ಮೈಸೂರು: ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲೆಂದು ಪ್ರಾರ್ಥಿಸಿ ಗುರುವಾರ ಅಭಿಮಾನಿಗಳು ಇಲ್ಲಿನ ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ತೇಜೇಶ್ ಲೋಕೇಶ್ಗೌಡ ನೇತೃತ್ವದಲ್ಲಿ, ಡಿಕೆಶಿ ಫೋಟೊವುಳ್ಳ ‘ಸಿಎಂ–ಡಿಕೆ’ ಎಂದು ಬರೆದಿದ್ದ ಪೋಸ್ಟರ್ಗಳನ್ನು ಹಿಡಿದುಕೊಂಡು ಜೈಕಾರ ಹಾಕಿದ ಅಭಿಮಾನಿಗಳು, ‘ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿ’ ಎಂಬ ಘೋಷಣೆಯನ್ನೂ ಕೂಗಿದರು. ಈಡುಗಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದರು. ಶುಕ್ರವಾರವೇ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿ ಎಂದು ಆಶಿಸಿದರು.

‘ನಾಲ್ಕು ದಶಕಗಳಿಂದಲೂ ಕಾಂಗ್ರೆಸ್ ಸಂಘಟನೆಗಾಗಿ ದುಡಿಯುತ್ತಿರುವ ಶಿವಕುಮಾರ್, ಪಕ್ಷದ ಶಿಸ್ತಿನ ಸಿಪಾಯಿಯೂ ಹೌದು. ಪಕ್ಷದ ಟ್ರಬಲ್ ಶೂಟರ್, ಆಪತ್ಬಾಂಧವ ಕೂಡ ಆಗಿದ್ದಾರೆ. ಕಷ್ಟಪಟ್ಟು ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅವರು ಮುಖ್ಯಮಂತ್ರಿಯಾಗುವ ಅವಕಾಶ ಒದಗಿಬಂದಿರುವುದು ನಮಗೆ ಸೇರಿದಂತೆ ಕನ್ನಡಿಗರೆಲ್ಲರಿಗೂ ಖುಷಿಯ ವಿಷಯ. ಸಿದ್ದರಾಮಯ್ಯ–ಡಿ.ಕೆ.ಶಿವಕುಮಾರ್ ಅವರ ನಡುವೆ ಎರಡೂವರೆ ವರ್ಷ– ಎರಡೂವರೆ ವರ್ಷ ಅಧಿಕಾರದ ಹಂಚಿಕೆಯ ಮಾತುಕತೆ ಆಗಿತ್ತು. ಅಧಿಕಾರ ಹಸ್ತಾಂತರಿಸುವಲ್ಲಿ ಆರು ತಿಂಗಳು ವಿಳಂಬ ಆಗಿದೆ’ ಎಂದು ತೇಜೇಶ್ ಹೇಳಿದರು.

‘ಸಿದ್ದರಾಯಯ್ಯ ಅವರು ಜೆಡಿಎಸ್ನಿಂದ ಕಾಂಗ್ರೆಸ್ಗೆ ಬಂದ ವಲಸಿಗ. ಆದರೂ ಮೊದಲ ಅವಧಿಯಲ್ಲಿ ಐದು ವರ್ಷ ಸಂಪೂರ್ಣ ಅಧಿಕಾರ ಅನುಭವಿಸಿದ್ದರು. 2ನೇ ಅವಧಿಯಲ್ಲಿ ಮೂರು ವರ್ಷ ಪೂರೈಸಿದ್ದಾರೆ. ಅವರು ಈಗ ಸ್ಥಾನ ಬಿಟ್ಟುಕೊಡುತ್ತಿದ್ದು, ಅವರಿಗೂ ಒಳ್ಳೆಯದಾಗಲಿ. ಡಿಕೆಶಿ 40 ಕಾಣುತ್ತಿದ್ದ ಕನಸು ಈಡೇರುವ ಸುಯೋಗ ಈಗ ಬಂದಿದೆ’ ಎಂದರು.

‘ಹೊಸ ಮುಖ್ಯಮಂತ್ರಿ ನೆಲ, ಜಲ, ಭಾಷೆ ರಕ್ಷಣೆ ಬಗ್ಗೆ ಕೆಲಸ ಮಾಡಲಿ. ಈಗ ಜನರಿಗೆ ಕೊಡುತ್ತಿರುವ ಸೌಲಭ್ಯಗಳನ್ನು ಮುಂದುವರಿಸಿಕೊಂಡು ಹೋಗಲಿ. ಯಾವುದೇ ವಿಘ್ನಗಳಿಲ್ಲದೇ ಅವರು ಪ್ರಮಾಣವಚನ ಸ್ವೀಕರಿಸಲಿ ಎಂದು 101 ಈಡುಗಾಯಿ ಒಡೆದು ಪ್ರಾರ್ಥಿಸಿದ್ದೇವೆ’ ಎಂದು ಹೇಳಿದರು.

ಕೆ.ಎನ್.ನಾಗೇಗೌಡ, ಬೋಗಾದಿ ಸಿದ್ದೇಗೌಡ, ಸಿಂದುವಳ್ಳಿ ಶಿವಕುಮಾರ್, ಕೃಷ್ಣಪ್ಪ, ವರಕೋಡು ಕೃಷ್ಣೇಗೌಡ, ಗಿರೀಶ್ ಎಚ್., ಸೋಮೇಗೌಡ, ಹನುಮಂತಯ್ಯ, ನಾರಾಯಣಗೌಡ, ಕುಮಾರ್ ಗೌಡ, ಬಸವರಾಜು, ತ್ಯಾಗರಾಜ್, ಹೊಂಬೇಗೌಡ , ನೇಹಾ, ಸುಜಾತಾ, ಪದ್ಮಾ, ಶಿವರಾಂಗೌಡ, ಶಿವರಾಜ್, ರವೀಶ್, ಸುಬ್ಬೇಗೌಡ, ಚಂದ್ರಶೇಖರ್, ರಮೇಶ್, ಕೇದಾರ್, ಪ್ರಭಾಕರ್, ಶಿವಲಿಂಗಯ್ಯ, ಶ್ರೀನಿವಾಸ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.