ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ಸಿ.ಎಂ ನಿವಾಸಕ್ಕೆ ಮುತ್ತಿಗೆ: ರೈತರು ವಶಕ್ಕೆ

ಬಾಕಿ ಹಣ, ಹೆಚ್ಚುವರಿ ದರ ನಿಗದಿಗಾಗಿ ಕಬ್ಬು ಬೆಳೆಗಾರರ ಪ್ರತಿಭಟನೆ
Published : 9 ನವೆಂಬರ್ 2023, 14:29 IST
Last Updated : 9 ನವೆಂಬರ್ 2023, 14:29 IST
ಫಾಲೋ ಮಾಡಿ
Comments

ಮೈಸೂರು: ಕಬ್ಬು ಬಾಕಿ ಹಣ ಹಾಗೂ ಹೆಚ್ಚುವರಿ ದರ ನಿಗದಿಗೆ ಆಗ್ರಹಿಸಿ ನಗರದ ಟಿ.ಕೆ.ಬಡಾವಣೆಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದರು.

ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಸದಸ್ಯರು ಮುತ್ತಿಗೆ ಮುಂದಾದಾಗ ಮನೆಗೆ 100 ಮೀಟರ್‌ ಹಿಂದೆಯೇ ಪೊಲೀಸರು ಅವರನ್ನು ತಡೆದರು. ಆಕ್ರೋಶಗೊಂಡ ರೈತರು ಮನೆಯತ್ತ ಮುನ್ನುಗ್ಗಿದಾಗ ಪೊಲೀಸರು ಅವರನ್ನು ಬಂಧಿಸಿ, ಬಿಡುಗಡೆ ಮಾಡಿದರು.

ಬಿಗಿಭದ್ರತೆ:

ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಮುಖ್ಯಮಂತ್ರಿ ನಿವಾಸವನ್ನು ಸಂಪರ್ಕಿಸುವ ನಾಲ್ಕು ರಸ್ತೆಗಳಿಗೂ ಬ್ಯಾರಿಕೇಡ್‌ ಅಳವಡಿಸಿ ಸಂಚಾರ ನಿರ್ಬಂಧಿಸಿದ್ದರು. ಮನೆ ಮುಂಭಾಗವೂ 100ಕ್ಕೂ ಹೆಚ್ಚು ಕೆಎಸ್‌ಆರ್‌ಪಿ, ವಿಶೇಷ ಕಾರ್ಯಪಡೆ ಕಮಾಂಡೊಗಳು ಭದ್ರತೆ ಒದಗಿಸಿದ್ದರು.

ತಮಟೆ ಚಳವಳಿ:

ಮೈಸೂರು, ಚಾಮರಾಜನಗರ, ಹಾಸನ, ಬೆಂಗಳೂರು ಗ್ರಾಮಾಂತರದಿಂದ ಆಗಮಿಸಿದ್ದ ನೂರಾರು ರೈತರು ಮುಖ್ಯಮಂತ್ರಿ ನಿವಾಸದ ಮುಂದೆ ಜಮಾಯಿಸಿ, ತಮಟೆ ಚಳವಳಿ ನಡೆಸಿದರು. ರಸ್ತೆಯಲ್ಲೇ ಮಲಗಿ ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿದರು. ರೈತರ ಬಂಧನದ ಬಳಿಕ ಸಿಎಆರ್‌ ಮೈದಾನದಲ್ಲಿ ನೂರಾರು ರೈತರು ಸಭೆ ಸೇರಿ ಮುಂದಿನ ಹೋರಾಟದ ಕಾರ್ಯಯೋಜನೆ ರೂಪಿಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಮಾತನಾಡಿ, ‘ರೈತರ ಕೂಗಿಗೆ ಸ್ಪಂದಿಸುವ ಬದಲು ಪ್ರತಿಭಟಿಸುವವರ ಬಾಯಿ ಮುಚ್ಚಿಸುತ್ತಿರುವುದು ಸರ್ವಾಧಿಕಾರಿ ಧೋರಣೆ. ಕಬ್ಬು ಬೆಳೆಗಾರರಿಗೆ ಘೋಷಿಸಿರುವ ಬೆಂಬಲ ಬೆಲೆಯ ಬಾಕಿ ಹಣ ಪಾವತಿಸಿ. ಪ್ರಸಕ್ತ ಸಾಲಿಗೆ ಹೆಚ್ಚುವರಿ ದರ ನಿಗದಿ ಮಾಡಿ, ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದರು.

ಕಬ್ಬು ಬಾಕಿ ಹಣ ಹಾಗೂ ಹೆಚ್ಚುವರಿ ದರ ನಿಗದಿಗೆ ಆಗ್ರಹಿಸಿ ನಗರದ ಟಿ.ಕೆ.ಬಡಾವಣೆಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆಗೆ ಯತ್ನಿಸಿದ ರೈತ ಮುಖಂಡರನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದರು– ಪ್ರಜಾವಾಣಿ ಚಿತ್ರ
ಕಬ್ಬು ಬಾಕಿ ಹಣ ಹಾಗೂ ಹೆಚ್ಚುವರಿ ದರ ನಿಗದಿಗೆ ಆಗ್ರಹಿಸಿ ನಗರದ ಟಿ.ಕೆ.ಬಡಾವಣೆಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆಗೆ ಯತ್ನಿಸಿದ ರೈತ ಮುಖಂಡರನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದರು– ಪ್ರಜಾವಾಣಿ ಚಿತ್ರ

ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕಾರ್ಯಾಧ್ಯಕ್ಷ ಹಳ್ಳಿಕರಂಡಿ ಭಾಗ್ಯರಾಜ್, ಕಿರುಗಸೂರು ಶಂಕರ್ ಇದ್ದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT