ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಕೆಟ್ ಟೂರ್ನಿ| ಧ್ರುವ್–ನಿಶ್ಚಿತ್‌ ಜುಗಲ್‌ಬಂದಿ: ಸುಸ್ಥಿತಿಯಲ್ಲಿ ಕೋಲ್ಟ್ಸ್‌

ಕ್ಯಾಪ್ಟನ್‌ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿ
Published : 6 ಸೆಪ್ಟೆಂಬರ್ 2024, 4:16 IST
Last Updated : 6 ಸೆಪ್ಟೆಂಬರ್ 2024, 4:16 IST
ಫಾಲೋ ಮಾಡಿ
Comments

ಮೈಸೂರು: ದಿನವಿಡೀ ಎದುರಾಳಿ ಬೌಲರ್‌ಗಳನ್ನು ಬಿಡದಂತೆ ಕಾಡಿದ ಪಿ. ಧ್ರುವ್‌ (191; 414 ಎ, 4X16) ಹಾಗೂ ನಿಶ್ಚಿತ್‌ ಪೈ ( 151; 264 ಎ, 4X14, 6X3) ಜೋಡಿಯು ಒಡಿಶಾ ಕ್ರಿಕೆಟ್ ಸಂಸ್ಥೆ ವಿರುದ್ಧದ ಪಂದ್ಯದಲ್ಲಿ ಎರಡನೇ ದಿನದಂತ್ಯಕ್ಕೆ ಕೆಎಸ್‌ಸಿಎ ಕೋಲ್ಟ್ಸ್‌ ತಂಡವನ್ನು ಸುಸ್ಥಿತಿಯಲ್ಲಿ ಇರಿಸಿದೆ.

ಇಲ್ಲಿನ ಎಸ್‌ಜೆಸಿಇ ಮೈದಾನದಲ್ಲಿ ನಡೆಯುತ್ತಿರುವ ಕ್ಯಾಪ್ಟನ್‌ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕೆಎಸ್‌ಸಿಎ ಕೋಲ್ಟ್ಸ್‌ ಗುರುವಾರ 9 ವಿಕೆಟ್‌ಗಳಿಗೆ 584 ರನ್‌ ಗಳಿಸಿ ಡಿಕ್ಲೇರ್ ಮಾಡಿತು. ಗುರಿ ಬೆನ್ನತ್ತಿದ ಒಡಿಶಾ ತಂಡವು 17 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದೆ.

ಕರ್ನಾಟಕ ಕೋಲ್ಟ್ಸ್‌ ಪರ 297 ರನ್ ಜೊತೆಯಾಟದ ಪ್ರದರ್ಶನ ನೀಡಿದ ತಂಡದ ನಿಶ್ಚಿತ್ ಪೈ (151) ಹಾಗೂ ಪಿ. ಧ್ರುವ್‌ (191 ರನ್) ಜೋಡಿ – ಪ್ರಜಾವಾಣಿ ಚಿತ್ರ: ಅನೂ‍ಪ್‌ ರಾಘ್‌ ಟಿ.
ಕರ್ನಾಟಕ ಕೋಲ್ಟ್ಸ್‌ ಪರ 297 ರನ್ ಜೊತೆಯಾಟದ ಪ್ರದರ್ಶನ ನೀಡಿದ ತಂಡದ ನಿಶ್ಚಿತ್ ಪೈ (151) ಹಾಗೂ ಪಿ. ಧ್ರುವ್‌ (191 ರನ್) ಜೋಡಿ – ಪ್ರಜಾವಾಣಿ ಚಿತ್ರ: ಅನೂ‍ಪ್‌ ರಾಘ್‌ ಟಿ.

