ಮೈಸೂರು: ರಾಜ್ಯ ಸರ್ಕಾರವು ಬೈಕ್ ಟ್ಯಾಕ್ಸಿ ಚಾಲಕರಿಗೆ ಸೂಕ್ತ ನೀತಿ ರೂಪಿಸಿ ಕಾರ್ಯಾಚರಣೆಗೆ ಅನುಮತಿ ನೀಡಬೇಕು ಎಂದು ಬೈಕ್ ಟ್ಯಾಕ್ಸಿ ಚಾಲಕರ ಗುಂಪು ಒತ್ತಾಯಿಸಿದೆ.

ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಿರುವ ಸರ್ಕಾರದ ನಿಲುವನ್ನು ಪುನರ್ ವಿಮರ್ಶಿಸುವಂತೆ, ಪರಿಹಾರ ಕಂಡುಕೊಳ್ಳುವಂತೆ ಆ ವೃತ್ತಿಯಲ್ಲಿ ತೊಡಗಿರುವವರು ಒತ್ತಾಯಿಸಿದರು.

ಮೈಸೂರಿನ ರವಿ ಮಾತನಾಡಿ, ‘ನನಗೆ ಪತ್ನಿ, ಇಬ್ಬರು ಮಕ್ಕಳಿದ್ದು, ನನ್ನನ್ನೇ ಅವಲಂಬಿಸಿದ್ದಾರೆ. ಬೈಕ್ ಟ್ಯಾಕ್ಸಿ ನಿಷೇಧದಿಂದಾಗಿ ಸಂಸಾರ ನಿರ್ವಹಿಸುವುದು ಹೇಗೆ ಎಂಬುದು ಗೊತ್ತಾಗುತ್ತಿಲ್ಲ. ಮನೆ ಬಾಡಿಗೆ, ಜೀವನ ನಡೆಸಲು ಸಾಲ ಮಾಡಿ ಕಂಗಾಲಾಗಿದ್ದೇನೆ. ನಿಷೇಧವು ನಮ್ಮ ಉದ್ಯೋಗಗಳನ್ನು ಮಾತ್ರವಲ್ಲ, ಘನತೆಯ ಬದುಕನ್ನು ಕಿತ್ತುಕೊಂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಪ್ರಯಾಣದ ಆಯ್ಕೆಗೂ ಸಮಸ್ಯೆ ಎದುರಾಗಿದೆ. ದೇಶದ ಇತರ 19 ರಾಜ್ಯಗಳು ಈಗಾಗಲೇ ಬೈಕ್ ಟ್ಯಾಕ್ಸಿಗಳ ನೀತಿಗಳನ್ನು ಹೊಂದಿವೆ. ರಾಜ್ಯವೂ ಅಂತದ್ದೇ ನೀತಿ ಅನುಸರಿಸಿ ಸಹಕರಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.