ಮೈಸೂರು: ‘ನಾವೀಗ ಕೊಳ್ಳುಬಾಕತನದ ಕಾಲಘಟ್ಟದಲ್ಲಿದ್ದೇವೆ’ ಎಂದು ರಾಜ್ಯ ಆಡಳಿತ ನ್ಯಾಯಮಂಡಳಿಯ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾ.ಎಚ್.ಬಿ. ಪ್ರಭಾಕರ ಶಾಸ್ತ್ರಿ ಹೇಳಿದರು.

ಇಲ್ಲಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ಕೆ.ಪುಟ್ಟಸ್ವಾಮಿ ನೆನಪಿನ 7ನೇ ದತ್ತಿ ಉಪನ್ಯಾಸ ಮಾಲೆ’ಯಲ್ಲಿ ‘ಭಾರತದಲ್ಲಿ ಗ್ರಾಹಕೀಕರಣ -ಗ್ರಾಹಕರ ರಕ್ಷಣೆ ಮತ್ತು ಗ್ರಾಹಕರ ಹಿತರಕ್ಷಾ ವಕೀಲಿಕೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಚಂದದ ಮನೆಗೊಂದು ಕಾರು ಎಂಬ ಕಾಲ ಹೋಯಿತು. ಈಗೇನಿದ್ದರೂ ನನಗೊಂದು, ಹೆಂಡತಿಗೊಂದು ಮತ್ತು ಮಕ್ಕಳಿಗೊಂದು ಕಾರು ಬೇಕೆನ್ನುವ ಕೊಳ್ಳುಬಾಕತನದ ಕಾಲಘಟ್ಟಕ್ಕೆ ನಾವು ಬಂದು ನಿಂತಿದ್ದೇವೆ’ ಎಂದರು.

ವಿಶ್ವಾಸವೇ: ‘ಕೊಳ್ಳುವವ ಗ್ರಾಹಕ. ಮಾರುವವರ ವ್ಯಾಪಾರಿ, ಮಾರಾಟಗಾರ. ಈ ವ್ಯಾಪಾರಿ– ಖರೀದಿದಾರರ ನಡುವಿನ ಸಂಬಂಧ ಕೊಡುಕೊಳ್ಳುವಿಕೆಯದಷ್ಟೇ ಅಲ್ಲ. ಅಲ್ಲೊಂದು ನಂಬಿಕೆ, ವಿಶ್ವಾಸ ಇರುತ್ತದೆ. ಕೊಂಡ ವಸ್ತುಗಳು ನನ್ನನ್ನು ಮೋಸ ಹೋಗುವಂತೆ ಮಾಡಿಲ್ಲ ಎಂಬ ವಿಶ್ವಾಸವೇ ಗ್ರಾಹನಿಗೆ ವ್ಯಾಪಾರಿಯ ಮೇಲೆ ವಿಶ್ವಾಸ ಇಡುವಂತೆ ಮಾಡುತ್ತದೆ’ ಎಂದು ತಿಳಿಸಿದರು.

ಒತ್ತಡ: ‘ನಮ್ಮಲ್ಲಿ ಈ ಕೊಳ್ಳುಬಾಕತನದ ಒತ್ತಡವನ್ನು ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳು ಉಂಟುಮಾಡಿದ್ದನ್ನು ಮರೆಯುವಂತಿಲ್ಲ. ಕಾಲಿಗೆ, ಮಿದುಳಿಗೆ, ದೇಹಕ್ಕೆ ಕೆಲಸ ಕೊಡದ ನಾವು ಈಗ ಪ್ರತಿ ಅಂಗಕ್ಕೂ ಒಂದೊಂದು ಸಲಕರಣೆ ಬೇಕೆನ್ನುವ ಅನಿವಾರ್ಯ ಪರಿಸ್ಥಿತಿಗೆ ಬಂದು ನಿಂತಿದ್ದೇವೆ’ ಎಂದು ವಿಷಾದಿಸಿದರು.

‘ಕೊಳ್ಳುಬಾಕತನವೇ ಗ್ರಾಹಕ ಸಂಸ್ಕೃತಿಯಾಗಿ ಬೆಳೆಯುತ್ತಾ, ವ್ಯಾಪಾರಿ ಸ್ವರೂಪದ ಧೋರಣೆಗಳು ದ್ರೋಹ– ವಂಚನೆಗಳಾಗಿ ಬದಲಾಗುತ್ತಿವೆ. ಗ್ರಾಹಕರ ಹಕ್ಕುಗಳನ್ನೂ ಮೊಟಕುಗೊಳಿಸುತ್ತಿವೆ’ ಎಂದು ವಿಶ್ಲೇಷಿಸಿದರು.

‘ಗ್ರಾಹಕರ ಹಕ್ಕುಗಳು, ವ್ಯಾಜ್ಯ, ತಗಾದೆಗಳು ನಿರ್ಲಕ್ಷ್ಯಕ್ಕೆ ಒಳಗಾದರೆ ಅದು ಕಾನೂನಿನ ಸೋಲೇ ಹೊರತು ಬೇರೇನಲ್ಲ’ ಎಂದು ಪ್ರತಿಪಾದಿಸಿದರು.

ರಕ್ಷಿಸಬೇಕು: ‘ನ್ಯಾಯಯುತ ಮತ್ತು ನ್ಯಾಯಬೆಲೆಯ ವ್ಯಾಪಾರಿ ಮನೋಧರ್ಮವು ದೇಶದ ವ್ಯಾಪಾರ– ವಹಿವಾಟುಗಳಲ್ಲಿ ಅಂತರ್ಗತವಾಗಿ ಹೆಚ್ಚಾಗಬೇಕು. ಕಳಪೆ ಸಾಮಗ್ರಿ ಕೊಳ್ಳುವ, ನಿಗದಿತ ಬೆಲೆಗಿಂತ ಹೆಚ್ಚು ತೆತ್ತು ಮೋಸ ಹೋಗುವ ಗ್ರಾಹಕರ ಹಕ್ಕುಗಳನ್ನು ನಮ್ಮ ನ್ಯಾಯಮಂಡಳಿಗಳು ಇನ್ನಾದರೂ ರಕ್ಷಿಸಬೇಕು’ ಎಂದರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಕೆ.ಪುಟ್ಟಸ್ವಾಮಿ ಅವರ ಪುತ್ರರಾದ ಡಾ.ಪಿ.ಚಂದ್ರಶೇಖರ್, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ವಿದ್ಯಾವರ್ಧಕ ಕಾನೂನು ಕಾಲೇಜಿನ ಮೇಲ್ವಿಚಾರಣಾ ಸಮಿತಿಯ ಮುಖ್ಯಸ್ಥ ಎಸ್. ಶಿವಲಿಂಗಯ್ಯ, ಪ್ರಾಂಶುಪಾಲ ಪಿ. ದೀಪು, ಕಾರ್ಯಕ್ರಮದ ಸಂಯೋಜಕ ಎಚ್.ಎಸ್.ಶಿವಕುಮಾರ್, ಸಹಾಯಕ ಪ್ರಾಧ್ಯಾಪಕಿ ಎಂ.ಜೆ. ಇಂದುಮತಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.