ಮೈಸೂರು: ಅಡುಗೆ ಎಣ್ಣೆ ಬೆಲೆಯೂ ಕಳೆದ 15 ದಿನಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ತಾಳೆ ಹಾಗೂ ಸೂರ್ಯಕಾಂತಿ ಎಣ್ಣೆಗಳು ದುಬಾರಿ ಆಗುತ್ತಿವೆ. ಇದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.

ಪ್ರಸ್ತುತ, ಭಾರತವು ಅಡುಗೆ ಎಣ್ಣೆ ಆಮದು ಮಾಡಿಕೊಳ್ಳುತ್ತಿರುವ ದೇಶಗಳಲ್ಲಿ ಯುದ್ಧ ನಡೆದಿಲ್ಲವಾದರೂ ಜಾಗತಿಕ ಯುದ್ಧ ಭೀತಿಯಿಂದಾಗಿ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿರುವುದಾಗಿ ವರ್ತಕರು ಹೇಳುತ್ತಾರೆ. ಜೊತೆಗೆ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿ ಆಗುತ್ತಿರುವ ಆತಂಕವೂ ಇದೆ.

ಸೂರ್ಯಕಾಂತಿ ಎಣ್ಣೆ ಪ್ರತಿ ಲೀಟರ್ಗೆ ₹ 20 ಹೆಚ್ಚಾಗಿದೆ. ಸದ್ಯ ಪ್ರತಿ ಟಿನ್ಗೆ (15 ಲೀಟರ್) ₹1,600ರಿಂದ ₹1,750ಕ್ಕೆ ಹೆಚ್ಚಳವಾಗಿದೆ. ಬ್ರಾಂಡೆಡ್ ಕಂಪನಿಗಳ 1 ಲೀಟರ್ನ ಪ್ಯಾಕೆಟ್ ಸರಾಸರಿ ₹155ರಿಂದ ₹175ಕ್ಕೆ ಏರಿದೆ. ತಾಳೆ ಎಣ್ಣೆಯು ಪ್ರತಿ ಟಿನ್ಗೆ ₹1,070ರಿಂದ ₹1,170ಕ್ಕೆ ಹಾಗೂ ಪ್ರತಿ ಲೀಟರ್ಗೆ ₹115ರಿಂದ ₹130–₹135ವರೆಗೆ ಏರಿಕೆ ಆಗಿದೆ. ದೀಪದ ಎಣ್ಣೆ ಬೆಲೆ ಕೂಡ ಲೀಟರ್ಗೆ ಸರಾಸರಿ ₹20ರಿಂದ ₹30 ಹೆಚ್ಚಾಗಿದೆ.

ತೆಂಗು ಹಾಗೂ ಕೊಬ್ಬರಿ ದುಬಾರಿಯಾದ ಕಾರಣಕ್ಕೆ 1 ವರ್ಷದಿಂದ ಕೊಬ್ಬರಿ ಎಣ್ಣೆ ದರ ಏರಿಕೆ ಹಾದಿಯಲ್ಲಿದೆ. ಇದೀಗ ಉಳಿದ, ಅಡುಗೆ ಎಣ್ಣೆಗಳ ಬೆಲೆಯೂ ಏರುತ್ತಿರುವುದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ.

ಕಚ್ಚಾ ಎಣ್ಣೆ ಆಮದು: ಭಾರತವು ತಾಳೆ ಹಾಗೂ ಸೂರ್ಯಕಾಂತಿ ಎಣ್ಣೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ವಾರ್ಷಿಕವಾಗಿ 1 ಕೋಟಿ ಟನ್ನಷ್ಟು ತಾಳೆ ಎಣ್ಣೆ ಆಮದಾಗುತ್ತಿದ್ದು, ಇದರಲ್ಲಿ ಇಂಡೋನೇಷ್ಯಾ ಹಾಗೂ ಮಲೇಷ್ಯಾ ಎರಡರಿಂದಲೇ ಶೇ 90ರಷ್ಟು ಉತ್ಪನ್ನ ಬರುತ್ತಿದೆ. ಭಾರತಕ್ಕೆ ಬೇಕಾದ ಸೂರ್ಯಕಾಂತಿ ಎಣ್ಣೆ ಪೈಕಿ ಶೇ 70ರಿಂದ 90ರಷ್ಟನ್ನು ರಷ್ಯಾ ಹಾಗೂ ಉಕ್ರೇನ್ ಪೂರೈಸುತ್ತಿವೆ. ಕಚ್ಚಾ ತೈಲವನ್ನು ತರಿಸಿಕೊಂಡು, ಸಂಸ್ಕರಿಸಿ ನಂತರ ಪ್ಯಾಕೆಟ್ ಹಾಗೂ ಟಿನ್ಗಳ ರೂಪದಲ್ಲಿ ಮಾರಲಾಗುತ್ತಿದೆ.

