ಬದುಕುಳಿಯುವುದಿಲ್ಲ ಇದಕ್ಕೆ ಕಾರಣವೇನೆಂಬುದು ಯಾರಿಗೂ ಗೊತ್ತಿಲ್ಲ ಎನ್ನುತ್ತಾರೆ ಗ್ರಾಮದ ಹಿರಿಯ ಮುಖಂಡರಾದ ಡಿಕೆ ಕುನ್ನೇಗೌಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.