ಮೈಸೂರು: ಯೂರಿಯಾ ರಸಗೊಬ್ಬರ ದುರ್ಬಳಕೆ ತಡೆಯಲು ರೈತರ ಎಫ್ಐಡಿ ಸಂಖ್ಯೆ ಆಧರಿಸಿ ವಿತರಣೆ ವ್ಯವಸ್ಥೆಯನ್ನು ಸರ್ಕಾರ ಜಾರಿಗೊಳಿಸಿದೆ.

‘ಯೂರಿಯಾ ಖರೀದಿಗೆ ಇನ್ಮುಂದೆ ರೈತರು ಕಡ್ಡಾಯವಾಗಿ ಎಫ್ಐಡಿ– ಗುರುತಿನ ಸಂಖ್ಯೆ ಹೊಂದಿರಬೇಕು. ಆ ಎಫ್ಐಡಿಯಲ್ಲಿರುವ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ರಸಗೊಬ್ಬರ ಪ್ರಮಾಣವನ್ನು ನಿರ್ಧರಿಸಿ ವಿತರಿಸಲಾಗುವುದು. ರೈತರು ತಮ್ಮ ಹೆಸರಿನಲ್ಲಿರುವ ಎಲ್ಲಾ ಕೃಷಿ ಜಮೀನಿನ ಆರ್ಟಿಸಿ ಅಥವಾ ಪಹಣಿಗಳನ್ನು ಜೋಡಿಸುವುದು ಅವಶ್ಯವಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಎಚ್. ರವಿ ತಿಳಿಸಿದ್ದಾರೆ.

‘ಹೊಸದಾಗಿ ಎಫ್ಐಡಿ ನೋಂದಣಿ ಹಾಗೂ ಆರ್ಟಿಸಿ ಜೋಡಣೆಗೆ ಅವಕಾಶವಿದೆ. ಇದುವರೆಗೂ ಎಫ್ಐಡಿ ಪಡೆಯದಿರುವ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಅಥವಾ ಪಶುಸಂಗೋಪನಾ ಇಲಾಖೆ ಕಚೇರಿಗಳನ್ನು ಸಂಪರ್ಕಿಸಬೇಕು. ಆಧಾರ್, ಪಹಣಿ, ಬ್ಯಾಂಕ್ ಖಾತೆ ವಿವರಗಳನ್ನು ನೀಡಿ ಎಫ್ಐಡಿ ಪಡೆದುಕೊಳ್ಳಬೇಕು. ಈಗಾಗಲೇ ಪಡೆದಿರುವವರು ಎಲ್ಲಾ ಕೃಷಿ ಜಮೀನಿನ ಆರ್ಟಿಸಿಗಳನ್ನು ಎಫ್ಐಡಿಗೆ ಜೋಡಿಸಲು ಅವಕಾಶವಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಅಧಿಕೃತ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ‘ಕೆ-ಕೆಸಾನ್’ ತಂತ್ರಾಂಶದಲ್ಲಿ ರೈತರ ಎಫ್ಐಡಿ ಸಂಖ್ಯೆ ಬಳಸಿ ರಸಗೊಬ್ಬರ ಮಾರಬೇಕು. ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ವ್ಯವಸ್ಥೆಯನ್ನು ಪೂರ್ವಭಾವಿಯಾಗಿ ಮಾಡಿಕೊಳ್ಳಬೇಕು. ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ತಂತ್ರಾಂಶದ ಬಳಕೆ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು’ ಎಂದು ಸೂಚಿಸಿದ್ದಾರೆ.

‘ಯೂರಿಯಾ ರಸಗೊಬ್ಬರವನ್ನು ಯಾವುದೇ ಕಾರಣಕ್ಕೂ ನಿಯಮ ಮೀರಿ ಹೆಚ್ಚಿನ ಬೆಲೆಗೆ ಅಥವಾ ಕೃಷಿಯೇತರ ಉದ್ದೇಶಕ್ಕೆ ಮಾರಾಟ ಮಾಡಿದರೆ, ಅಂಥವರ ಪರವಾನಗಿ ರದ್ದುಪಡಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಯೂರಿಯಾ ದುರ್ಬಳಕೆ ಕಂಡುಬಂದಲ್ಲಿ ಮೊ.ಸಂ. 82779 33100/ 82779 33101 ಸಂಪರ್ಕಿಸಬಹುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.