‘ಯುದ್ಧ ಆರಂಭವಾದ ನಂತರ ಬೇಡಿಕೆಯಷ್ಟು ಅಡುಗೆ ಎಣ್ಣೆ ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ನಿಧಾನಕ್ಕೆ ಬೆಲೆ ಹೆಚ್ಚುತ್ತಿದೆ. ಯುದ್ಧದ ಅವಧಿ ಹೆಚ್ಚಿದಷ್ಟು ಬೆಲೆ ಹೆಚ್ಚಬಹುದು’ ಎಂದೂ ವರ್ತಕರು ಹೇಳುತ್ತಾರೆ.

ಗಾಣದ ಎಣ್ಣೆಗೆ ಬೇಡಿಕೆ

ಬ್ರಾಂಡೆಡ್ ಕಂಪನಿಗಳ ಸಂಸ್ಕರಿತ ಅಡುಗೆ ಎಣ್ಣೆ ದುಬಾರಿ ಆಗಿದೆಯಾದರೂ ಸ್ಥಳೀಯವಾಗಿ ಉತ್ಪಾದನೆ ಆಗುವ ಗಾಣದ ಎಣ್ಣೆಯ ದರದಲ್ಲಿ ಹೆಚ್ಚು ಬದಲಾವಣೆ ಆಗಿಲ್ಲ. ಸೂರ್ಯಕಾಂತಿ ಎಣ್ಣೆ ಮಾತ್ರ ಲೀಟರ್ಗೆ ₹10–15 ರಷ್ಟು ಹೆಚ್ಚಾಗಿದೆ. ಮೈಸೂರಿನ ಗಾಣದಎಣ್ಣೆ ಮಾರಾಟ ಮಳಿಗೆಗಳಲ್ಲಿ ಲೀಟರ್ಗೆ ಕಡಲೆಕಾಯಿ ಎಣ್ಣೆ ₹300 ಕೊಬ್ಬರಿ ಎಣ್ಣೆ ₹480 ಸೂರ್ಯಕಾಂತಿ ಎಣ್ಣೆ ₹340 ಹರಳೆಣ್ಣೆ ₹340 ಸಾಸಿವೆ ಎಣ್ಣೆ ₹340 ಎಳ್ಳೆಣ್ಣೆ ₹400 ಕುಸುಬೆ ಎಣ್ಣೆ ₹400 ಹುಚ್ಚೆಳ್ಳು ಎಣ್ಣೆ ₹540 ದೀಪದ ಎಣ್ಣೆ ₹200 ಇದೆ. ಬದಾಮಿ ಎಣ್ಣೆ ಲೀಟರ್ಗೆ ₹3500 ಹಾಗೂ ಅಗಸೆ ಬೀಜದ ಎಣ್ಣೆ ₹800 ರಂತೆ ವ್ಯಾಪಾರ ಆಗುತ್ತಿದೆ. ‘ಪ್ಯಾಕೆಟ್ ಎಣ್ಣೆಗಳ ಬೆಲೆ ಏರಿಕೆ ಹಿಂದೆಯೇ ಜನರು ಗಾಣದ ಎಣ್ಣೆ ಖರೀದಿಗೆ ಉತ್ಸಾಹ ತೋರುತ್ತಿದ್ದಾರೆ. ಎರಡು ವಾರಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿದೆ. ಶೇ 10ರಷ್ಟು ಹೆಚ್ಚು ವ್ಯಾಪಾರ ಆಗುತ್ತಿದೆ’ ಎನ್ನುತ್ತಾರೆ ಇಲ್ಲಿನ ಸರಸ್ವತಿಪುರಂನ ಎಣ್ಣೆ ಮಳಿಗೆಯ ಶೈಲೇಶ್.

ಈ ತಿಂಗಳು ಸೂರ್ಯಕಾಂತಿ ಎಣ್ಣೆ ಪ್ರತಿ ಟಿನ್ಗೆ ₹150ರಷ್ಟು ಏರಿದೆ. ತಾಳೆ ಎಣ್ಣೆ ದರವೂ ಏರಿದೆ. ಬೇಡಿಕೆಯಷ್ಟು ದಾಸ್ತಾನು ಪೂರೈಕೆ ಆಗುತ್ತಿಲ್ಲ.
–ರಾಜು, ಅಡುಗೆ ಎಣ್ಣೆ ವ್ಯಾಪಾರಿ

ವಾಣಿಜ್ಯ ಸಿಲಿಂಡರ್ಗಳ ಕೊರತೆ ಹಾಗೂ ದರ ಏರಿಕೆಯಿಂದ ಹೋಟೆಲ್ ಉದ್ಯಮ ಈಗಾಗಲೇ ಸಂಕಷ್ಟದಲ್ಲಿದೆ. ಇದೀಗ ಅಡುಗೆ ಎಣ್ಣೆ ಬೆಲೆ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ
–ಸಿ. ನಾರಾಯಣ ಗೌಡ, ಅಧ್ಯಕ್ಷ ಮೈಸೂರು ಹೋಟೆಲ್ ಮಾಲೀಕರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.