ಮೈಸೂರು: ವೃತ್ತಿ ರಂಗಭೂಮಿ ಕಲಾವಿದೆ ಸರಸ್ವತಿ ಉರುಫ್ ಜುಲೇಖಾ ಬೇಗಂ ಅಭಿನಯಿಸುತ್ತಲೇ ತಮ್ಮ ಜೀವನದ ಘಟನೆಗಳನ್ನು ಮೆಲುಕು ಹಾಕಿದರು.

ರಂಗಾಯಣದಿಂದ ಇಲ್ಲಿನ ಭೂಮಿಗೀತ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ಮಾತಿನ ಮನೆ’ ಕಲಾವಿದರೊಂದಿಗೆ ತಿಂಗಳ ಮಾತುಕತೆ ಕುರಿತ ಕಾರ್ಯಕ್ರಮದಲ್ಲಿ ಮೊದಲ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು ಕಷ್ಟದ ದಿನಗಳನ್ನು ನೆನಪಿಸಿಕೊಂಡು ಕಣ್ಣೀರಾದರು. ಹಾಗೆಯೇ ಕೆಲವು ಹಾಸ್ಯ ಘಟನೆಗಳನ್ನು ನೆನಪಿಸಿ ಸಭಿಕರಲ್ಲಿ ಮಂದಹಾಸ ಮೂಡಿಸಿದರು. ಒಂದು ರೀತಿ ನೈಜ ಜೀವನದ ನಾಟಕಧಾರಿಯಾದರು.

ಎಸ್ಐ ಆಗಿದ್ದ ಪುತ್ರ ಹೃದಯಾಘಾತದಿಂದ ನಿಧನರಾದದ್ದು, ತಂದೆಯ ಮರಣದ ಘಟನೆಗಳನ್ನು ಹೇಳುವಾಗ ಭಾವುಕರಾದರು. ನಿಜ ಜೀವನದಲ್ಲಿ ನಿರಂತರ ಸವಾಲುಗಳನ್ನು ಎದುರಿಸಿ, ಕ್ಯಾನ್ಸರ್ ಅನ್ನು ಜಯಿಸಿದ ಪಾತ್ರಗಳಲ್ಲಿ ತಲ್ಲೀನರಾದರು.

‘ಮನೆಗೊಬ್ಬ ಕಲಾವಿದ ಇರಬೇಕು ಎಂಬುದು ನನ್ನ ಆಸೆ. ಮನೆಗೊಬ್ಬ ಕಲಾವಿದ ಇದ್ದರೆ ಆ ಮನೆಯ ಸಂಸ್ಕೃತಿ ಸುಧಾರಿಸುತ್ತದೆ. ಪಿಎಚ್ಡಿ ಪಡೆದವರಿಂತಲೂ ದೊಡ್ಡ ಸಂಸ್ಕೃತಿಯನ್ನು ರಂಗಭೂಮಿ ಕಲಿಸಿಕೊಡುತ್ತದೆ. ಇದರಿಂದ ಸಿಗುವ ಒಳ್ಳೆಯ ಬುದ್ಧಿ ಬೇರೆಲ್ಲಿಯೂ ಸಿಗುವುದಿಲ್ಲ’ ಎಂದು ಹೇಳಿದರು.

‘ಕಲಾವಿದರಿಗೆ ಅಹಂಕಾರ ಇರಬಾರದು. ಅಹಂ ಆತನ ಅಧಃಪತನಕ್ಕೆ ಕಾರಣವಾಗುತ್ತದೆ. ನಟನೆಯಲ್ಲಿ ಆತ ತಿರಸ್ಕಾರ ಮನೋಭಾವ ಹೊಂದಿದ್ದರೆ ತಕ್ಕ ಬೆಲೆ ಸಿಗುತ್ತದೆ. ಕಲಾವಿದ ಹಸಿವು, ಹಿಂಸೆ ಸಹಿಸಿಕೊಂಡೇ ಪಾತ್ರಕ್ಕೆ ಜೀವ ತುಂಬಬೇಕು’ ಎಂದು ಸಲಹೆ ನೀಡಿದರು.

‘ಕಲಾವಿದನಿಗೆ ಜಾತಿ, ಮತ, ಧರ್ಮ ಇಲ್ಲ. ಆತನ ಜೀವನದಲ್ಲಿ ಕಷ್ಟಗಳು ಒಂದಾದ ಮೇಲೆ ಒಂದರಂತೆ ಬರುತ್ತವೆ. ಕಲಾವಿದ ಶಾಪಗ್ರಸ್ಥ ಗಂಧರ್ವ ಇದ್ದಂತೆ’ ಎಂದು ವಿಶ್ಲೇಷಿಸಿದರು.

‘ಅಳತೆಗೋಲು ಮೀರುತ್ತಿರುವ ಮಾತು’: ಕಾರ್ಯಕ್ರಮ ಉದ್ಘಾಟಿಸಿದ ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ‘ಇಂದು ಮಾತಾಡು ಇಂಡಿಯಾ ಸೃಷ್ಟಿಯಾಗುವ ನುಡಿಯ ಪೊಲ್ಯುಷನ್ (ಮಾಲಿನ್ಯ) ಅಳತೆಗೋಲು ಮೀರುತ್ತಿದೆ. ಆದರೂ ಮಾತನಾಡಬೇಕಿರುವುದು ವ್ಯಂಗ್ಯ’ ಎಂದರು.

