ತಿ.ನರಸೀಪುರ: ಕಬ್ಬು ಬೆಳೆಗಾರ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಬ್ಬು ಬೆಳೆಗಾರರ ಸಂಘದ ಮುಖಂಡರು ಬೆಂಗಳೂರಿನಲ್ಲಿ ಈಚೆಗೆ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರ ಪರವಾಗಿ ಸೂಪರಿಂಟೆಂಡೆಂಟ್ ಕರಿಬಸಪ್ಪ ಅವರು ಮನವಿ ಸ್ವೀಕರಿಸಿದರು.

ಬಳಿಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮಾತನಾಡಿ, 'ಕಬ್ಬು ಬೆಳೆಗಾರರ ಸಮಸ್ಯೆಗಳು ಹೆಚ್ಚಿದ್ದು, ಕಾರ್ಖಾನೆಗಳು ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಪ್ರಸಕ್ತ ಸಾಲಿಗೆ ಕಬ್ಬಿನ ಎಫ್ಆರ್ಪಿ ದರ ಟನ್ಗೆ ಕೇವಲ ₹ 150 ಏರಿಕೆ ಮಾಡಿರುವುದು ಅವೈಜ್ಞಾನಿಕ. ಈ ಬಗ್ಗೆ ಪುನರ್ ಪರಿಶೀಲನೆ ಮಾಡಿಸಿ ಸಿಎಸಿಪಿ ವರದಿಯಂತೆ ಟನ್ ಕಬ್ಬಿಗೆ ₹ 4,500 ಬೆಲೆ ನಿಗದಿಪಡಿಸಿ, ಸಕ್ಕರೆ ಕಾರ್ಖಾನೆಗಳಿಂದ ಕಳೆದ ವರ್ಷದ ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡಿಸುವಂತೆ’ ಒತ್ತಾಯಿಸಿದರು.

‘ಕಳೆದ ವರ್ಷ ಸರ್ಕಾರ ಹೆಚ್ಚುವರಿಯಾಗಿ ಟನ್ಗೆ ₹ 150 ಬೆಲೆ ನಿಗದಿ ಮಾಡಿದ್ದರೂ, ಕಾರ್ಖಾನೆಗಳು ರೈತರಿಗೆ ಕೊಟ್ಟಿಲ್ಲ. ₹ 950 ಕೋಟಿ ಹಣ ಬಾಕಿ ಇದ್ದು ತಕ್ಷಣವೇ ಕೊಡಿಸುವುದು. ಕಬ್ಬಿನ ಎಫ್ಆರ್ಪಿ ದರ ರೈತನ ಹೊಲದಲ್ಲಿನ ದರವಾಗಿ ಬದಲಾಗಬೇಕು’ ಎಂದು ಹೇಳಿದರು.

‘ಸಕ್ಕರೆ ಕಾರ್ಖಾನೆಗಳಿಂದ ಸಕ್ಕರೆ ಮೋಸ ತಪ್ಪಿಸಲು ಇಳುವರಿ ಮಿತಿ ಕನಿಷ್ಠಟ 9 ಕೆಜಿ ಜಾರಿ ಆಗಬೇಕು. ಬೆಂಕಿ ಬಿದ್ದು ಸುಟ್ಟ ಕಬ್ಬಿಗೆ ಕಾರ್ಖಾನೆಗಳು ಕಬ್ಬಿನ ಹಣದಲ್ಲಿ ಶೇಕಡ 25 ರಷ್ಟು ಹಣ ಕಡಿತ ಸ್ಥಗಿತ, ತೂಕದಲ್ಲಿನ ಮೋಸ ತಪ್ಪಿಸಲು ಕಾರ್ಖಾನೆಗಳ ಬಳಿ ತೂಕದ ಯಂತ್ರ ಸ್ಥಾಪನೆ, ಯಂತ್ರದ ಕಟಾವಿನ ವೇಳೆ ಶೇ 8ರಷ್ಟು ಕಬ್ಬು ವೇಸ್ಟೇಜ್ ಕಡಿತ ತಪ್ಪಿಸಬೇಕು, ಹಾಗೂ ಕಾನೂನು ಬಾಹಿರವಾಗಿ ಕಬ್ಬು ಕಡಿತ ಮಾಡಿದ ಕಾರ್ಖಾನೆಗಳಿಗೆ ದಂಡ ಹಾಕಿ ಕಡಿತ ಮಾಡಿದ ಹಣ ರೈತರಿಗೆ ವಾಪಸ್ ಕೊಡಿಸಬೇಕು’ ಎಂದು ಒತ್ತಾಯಿಸಿದರು.

‘ಕಾರ್ಖಾನೆಗಳಿಂದ ಕಳೆದ ವರ್ಷದ ಕಬ್ಬಿನ ಬಾಕಿ ಸುಮಾರು 500 ಕೋಟಿ ರೂಪಾಯಿ ಕಬ್ಬು ಪೂರೈಕೆ ಮಾಡಿದ ರೈತರಿಗೆ ಕೊಡಬೇಕಿದ್ದು ತಕ್ಷಣವೇ ಕೊಡಿಸುವುದು ಸೇರಿದಂತೆ ಸಮಸ್ಯೆಗಳ ಬಗ್ಗೆ ತುರ್ತಾಗಿ ಕ್ರಮ ಕೈಗೊಂಡು ಕಬ್ಬು ಬೆಳೆಗಾರ ರೈತರ ರಕ್ಷಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಮನವಿ ಮಾಡಿದರು

ಈ ನಿಯೋಗದಲ್ಲಿ ಮೈಸೂರು - ಚಾಮರಾಜನಗರ ಜಿಲ್ಲಾಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ದೊಡ್ಕಾಟೂರು ನಾಗೇಶ್, ಕೋಟೆಪುರ ಜಗದೀಶ್, ಬಳ್ಳಾರಿ ಪರಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.