ಮೈಸೂರು: ‘ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು ಭಾರಿ ಪ್ರಮಾಣದಲ್ಲಿ ಏರಿಸುವ ಮೂಲಕ ಕೇಂದ್ರ ಸರ್ಕಾರವು ಜನಸಾಮಾನ್ಯರ ಮೇಲೆ ಬರೆ ಎಳೆದಿದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ವಾಗ್ದಾಳಿ ನಡೆಸಿದರು.

‘ಒಮ್ಮೆಲೇ ₹ 993 ಜಾಸ್ತಿ ಮಾಡಲಾಗಿದೆ. ಜನವರಿ 1ರಿಂದ ಈವರೆಗೆ 5 ಬಾರಿ ಬೆಲೆ ಏರಿಸಲಾಗಿದೆ. ಈಗ ವಾಣಿಜ್ಯ ಸಿಲಿಂಡರ್ ಬೆಲೆ ₹ 3,155 ತಲುಪಿದ್ದು, ಜೊತೆಗೆ ಶೇ 18ರಷ್ಟು ತೆರಿಗೆಯನ್ನೂ ಪಾವತಿಸಬೇಕಾಗಿದೆ’ ಎಂದು ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಯುದ್ಧದ ನೆಪವೊಡ್ಡಿ ಅಡುಗೆ ಅನಿಲ ಸಿಲಿಂಡರ್ ಅಭಾವ ಸೃಷ್ಟಿಸಲಾಯಿತು. ಈ ನಡುವೆ, 5 ಕೆ.ಜಿ. ಎಲ್ಪಿಜಿ ಸಿಲಿಂಡರ್ ಬಿಡಲಾಯಿತು. ಅದರ ಬೆಲೆಯನ್ನೂ ₹ 240 ಹೆಚ್ಚಿಸಿದ್ದಾರೆ. ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಮೇಲೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನೂ ಜಾಸ್ತಿ ಮಾಡುತ್ತಾರೆ. ಜನರು ಇನ್ನಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ವಿಮಾನಗಳಿಗೆ ಬಳಸುವ ಇಂಧನದ ಬೆಲೆಯೂ ಜಾಸ್ತಿಯಾಗಿದೆ. ದೇಶದಿಂದ ಡೀಸೆಲ್, ಪೆಟ್ರೋಲ್ ಮೊದಲಾದವುಗಳನ್ನು (ರಿಫೈನ್ಡ್) ರಫ್ತು ಮಾಡಲಾಗುವ ಬೆಲೆಯನ್ನು ಲೀಟರ್ಗೆ ₹23 ಇಳಿಸಿದ್ದಾರೆ. ಆದರೆ, ದೇಶದ ಜನರಿಗೆ ಹೊರೆ ಹೊರಿಸುತ್ತಿದ್ದಾರೆ. ಭಾರತೀಯರೇನು ಕರ್ಮ ಮಾಡಿದ್ದಾರೆ?. ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಕೊಟ್ಟಿರುವ ‘ಚುನಾವಣಾ ಬಿಲ್’ ಇದಾಗಿದೆ’ ಎಂದು ಆರೋಪಿಸಿದರು.

‘ಪಶ್ಚಿಮ ಏಷ್ಯಾ ಸಂಘರ್ಷದಿಂದ ಯುದ್ಧದಿಂದಾಗಿ ನಿಜವಾಗಿಯೂ ಕೇಂದ್ರ ಸರ್ಕಾರಕ್ಕೆ ನಷ್ಟ ಆಗುತ್ತಿದೆಯೇ? 19 ಕೆ.ಜಿ. ವಾಣಿಜ್ಯ ಅನಿಲ ಸಿಲಿಂಡರ್ ಉತ್ಪಾದನೆಗೆ ₹ 2,370 ಆಗುತ್ತದೆ. ಆದರೆ, ಮಾರುತ್ತಿರುವುದು ₹ 3,155ಕ್ಕೆ. ಅಂದರೆ, ₹ 785 ಲಾಭವಿದೆ. ಇದನ್ನೇಕೆ ಕೇಂದ್ರ ನಷ್ಟ ಎನ್ನುತ್ತಿದೆ? ಲಾಭದಲ್ಲಿ ಕಡಿಮೆ ಆಗಿದೆಯಷ್ಟೆ. ಆದರೆ, ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

‘ಬಡವರ ರಕ್ತ ಹೀರುವ ಕೆಲಸವನ್ನು ಕೇಂದ್ರ ಮಾಡುತ್ತಿದ್ದರೂ, ಜನರು ದಂಗೆ ಏಳುತ್ತಿಲ್ಲವೇಕೆ? ಹೋಟೆಲ್ ಉದ್ಯಮಿಗಳಲ್ಲಿ ಬಹುತೇಕರು ಕಠಿಣವಾದ ಹೇಳಿಕೆ ನೀಡುತ್ತಿಲ್ಲವೇಕೆ? ಬೆಲೆ ಏರಿಕೆಯ ಹೊರೆಯನ್ನು ವರ್ಗಾಯಿಸುವ ಸಾಧ್ಯತೆ ಇರುವುದರಿಂದ, ಅಂತಿಮವಾಗಿ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ತಿಳಿಸಿದರು.

‘ದೇಶದಲ್ಲಿ 35 ಲಕ್ಷ ನೋಂದಾಯಿತ ಹೋಟೆಲ್ಗಳಿವೆ. ಇವುಗಳಲ್ಲಿ 9 ಕೋಟಿ ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವುಗಳಲ್ಲಿ ಬಹಳಷ್ಟು ಹೋಟೆಲ್ಗಳು ಮುಚ್ಚುತ್ತಿವೆ. ಅವುಗಳನ್ನೇ ನಂಬಿಕೊಂಡಿದ್ದವರು ಅತಂತ್ರವಾಗಿದ್ದಾರೆ. ಇದು ಕೇಂದ್ರದ ಕೊಡುಗೆಯಾಗಿದೆ’ ಎಂದು ದೂರಿದರು.

‘ಯುಪಿಎ ಸರ್ಕಾರ ಇದ್ದಾಗ ಕೆಲವೇ ರೂಪಾಯಿ ಬೆಲೆ ಏರಿಕೆಯಾದರೆ ಬೀದಿಗಿಳಿದು ಪ್ರತಿಭಟಿಸುತ್ತಿದ್ದ ಬಿಜೆಪಿಯ ನಾಯಕರು ಈಗ ಏನು ಮಾಡುತ್ತಿದ್ದಾರೆ? ಈಗೇಕೆ ದನಿ ಎತ್ತುತ್ತಿಲ್ಲ?’ ಎಂದು ಕೇಳಿದರು.

ಕಾಂಗ್ರೆಸ್ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ವಕ್ತಾರ ಕೆ.ಮಹೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.