ಬುದ್ಧ, ಬಸವ, ಅಂಬೇಡ್ಕರ್, ಕಾರ್ಲ್ಮಾರ್ಕ್ಸ್ ಅವರ ಪರಿಭಾಷೆಯಲ್ಲಿ ಮಾತನಾಡುವ ಸಂಕಥನಗಳನ್ನು ಕುರಿತು ನೋಡುವುದಾದರೆ ಮಾರ್ಕ್ಸ್ವಾದಿಗಳು ಮಾರ್ಕ್ ತತ್ವವನ್ನು ಮಾರ್ಕ್ಸ್ ಕಾರ್ಡ್ ತರಹ ಅರ್ಹತೆಗೋಸ್ಕರ ಬಳಸಿಕೊಳ್ಳುತ್ತಿದ್ದಾರೆ. ಬಸವಣ್ಣನನ್ನು ಅಂದು ಕೊಲೆ ಮಾಡಲಾಗಿತ್ತು. ಆದರೆ, ಬಸವಣ್ಣನ ತತ್ವಗಳನ್ನು ಇಡೀ ದಿವಸ ಕೊಲೆ ಮಾಡಲಾಗುತ್ತಿದೆ. ಇಂದು ಅಂಬೇಡ್ಕರ್ ಅವರ ಬಾಡಿ (ಶರೀರ) ಬೇಕಾಗಿದೆ, ಅವರ ಪ್ರಾಣ, ಒಳಗಿನ ಸಾರ ಬೇಕಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಾವು ಅನೇಕರ ಜೊತೆ ಗಡಿಗಳನ್ನು ಹಂಚಿಕೊಂಡಿದ್ದೇವೆ. ಗಡಿಗಳನ್ನು ಹಂಚಿಕೊಳ್ಳುವುದಕ್ಕಿಂತ ಸುಂದರ ಯಾವುದೂ ಇಲ್ಲ. ಆದರೆ, ಇಂದಿನ ದಿನಗಳಲ್ಲಿ ಸುಂದರ ಯಾವುದು, ಅಸುಂದರ ಯಾವುದು, ಸಂಸ್ಕೃತಿ–ವಿಕೃತಿ, ನಾಗರಿಕ–ಅನಾಗರಿಕ ಯಾವುದು ಎಂಬ ಗಡಿಗಳು ಮಾಸಿಹೋಗುತ್ತಿವೆ’ ಎಂದರು.

ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಪ್ರಾಸ್ತಾವಿಕವಾಗಿ ಮಾತನಾಡಿ, ‘ಅಳಿವಿನಂಚಿನಲ್ಲಿರುವ ಕಲೆ ಹಾಗೂ ಕಲಾವಿದರ ಸ್ಮೃತಿಯಲ್ಲಿರುವ ಕಥನಗಳು ಮುಂದಿನ ದಿನಗಳಲ್ಲಿ ಪಠ್ಯವಾಗಬೇಕು. ಕಲೆಯ ನಿಜ ವಾರಸುದಾರರನ್ನು ಗುರುತಿಸಿ ಮನ್ನಣೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಿಂದ ಅಜ್ಞಾತವಾಗಿರುವ ಕಲೆಗಳು ಹೊರಬರಲು ಸಾಧ್ಯ’ ಎಂದು ಹೇಳಿದರು.

ಕಥೆಗಾರ ಅಬ್ದುಲ್ ರಶೀದ್ ಸಮನ್ವಯಕಾರರಾಗಿ ಜುಲೇಖಾ ಅವರ ಪರಿಚಯ ಮಾಡಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ರಂಗಾಯಣ ಉಪ ನಿರ್ದೇಶಕ ಎಂ.ಡಿ. ಸುದರ್ಶನ್ ಇದ್ದರು.

‘ಬಾಣಂತಿಯಾಗಿದ್ದಾಗಲೂ ನಟನೆ’

‘ಮಗು ಜನ್ಮ ತಳೆದು ನಾಲ್ಕು ದಿನಗಳಿರುವಾಗಲೇ ನಾನು ಪಾತ್ರದಲ್ಲಿ ಅಭಿನಯಿಸಿದ್ದೆ. ಏಕೆಂದರೆ ಕರ್ತವ್ಯಕ್ಕೆ ಕರುಣೆ ಇಲ್ಲ. 8 ದಿವಸ ಕೆಲವೊಮ್ಮೆ 4 ದಿನಗಳಲ್ಲಿಯೇ ಕ್ಯಾಂಪ್ ಮುಗಿಯುತ್ತಿದ್ದವು. ಆ ವೇಳೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವುದು ದೊಡ್ಡ ಸವಾಲಾಗಿತ್ತು. ಮಕ್ಕಳು ಕಲಾವಿದರಾಗಲಿ. ಆದರೆ ಅವರಿಗೆ ವಿದ್ಯೆ ಬೇಕೇ ಬೇಕು. ಎಷ್ಟೋ ಸಲ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದೆ’ ಎಂದು ಜುಲೇಖಾ ಬೇಗಂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.