ನಂಜನಗೂಡು: ‘ಬದುಕಿನ ಜಂಜಾಟಗಳಿಂದ ಮುಕ್ತರಾಗಲು ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬುದ್ಧ ತೋರಿದ ಧ್ಯಾನ, ಮೌನದ ಹಾದಿಯಲ್ಲಿ ಸಾಗಬೇಕು’ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಅಂಗೈಯಲ್ಲಿ ಎಲ್ಲವೂ ದೊರಕುವ ಕಾಲಘಟ್ಟದಲ್ಲಿ ನಾವಿದ್ದೇವೆ. ವೇಗದ ಬದುಕಿನಲ್ಲಿ ತಾಳ್ಮೆ, ಸಮಾಧಾನ, ಸಂಯಮ, ಸಹನೆ ಎಂಬುದು ದೂರದ ಮಾತಾಗಿದೆ. ಪರಿಣಾಮ ನಾವೆಲ್ಲರೂ ಒತ್ತಡದ ಜೀವನಶೈಲಿಯಿಂದ ಬಳಲುತ್ತಿದ್ದೇವೆ. ಇವುಗಳಿಗೆ ಬುದ್ಧದ ಬೋಧನೆಯಲ್ಲಿ ಪರಿಹಾರವಿದೆ’ ಎಂದರು.

ಪ್ರಧಾನ ಭಾಷಣಕಾರರಾಗಿದ್ದ ಯೋಗ ಶಿಕ್ಷಕ ಪ್ರಕಾಶ್ ಜಿ.ಉಡಿಗಾಲ, ‘ಧ್ಯಾನ, ಮೌನ, ಆನಂದ ಅನುದಿನದ ಪರಿಕ್ರಮವಾಗಬೇಕೆಂಬುದೇ ಭಗವಾನ್ ಬುದ್ಧರ ಬೋಧನೆಯ ಮೂಲ ಆಶಯವಾಗಿದೆ’ ಎಂದು ಹೇಳಿದರು.

‘ಪ್ರತಿ ವ್ಯಕ್ತಿಯಲ್ಲೂ ಜ್ಞಾನವಿರುತ್ತದೆ. ಆ ಜ್ಞಾನ ಸುಜ್ಞಾನವಾಗಿ ಧ್ಯಾನ ಸ್ಥಿತಿಗೆ ಮರಳಬೇಕು. ಧ್ಯಾನದಿಂದ ಮೌನ ಸಂಪಾದಿಸಬೇಕು. ಮೌನದಿಂದ ಆನಂದವನ್ನು ಗಳಿಸಬೇಕು. ಈ ಸ್ಥಿತಿಗೆ ತಲುಪಿದಾಗ ನಮ್ಮ ಬೇಕು ಬೇಡಗಳ ಬಗ್ಗೆ ನಮಗೆ ಸ್ವಯಂ ಅರಿವಾಗುತ್ತದೆ. ಆಗ ಬದುಕಿನಲ್ಲಿ ಬೆಳಕು ಕಾಣಬಹುದು ಎಂಬುದು ಭಗವಾನ್ ಬುದ್ಧರ ಚಿಂತನೆಯಾಗಿತ್ತು. ಇದನ್ನು ಸಮಾಜಕ್ಕೆ ಧಾರೆ ಎರೆಯುವ ಮೂಲಕ ಸಹಸ್ರ ವರ್ಷ ಕಳೆದರೂ ಬುದ್ಧ ಪ್ರಕೃತಿಯಲ್ಲಿ ಅವ್ಯಕ್ತವಾಗಿ ಉಳಿದಿದ್ದಾರೆ’ ಎಂದು ತಿಳಿಸಿದರು.

ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ತಹಶೀಲ್ದಾರ್ ಸ್ಮಿತಾ ರಾಮ್, ತಾ.ಪಂ. ಇಒ ಜೆರಾಲ್ಡ್ ರಾಜೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗು, ನಗರಸಭಾ ಮಾಜಿ ಅಧ್ಯಕ್ಷ ಶ್ರೀಕಂಠಸ್ವಾಮಿ, ಕಾಂಗ್ರೆಸ್ ಎಸ್ಸಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಪ್ರಕಾಶ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಹಾಡ್ಯ ಜಯರಾಮ, ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಪ್ಪಿನಹಳ್ಳಿ ಶಿವಣ್ಣ, ಮಡಿವಾಳ ಸಮಾಜ ತಾಲ್ಲೂಕು ಘಟಕದ ಅಧ್ಯಕ್ಷ ಹೆಜ್ಜೆಗೆಪ್ರಸನ್ನ ಕುಮಾರ್, ಕೆ.ಎಂ. ಬಸವರಾಜು, ಕಳಲೆ ರಾಜೇಶ್, ದಸಂಸ ಜಿಲ್ಲಾ ಸಂಚಾಲಕರಾದ ಚುಂಚನಹಳ್ಳಿ ಮಲ್ಲೇಶ್, ಮಲ್ಲಹಳ್ಳಿ ನಾರಾಯಣ, ಶಂಕರಪುರ ಸುರೇಶ್, ಕಾರ್ಯ ಬಸವಣ್ಣ, ನಗರ್ಲೆ ಎಂ.ವಿಜಯಕುಮಾರ್, ಅಂಕಯ್ಯ, ವಾಸುದೇವಮೂರ್ತಿ, ಕುಮಾರಸ್ವಾಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.