ಮೈಸೂರು: ‘ಡ್ರಗ್ಸ್ ಉತ್ಪಾದನೆ ನಡೆದಿದೆ’ ಎಂಬ ಅನುಮಾನದಲ್ಲಿ ದೆಹಲಿಯ ಎನ್ಸಿಬಿ (ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊ) ತಂಡವು ಬುಧವಾರ ಬೆಳಿಗ್ಗೆ ನಗರದ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿರುವ ಕಟ್ಟಡದ ಮೇಲೆ ದಾಳಿ ನಡೆಸಿದ್ದು, ರಾತ್ರಿಯವರೆಗೂ ಪರಿಶೀಲನೆ ನಡೆಸಿತು. ಆದರೆ ಶಂಕಾಸ್ಪದವಾದ ಏನೊಂದೂ ಸಿಕ್ಕಿಲ್ಲ. ಈ ದಾಳಿಯ ಮಾಹಿತಿಯನ್ನು ಸ್ಥಳೀಯ ಪೊಲೀಸರಿಂದ ಮುಚ್ಚಿಡಲಾಗಿತ್ತು.

ಸ್ಥಳೀಯರಾದ ಬೋರೇಗೌಡ ಎಂಬವರ ಒಡೆತನದ ಕಟ್ಟಡವನ್ನು, ಆಲನಹಳ್ಳಿ ನಿವಾಸಿ ಗಣಪತ್ ಲಾಲ್ ಬಾಡಿಗೆಗೆ ಪಡೆದಿದ್ದರು. ಅಲ್ಲಿ ‘ಟುಕ್– ಟುಕ್ ಹೌಸ್ ಹೋಲ್ಡ್ ಕೆಮಿಕಲ್ಸ್ ಪ್ರೊಡಕ್ಷನ್ ಸಲ್ಯೂಷನ್ ಮ್ಯಾನಿಫ್ಯಾಕ್ಚರಿಂಗ್’ ಹೆಸರಿನ ಘಟಕ ನಡೆಸುತ್ತಿದ್ದರು. ‘ಪ್ರಕರಣವೊಂದರ ಆರೋಪಿಯ ಸಂಬಂಧಿಕರಿಗೆ ಸೇರಿದ ಆ ಘಟಕದಲ್ಲಿ ಮಾದಕ ವಸ್ತು ಉತ್ಪಾದಿಸಲಾಗುತ್ತಿದೆ’ ಎಂಬ ಮಾಹಿತಿ ಪೊಲೀಸರಿಗೆ ದೊರಕಿತ್ತು.

ತಕ್ಷಣವೇ ಎನ್ಸಿಬಿಯ 8 ಅಧಿಕಾರಿ ಹಾಗೂ ಸಿಬ್ಬಂದಿ ಎರಡು ಕಾರುಗಳಲ್ಲಿ ಗಣಪತಿ ಲಾಲ್ ಮನೆಗೆ ಹಾಗೂ ಘಟಕಕ್ಕೆ ಏಕಾಏಕಿ ದಾಳಿ ನಡೆಸಿದರು. ದಾಳಿಯ ವೇಳೆ ಖಾಲಿ ಬಾಟಲಿ, ಕಾಸ್ಮಿಕ್ ಸೋಡಾ ಮತ್ತು ಉಪ್ಪು ಪತ್ತೆಯಾಗಿದೆ.

‘ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ರಾಜಸ್ಥಾನದಲ್ಲಿ ನಾಲ್ವರ ಬಂಧನವಾಗಿದ್ದು, ಮನೋಹರ್ ಬಿಷ್ಣೋಯಿ ಎಂಬ ಆರೋಪಿಯು ನೀಡಿದ ಮಾಹಿತಿ ಆಧರಿಸಿ ದಾಳಿ ನಡೆದಿದೆ. ಕಟ್ಟಡದಲ್ಲಿ ಡ್ರಗ್ಸ್ ಉತ್ಪಾದಿಸಿ, ರಾಜಸ್ಥಾನದಲ್ಲಿ ಮಾರಲಾಗುತ್ತಿತ್ತು’ ಎಂದು ಮೂಲಗಳು ತಿಳಿಸಿವೆ.

₹46 ಸಾವಿರ ಬಾಡಿಗೆ: ‘ಬೋರೇಗೌಡರಿಗೆ ಕೆಐಡಿಬಿಯಿಂದ ಭೂಮಿ ಮಂಜೂರಾಗಿದೆ. ಗಣಪತ್ ಲಾಲ್ ಅವರು ಫಿನಾಯಿಲ್ ಘಟಕ ಆರಂಭಿಸಲು ₹ 5 ಲಕ್ಷ ಮುಂಗಡ ಪಾವತಿ ಹಾಗೂ ₹ 46 ಸಾವಿರ ತಿಂಗಳ ಬಾಡಿಗೆಗೆ ಒಪ್ಪಿ ಕರಾರು ಪತ್ರ ಮಾಡಲಾಗಿದೆ. ಹೈಟೆಕ್ ಯಂತ್ರಗಳನ್ನು ಅಳವಡಿಸಿದ್ದರೂ ಕೆಲಸ ಆರಂಭಿಸಿಲ್ಲ. ಲಾಲ್ ಅವರ ಸಂಬಂಧಿಕ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರಿಂದ ದಾಳಿ ನಡೆದಿದೆ. ಬೋರೇಗೌಡರನ್ನು ಅದೇ ಕಾರಣಕ್ಕೆ ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಗೌಡರ ಪರ ವಕೀಲ ಭರತ್ ತಿಳಿಸಿದರು.