ಬುಧವಾರ ದಿನದಂತ್ಯಕ್ಕೆ ಅಜೇಯರಾಗಿ ಉಳಿದಿದ್ದ ಧ್ರುವ್‌ ಹಾಗೂ ನಿಶ್ಚಲ್ ಜೋಡಿಯು ಪಂದ್ಯದ ಎರಡನೇ ದಿನದಂದು ಸಂಜೆವರೆಗೂ ಒಡಿಶಾ ಬೌಲರ್‌ಗಳ ತಾಳ್ಮೆ ಪರೀಕ್ಷಿಸಿತು. 9ನೇ ವಿಕೆಟ್‌ ಜೊತೆಯಾಟದಲ್ಲಿ 297 ರನ್ ( 525 ಎಸೆತ) ಕಲೆ ಹಾಕಿತು. ಪಂದ್ಯದ ಉದ್ದಕ್ಕೂ ತಾಳ್ಮೆಯಿಂದ ಆಡಿದ ಧ್ರುವ್‌ ದ್ವಿಶತಕದ ಹೊಸ್ತಿಲಲ್ಲಿ ಎಡವಿದ್ದು, ವಿಪ್ಲವ್  ಸಾಮಂತ್ರೆ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಕ್ರೀಸ್‌ನ ಮತ್ತೊಂದೆಡೆ, ಆಗಾಗ್ಗೆ ಸಿಕ್ಸರ್ ಸಿಡಿಸುತ್ತ ಸಾಥ್‌ ನೀಡುತ್ತಿದ್ದ ನಿಶ್ಚಲ್‌ ಅಜೇಯರಾಗಿ ಉಳಿದರು.

ದೊಡ್ಡ ಗುರಿ ಬೆನ್ನತ್ತಿದ ಒಡಿಶಾ ತಂಡವನ್ನು ಕೆಎಸ್‌ಸಿಎ ಬೌಲರ್‌ಗಳಾದ ಧನುಷ್ ಗೌಡ ಹಾಗೂ ಎನ್‌. ಸಮರ್ಥ್‌ ಸಂಜೆಯ ಬೆಳಕಲ್ಲಿ ಕಾಡಿದ್ದು, 7 ಓವರ್‌ಗಳಲ್ಲೇ 3 ವಿಕೆಟ್‌ ಉರುಳಿಸಿದರು.

ಕರ್ನಾಟಕ ಕೋಲ್ಟ್ಸ್‌ ಪರ ಶತಕ ಸಿಡಿಸಿದ (191) ಪಿ. ಧ್ರುವ್‌ – ಪ್ರಜಾವಾಣಿ ಚಿತ್ರ: ಅನೂ‍ಪ್‌ ರಾಘ್‌ ಟಿ.
ಕರ್ನಾಟಕ ಕೋಲ್ಟ್ಸ್‌ ಪರ ಶತಕ ಸಿಡಿಸಿದ (191) ಪಿ. ಧ್ರುವ್‌ – ಪ್ರಜಾವಾಣಿ ಚಿತ್ರ: ಅನೂ‍ಪ್‌ ರಾಘ್‌ ಟಿ.

ಸಂಕ್ಷಿಪ್ತ ಸ್ಕೋರ್: ಎಸ್‌ಜೆಸಿಇ ಕ್ರೀಡಾಂಗಣ: ಕೆಎಸ್‌ಸಿಎ ಕೋಲ್ಟ್ಸ್‌: 162.3 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 584 ಡಿಕ್ಲೇರ್ (ಪಿ. ಧ್ರುವ್‌ 191, ನಿಶ್ಚಿತ್‌ ಪೈ ಔಟಾಗದೇ 151. ಸೂರ್ಯಕಾಂತ್‌ ಪ್ರಧಾನ್‌ 88ಕ್ಕೆ 4, ಸುನಿಲ್‌ ರೌಲ್‌ 79ಕ್ಕೆ 2). ಒಡಿಶಾ: 7 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 17 (ಸುಮಿತ್‌ ಶರ್ಮಾ ಔಟಾಗದೇ 4. ಧನುಷ್‌ ಗೌಡ 10ಕ್ಕೆ 2 , ಎನ್‌. ಸಮರ್ಥ್‌ 7ಕ್ಕೆ 1).

