ಕೆ.ಆರ್.ನಗರ: ‘ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭವಾಗದ ಹಿನ್ನೆಲೆಯಲ್ಲಿ ಈ ಭಾಗದ ರೈತರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ’ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಸೋಮವಾರ ಸಂಘದ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.

‘ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ನಿರಾಣಿ ಅವರಿಗೆ ಒಪ್ಪಂದ ಆಗಿ ನಾಲ್ಕು ವರ್ಷ, ನೋಂದಣಿಯಾಗಿ ಒಂದೂವರೆ ವರ್ಷ ಕಳೆದಿದೆ. ಆದರೂ ಈವರೆಗೆ ಕಾರ್ಖಾನೆ ಪುನರಾರಂಭಿಸಿಲ್ಲ, ಯಾವ ಉದ್ದೇಶ ಇಟ್ಟುಕೊಂಡು ವಿಳಂಬ ಮಾಡುತ್ತಿದ್ದಾರೆ ಎನ್ನವುದು ಗೊತ್ತಾಗುತ್ತಿಲ್ಲ, ಕಾರ್ಖಾನೆ ಪುನರಾರಂಭಿಸಲು ಸರ್ಕಾರದಿಂದ ಗುಡುವು ಪಡೆಯುತ್ತಿರವುದನ್ನು ಗಮನಿಸಿದರೆ ಕಾರ್ಖಾನೆ ಪುನರಾರಂಭವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ’ ಎಂದು ಆರೋಪಿಸಿದರು.

‘ಕಾರ್ಖಾನೆ ಪುನರಾರಂಭವಾಗದೇ ಇರುವುದರಿಂದ ಈ ಭಾಗದ ರೈತರು 200ರಿಂದ 300ಕಿ.ಮೀ ದೂರ ಕಬ್ಬು ಸಾಗಿಸುತ್ತಿದ್ದಾರೆ. ರೈತರು ಸಾಗಣೆ ವೆಚ್ಚ ಕಟ್ಟಿ ಸಾಲಗಾರರಾಗುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಮನವಿ ಕೂಡ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ರೈತರು ಇಂತಹ ತೊಂದರೆ ಅನುಭವಿಸಿದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಬರೀ ಗ್ಯಾರಂಟಿಗಳ ಬಗ್ಗೆ ಯೋಚಿಸುವುದಾದರೆ ರೈತರು ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸಿದರು.

‘ಕಾರ್ಖಾನೆ ಪುನರಾರಂಭಿಸಲು ಆಗುತ್ತಿರುವ ತೊಂದರೆಗಳಿಗೆ ಕ್ಷೇತ್ರದ ಶಾಸಕರು ಮತ್ತು ಸರ್ಕಾರ ಮಧ್ಯ ಪ್ರವೇಶ ಮಾಡಿ ಜೂನ್, ಜುಲೈ ತಿಂಗಳೊಳಗೆ ಕಾರ್ಖಾನೆ ಪುನರಾರಂಭಿಸಬೇಕು, ಇಲ್ಲದೇ ಹೋದಲ್ಲಿ ನೋಂದಣಿ ಸಮಯದಲ್ಲಿ ನಿರಾಣಿ ಅವರು ಕಟ್ಟಿರುವ ಮುಂಗಡ ಹಣ, ಬಂಡವಾಳ, ಕಾರ್ಖಾನೆಯಲ್ಲಿ ಇಡಲಾದ ವಸ್ತುಗಳನ್ನು ಬಿಡುವುದಿಲ್ಲ, ಇಲ್ಲಿನ ಕಬ್ಬು ಮಂಡ್ಯ ಕಾರ್ಖಾನೆಗೆ ಸಾಗಿಸಲು ಬಿಡುವುದಿಲ್ಲ. ತಾಲ್ಲೂಕು ಮತ್ತು ಜಿಲ್ಲಾ ಹಂತದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ’ ಎಂದು ಎಚ್ಚರಿಸಿದರು.

ಸಂಘದ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುಳಾ, ಉಪಾಧ್ಯಕ್ಷರಾಗಿ ಆಯ್ಕೆಯಾದ ವೀಣಾ, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ವಿನೋದಾ ಮತ್ತು ಸಹ ಕಾರ್ಯದರ್ಶಿಯಾಗಿ ಆಯ್ಕೆಯಾದ ಲಕ್ಷ್ಮೀ ಅವರನ್ನು ಅಭಿನಂದಿಸಲಾಯಿತು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ್, ಮುಖಂಡ ತಿಪ್ಪೂರು ಬಸವರಾಜ್, ತಾಲ್ಲೂಕು ಘಟಕದ ಕಾರ್ಯದರ್ಶಿ ತಿಪ್ಪೂರು ಲೋಕೇಶ್, ತಿಪ್ಪೂರು ಗ್ರಾಮ ಘಟಕದ ಉಪಾಧ್ಯಕ್ಷ ವಿಷ್ಣುವರ್ಧನ್, ಬಾಲೂರು ನಾಗರಾಜು, ಶಿವಣ್ಣೇಗೌಡ, ಅಂಕನಹಳ್ಳಿ ಶಿವರಾಜ್, ಕಲ್ಯಾಣಪುರ ರಾಜಶೇಖರ್, ಕಾರ್ಯದರ್ಶಿ ಬಾಲೂರು ದಿನೇಶ್, ಎಲ್ಐಸಿ ಹಂಪಾಪುರ ಕುಮಾರ್, ಚೀರ್ನಹಳ್ಳಿ ಕಾಳೇಗೌಡ, ನಂಜುಂಡಸ್ವಾಮಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-38-1383159571

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.