‘ನಿರ್ಜನ ಪ್ರದೇಶದಲ್ಲಿರುವ ಕಟ್ಟಡದಲ್ಲಿ ರಾತ್ರಿ ವೇಳೆ ಹಿಂದಿ ಭಾಷಿಕರಾದ ಕೆಲವು ಯುವಕರು ಕೆಲಸ ಮಾಡುತ್ತಿದ್ದರು’ ಎಂದು ಸ್ಥಳೀಯರು ತಿಳಿಸಿದ್ದಾರೆ. ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಕೆ.ಎಸ್.ಸುಂದರ್ರಾಜ್ ಸ್ಥಳಕ್ಕೆ ಭೇಟಿ ನೀಡಿದರು.

2025ರ ಜು.26ರಂದು ಬನ್ನಿಮಂಟಪದ ವರ್ತುಲ ರಸ್ತೆಯ ಉನ್ನತಿ ನಗರದ ಗ್ಯಾರೇಜ್ನಲ್ಲಿ ನಡೆಸುತ್ತಿದ್ದ ಮಾದಕ ವಸ್ತು ತಯಾರಿಕಾ ಘಟಕಕ್ಕೆ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ ಬಳಿಕ ನಗರ ಪೊಲೀಸ್ ಇಲಾಖೆಯು ತೀವ್ರ ಕಾರ್ಯಾಚರಣೆ ನಡೆಸಿದೆ. ಅದರ ನಡುವೆಯೂ ಈ ರೀತಿಯ ಆರೋಪ ಕೇಳಿ ಬರುತ್ತಿರುವುದು ಜನರಲ್ಲೂ ಆತಂಕ ಮೂಡಿಸುತ್ತಿದೆ. ವರ್ಷದಿಂದೀಚೆ ನಡೆಯುತ್ತಿರುವ ಅಪರಾಧ ಪ್ರಕರಣಗಳು ಕಾನೂನು– ಸುವ್ಯವಸ್ಥೆಯನ್ನು ಬಿಗಿಗೊಳಿಸಬೇಕು ಎಂಬುದನ್ನು ಸಾರಿ ಹೇಳುತ್ತಿವೆ.

ಎನ್ಸಿಬಿ ತಂಡವು ಸ್ಥಳೀಯ ಪೊಲೀಸರಿಗೂ ಹೆಚ್ಚಿನ ಮಾಹಿತಿ ನೀಡಿಲ್ಲ, ಅವರ ಪ್ರಕಟಣೆಯ ಬಳಿಕ ನಗರದಲ್ಲಿ ಎರಡನೇ ಡ್ರಗ್ ಉತ್ಪಾದನಾ ಘಟಕ ಪತ್ತೆಯಾಯಿತೇ?, ಇಲ್ಲವೇ? ಎಂಬುದು ಖಚಿತವಾಗಲಿದೆ.

ವಿಚಾರಣೆಗಾಗಿ ಭೇಟಿ: ಲಾಟ್ಕರ್

‘ಅಹಮದಾಬಾದ್ನ ಪ್ರಕರಣವೊಂದರ ವಿಚಾರಣೆಗಾಗಿ ಎನ್ಸಿಬಿ ತಂಡವು ಭೇಟಿ ನೀಡಿದೆ. ಆ ಪ್ರಕರಣದ ಆರೋಪಿಯು ಗಣಪತಿ ಲಾಲ್ ಪತ್ನಿಯ ತಂಗಿಯ ಗಂಡ ಹೀಗಾಗಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇಲ್ಲಿ ಫಿನಾಯಿಲ್ ತಯಾರಿಸುವ ಸಾಮಾಗ್ರಿಗಳು ಸಿಕ್ಕಿವೆ. ಮಾದಕ ವಸ್ತು ತಯಾರಿಸಲು ಬಳಸುವ ವಸ್ತುಗಳು ಸಿಕ್ಕಿಲ್ಲ. ನಗರ ಪೊಲೀಸ್ ಇಲಾಖೆಯಿಂದಲೂ ಡ್ರಗ್ಸ್ ಮಾರಾಟದ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಈ ಭಾಗದಲ್ಲಿ ಇಂಥ ಚಟುವಟಿಕೆ ನಡೆಯುತ್ತಿರಲಿಲ್ಲ. ಎನ್ಸಿಬಿ ತಂಡವು ಮಾಹಿತಿ ನೀಡಿ ಬಂದಿದ್ದು ಹೆಬ್ಬಾಳ ಪೊಲೀಸರೂ ಸಹಕರಿಸಿದ್ದಾರೆ’ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.