ಹುಣಸೂರು (ಮೈಸೂರು ಜಿಲ್ಲೆ): ಹುಣಸೂರು ಉಪವಿಭಾಗದಲ್ಲಿ ಆದಿವಾಸಿ ಸಮುದಾಯದ ಅಭಿವೃದ್ಧಿಗೆ 1980ರಲ್ಲಿ ‘ಡೀಡ್’ ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಪ್ರಾರಂಭಿಸಿದ್ದ ಜೆರ್ರಿ ಪೈಸ್ (87) ಬುಧವಾರ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.

ಅಮೆರಿಕದಲ್ಲಿರುವ ಪುತ್ರಿ ಬರಬೇಕಿರುವುದರಿಂದಾಗಿ, ಅಂತ್ಯಕ್ರಿಯೆಯನ್ನು ಮಾರ್ಚ್ 7ರಂದು ನಡೆಸಲಾಗುವುದು, ಪಾರ್ಥಿವ ಶರೀರವನ್ನು ಮೈಸೂರಿನ ಸೇಂಟ್ ಜೋಸೆಫ್ ಆಸ್ಪತ್ರೆಯಲ್ಲಿ ಇಡಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಪರಿಚಯ: ‘ಡೀಡ್’ ಸಂಸ್ಥೆಯಲ್ಲಿ ಹಲವು ದಶಕ ಕಾರ್ಯನಿರ್ವಹಿಸಿದ್ದ ಜೆರ್ರಿ, ಆದಿವಾಸಿಗಳ ಆರೋಗ್ಯ, ಶಿಕ್ಷಣ, ವಸತಿ ಮತ್ತು ಅರಣ್ಯ ಹಕ್ಕುಗಳಿಗಾಗಿ ಶ್ರಮಿಸಿದ್ದರು. ಗಿರಿಜನರ ಸ್ವಾಭಿಮಾನದ ಬದುಕಿಗಾಗಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಜಾಗೃತಿಗೆ ಒತ್ತು ನೀಡಿದ್ದರು.

ಕರ್ನಾಟಕದಲ್ಲಿ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಮೊದಲ ಅಧ್ಯಕ್ಷರಾಗಿದ್ದರು. ಮೈಸೂರು ಜಿಲ್ಲೆಯಲ್ಲಿ ಸ್ವಯಂ ಸೇವಾ ಸಂಸ್ಥೆ ಮೈತ್ರಿಕೂಟ ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿದ್ದರು.

ಹುಣಸೂರು ನಗರದ ‘ಡೀಡ್’ ಸಂಸ್ಥೆಯಲ್ಲಿ ಮಾರ್ಚ್ 5ರಂದು ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ನಿರ್ದೇಶಕ ಶ್ರೀಕಾಂತ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.