ಕರ್ನಾಟಕ ಕೋಲ್ಟ್ಸ್‌ ಪರ ಶತಕ ಸಿಡಿಸಿದ (191) ಪಿ. ಧ್ರುವ್‌ ಬ್ಯಾಟಿಂಗ್‌ ವೈಖರಿ – ಪ್ರಜಾವಾಣಿ ಚಿತ್ರ: ಅನೂ‍ಪ್‌ ರಾಘ್‌ ಟಿ.
ಕರ್ನಾಟಕ ಕೋಲ್ಟ್ಸ್‌ ಪರ ಶತಕ ಸಿಡಿಸಿದ (191) ಪಿ. ಧ್ರುವ್‌ ಬ್ಯಾಟಿಂಗ್‌ ವೈಖರಿ – ಪ್ರಜಾವಾಣಿ ಚಿತ್ರ: ಅನೂ‍ಪ್‌ ರಾಘ್‌ ಟಿ.
ಕರ್ನಾಟಕ ಕೋಲ್ಟ್ಸ್‌ ಪರ ಅಜೇಯ ಶತಕ (151) ಸಿಡಿಸಿದ ನಿಶ್ಚಿತ್‌ ಪೈ – ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಕರ್ನಾಟಕ ಕೋಲ್ಟ್ಸ್‌ ಪರ ಅಜೇಯ ಶತಕ (151) ಸಿಡಿಸಿದ ನಿಶ್ಚಿತ್‌ ಪೈ – ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಕುತೂಹಲ ಘಟ್ಟದಲ್ಲಿ ಪಂದ್ಯ

ಮಾನಸಗಂಗೋತ್ರಿಯ ಎಸ್‌ಡಿಎನ್‌ಆರ್‌ಡಬ್ಲ್ಯು ಕ್ರೀಡಾಂಗಣದಲ್ಲಿ ನಡೆದಿರುವ ಬರೋಡಾ ಕ್ರಿಕೆಟ್ ಸಂಸ್ಥೆ ಹಾಗೂ ಡಾ. ಡಿ.ವೈ. ಪಾಟೀಲ ಕ್ರಿಕೆಟ್‌ ಅಕಾಡೆಮಿ ನಡುವಿನ ಪಂದ್ಯವು ಕುತೂಹಲದ ಘಟ್ಟ ತಲುಪಿದೆ. ಎರಡನೇ ದಿನದಂತ್ಯಕ್ಕೆ ಡಿ.ವೈ. ಪಾಟೀಲ ಅಕಾಡೆಮಿಯು 8 ವಿಕೆಟ್‌ ಉಳಿಸಿಕೊಂಡಿದ್ದು ಗೆಲುವಿಗೆ ಇನ್ನೂ 156 ರನ್ ಬೇಕು. ಸಂಕ್ಷಿಪ್ತ ಸ್ಕೋರು: ಮೊದಲ ಇನ್ನಿಂಗ್ಸ್‌: ಬರೋಡಾ ಕ್ರಿಕೆಟ್‌ ಸಂಸ್ಥೆ: 68.2 ಓವರ್‌ಗಳಲ್ಲಿ 181. ಡಾ. ಡಿವೈ. ಪಾಟೀಲ ಕ್ರಿಕೆಟ್ ಅಕಾಡೆಮಿ: 42.2 ಓವರ್‌ಗಳಲ್ಲಿ 156 ( ಅಬ್ದುಲ್‌ ಸಮದ್‌ 31 ಪುನೀತ್‌ 31. ನಿನಾದ್ ರಥ್ವ 18ಕ್ಕೆ 2 ಪ್ರದೀಪ್‌ ಯಾದವ್‌ 33ಕ್ಕೆ 2); ಎರಡನೇ ಇನ್ನಿಂಗ್ಸ್‌: ಬರೋಡಾ ಕ್ರಿಕೆಟ್‌ ಸಂಸ್ಥೆ: 45.5 ಓವರ್‌ಗಳಲ್ಲಿ 166 ( ಜ್ಯೋತ್ಸ್ನಿಲ್ ಸಿಂಗ್‌ 20 ಶಿವಲಿಕ್‌ ಶರ್ಮ 25 ಪ್ರಿನ್ಸ್ ಬದಿಯಾನಿ 25ಕ್ಕೆ 5 ಪಾರ್ಥ್‌ ಸಹಾನಿ 35ಕ್ಕೆ 4). ಡಾ. ಡಿವೈ. ಪಾಟೀಲ ಕ್ರಿಕೆಟ್ ಅಕಾಡೆಮಿ: 9 ಓವರ್‌ಗಳಲ್ಲಿ 2 ವಿಕೆಟ್‌ಗೆ 36 (ಪುನೀತ್‌ ಔಟಾಗದೇ 12 ಹರ್ಷಲ್ ಜಾದವ್‌ ಔಟಾಗದೇ 12. ಸೌರಿನ್‌ 6ಕ್ಕೆ 1).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT