ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಗೂರು: ಆನೆ ದಾಳಿಗೆ ಅರಣ್ಯ ವೀಕ್ಷಕ ಸಾವು

Last Updated 5 ಮಾರ್ಚ್ 2023, 5:08 IST
ಅಕ್ಷರ ಗಾತ್ರ

ಸರಗೂರು: ಕೆಲಸದ ನಿಮಿತ್ತ ಕಾಡಿನಲ್ಲಿ ತೆರಳುತ್ತಿದ್ದ ಅರಣ್ಯ ಸಿಬ್ಬಂದಿ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಅರಣ್ಯ ವೀಕ್ಷಕ ಬೊಮ್ಮ (59) ಮೃತಪಟ್ಟರು.

ತಾಲ್ಲೂಕಿನ ದಡದಹಳ್ಳಿ ಹಾಡಿಯ ಬೊಮ್ಮ ಅವರಿಗೆ ಪತ್ನಿ, ಪುತ್ರಿ ಇದ್ದಾರೆ.

ವಿವರ: ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ವಾಚರ್‌ ಮಧು ಕೋಯ್ಲಿರ್ ಅವರೊಂದಿಗೆ ಬೊಮ್ಮ ಕಲ್ಕೆರೆ ವಲಯ ಅರಣ್ಯ ವ್ಯಾಪ್ತಿಯ ವಡೆರಹಳ್ಳಿ ಹಾಡಿಯಿಂದ ಎರವಕಡು ಕ್ಯಾಂಪ್‌ಗೆ ನಡೆದುಕೊಂಡು ಹೋಗುವಾಗ ಕಾಡಿನಿಂದ ಹೊರ ಬಂದ ಆನೆ ಬೊಮ್ಮ ಅವರನ್ನು ಓಡಿಸಿಕೊಂಡು ಹೋಗಿದೆ. ಈ ವೇಳೆ ಅವರು ಗುಂಡಿಗೆ ಬಿದ್ದಿದ್ದು, ಆನೆಯು ಅವರ ಸೊಂಟಕ್ಕೆ ಬಲವಾಗಿ ತಿವಿದಿದ್ದರಿಂದ ಸ್ಥಳದಲ್ಲೇ ಅಸುನೀಗಿದರು. ಮಧು ತಪ್ಪಿಸಿಕೊಂಡು ಸಿಬ್ಬಂದಿಗೆ ಕರೆ ಮಾಡಿ ತಿಳಿಸಿದರು.

ಶಾಸಕ ಸಿ.ಅನಿಲ್ ಚಿಕ್ಕಮಾದು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ತಿಳಿಸಿ, ಧನಸಹಾಯ ಮಾಡಿದರು. ಬೊಮ್ಮ ಕುಟುಂಬಕ್ಕೆ ಇಲಾಖೆಯಿಂದ ₹30 ಲಕ್ಷ ಪರಿಹಾರ ಹಾಗೂ ಸದಸ್ಯರೊಬ್ಬರಿಗೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ.

ಸಿಎಫ್ ಡಾ.ರಮೇಶ್‌ ಕುಮಾರ್, ಎಸಿಎಫ್ ಪರಮೇಶ್, ವಲಯ ಅರಣ್ಯಾಧಿಕಾರಿ ಪುನೀತ್‌ ಕುಮಾರ್, ಅರಣ್ಯ ಸಿಬ್ಬಂದಿ ಮನೋಜ್, ಸಂತೋಷ್, ಫಾರೂಕ್, ಸರಗೂರು ಪ.ಪಂ ಸದಸ್ಯ ಶ್ರೀನಿವಾಸ್, ಪಿ.ಎಲ್.ಡಿ ಬ್ಯಾಂಕ್ ಸದಸ್ಯ ಡಿ.ಸಿ.ಸಿದ್ದಪ್ಪ, ಮುಖಂಡ ಬಸವರಾಜು, ದಡದಹಳ್ಳಿ ಚಿನ್ನಸ್ವಾಮಿ, ಸಿಪಿಐ ಲಕ್ಷ್ಮೀಕಾಂತ್, ಪಿಎಸ್‌ಐ ಶ್ರವಣದಾಸರೆಡ್ಡಿ, ಸಿಬ್ಬಂದಿ ನಾಗನಾಯಕ, ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT