ಮೈಸೂರು: ‘ರಾಜ್ಯ ಸರ್ಕಾರವು 2026–27ನೇ ಸಾಲಿನ ಬಜೆಟ್ನಲ್ಲಿ ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ನೀಡಿರುವ ಅನುದಾನ ಬಹಳ ಕಡಿಮೆ ಪ್ರಮಾಣದಲ್ಲಿದೆ’ ಎಂದು ಪ್ರೊಟೆಸ್ಟೆಂಟ್ ಕ್ರೈಸ್ತರ ಮಹಾಸಭಾದ ರೆ.ಸುನಿಲ್ ವಿ. ಜೇಕಬ್ ಹೇಳಿದರು.

‘ರಾಜ್ಯದಲ್ಲಿ 48 ಲಕ್ಷ ಜನಸಂಖ್ಯೆ ಹೊಂದಿರುವ ಕ್ರೈಸ್ತ ಸಮುದಾಯಗಳಿಗೆ ಈ ಬಾರಿಯ ಬಜೆಟ್ನಲ್ಲಿ ₹93.5 ಕೋಟಿಯನ್ನಷ್ಟೆ ಒದಗಿಸಲಾಗಿದೆ. ಹೆಚ್ಚಿನ ಅನುದಾನ ನೀಡದಿರುವುದು ಅಸಮಾಧಾನ ತರಿಸಿದೆ’ ಎಂದು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಹೋದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ 10ರಷ್ಟು ಮಾತ್ರವೇ ಹೆಚ್ಚಿಸಲಾಗಿದೆ. ಸಮುದಾಯದ ಅಗತ್ಯ ಗಮನಿಸಿದರೆ ಈ ಮೊತ್ತ ಸಾಕಾಗುವುದಿಲ್ಲ. ಆದ್ದರಿಂದ ಇದುವರೆಗೆ ಬಾಕಿ ಇರುವ ₹ 165 ಕೋಟಿ ಬಾಕಿಯನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು. ನಮಗೆ ಮೀಸಲಾದ ಅನುದಾನದ ಸಮರ್ಪಕ ಬಳಕೆಯ ನಿಟ್ಟಿನಲ್ಲಿ ಎಸ್ಸಿಎಸ್ಪಿ, ಟಿಎಸ್ಪಿ ಮಾದರಿ ಕಾಯ್ದೆಯ ಮಾದರಿ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

‘ನಿಗಮದಲ್ಲಿ ಪ್ರೊಟೆಸ್ಟೆಂಟ್ ಕ್ರೈಸ್ತರಿಗೂ ಪ್ರಾತಿನಿಧ್ಯ ನೀಡಬೇಕು, ಎಲ್ಲೆಡೆ ಕ್ರೈಸ್ತ ಸಮುದಾಯ ಭವನ ನಿರ್ಮಿಸಬೇಕು. ಪಾಸ್ಟರ್ಗಳಿಗೂ ಮಾಸಿಕ ಗೌರವಧನ ಕೊಡಬೇಕು. ಅವರಿಗೆ ಗುರುತಿನ ಚೀಟಿ ವಿತರಿಸಬೇಕು. ನಮ್ಮ ಸಮುದಾಯದ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ವಸತಿನಿಲಯ ತೆರೆಯಬೇಕು. ಕ್ರೈಸ್ತ ಪರಂಪರೆ ಸಂಗ್ರಹಾಲಯ ಆರಂಭಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

ವಿನೋದ್ ಎಂ. ಚಾಕೋ, ವೆನಿಯಲ್ ಮೋಸೆಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.