ಮೈಸೂರು: ‘ದೇವರು ದೇವಸ್ಥಾನದಲ್ಲಿ ಮಾತ್ರವಲ್ಲ ಎಲ್ಲ ಕಡೆಯೂ ಇದ್ದಾನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ವರುಣ ಹೋಬಳಿಯ ಪಿಲ್ಲಹಳ್ಳಿ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಲಾದ ದಂಡಿಮಾರಮ್ಮ ದೇವಾಲಯ ಉದ್ಘಾಟನೆ ಹಾಗೂ ಕುಂಭಕಳಸ ಪ್ರತಿಷ್ಠಾಪನೆಯನ್ನು ಶನಿವಾರ ನೆರವೇರಿಸಿದ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇವರು, ದೇವತೆ ದೇಗುಲಗಳಲ್ಲಿ ಇರುತ್ತಾರೆಂಬುದು ನಂಬಿಕೆ. ದೇವರ ಆರಾಧನೆಯಿಂದ ಒಳಿತಾಗುತ್ತದೆ ಎಂಬ ಯಾರ ನಂಬಿಕೆಯನ್ನು ನಾನು ವಿರೋಧಿಸುವುದಿಲ್ಲ. ಆದರೆ, ದೇವರು ಎಲ್ಲೆಡೆಯೂ ಇದ್ದಾನೆ ಎಂದು ನಂಬುವವನು ಮತ್ತು ಆಚರಿಸುವವನು ನಾನು’ ಎಂದರು.

ಮೈಸೂರು ತಾಲ್ಲೂಕಿನ ಜನರನ್ನು ಮರೆಯಲಾಗದು: ‘ತಾಲ್ಲೂಕು ಅಭಿವೃದ್ಧಿ ಮಂಡಳಿ ಚುನಾವಣೆಗೆ 1978ರಲ್ಲಿ ಸ್ಪರ್ಧಿಸಿದ್ದೆ. ಆಗ ಗೆದ್ದಿದ್ದೆ. ನಂತರ ಚಾಮುಂಡೇಶ್ವರಿ ಕ್ಷೇತ್ರದಿಂದ 1983ರಲ್ಲಿ ಸಹಾಯ ಮಾಡಿದಿರಿ. ಮೈಸೂರು ತಾಲ್ಲೂಕಿನ ಜನರನ್ನು ನಾನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಈವರೆಗೆ ಎಂಟು ಚುನಾವಣೆಯಲ್ಲಿ ಗೆದ್ದಿದ್ದೇನೆ. ರಾಜ್ಯದ ಮುಖ್ಯಮಂತ್ರಿ ಆಗಲು ಸಾಧ್ಯವಾಯಿತು. ನನ್ನ ವ್ಯಕ್ತಿತ್ವ ಒಂದರಿಂದಲೇ ಸಾಧ್ಯವಾಗುವುದಿಲ್ಲ. ಜನರು ಆಶೀರ್ವಾದ ಮಾಡಬೇಕಾಗುತ್ತದೆ. ನೀವು ಆಶೀರ್ವದಿಸಿದ್ದರಿಂದಲೇ ಸಾಧ್ಯವಾಗಿದೆ’ ಎಂದರು.

‘ಚಾಮುಂಡೇಶ್ವರಿ ಹಾಗೂ ವರುಣ ಕ್ಷೇತ್ರದ ಜನರಿಗೆ ನಾನು ಕೃತಜ್ಞತಾ ಭಾವದಿಂದ ಇರುತ್ತೇನೆ. ಪಿಲ್ಲಹಳ್ಳಿ ಜನರು ಎಂದಿಗೂ ನನ್ನ ಕೈಬಿಟ್ಟಿಲ್ಲ. ನಿಮ್ಮ ಜೊತೆಗಿನ ಸಂಬಂಧವೇ ನಾನು ದೇವಸ್ಥಾನದ ಉದ್ಘಾಟನೆಗೆ ಬರಲು ಕಾರಣವಾಯಿತು. ನಾನು ಇಲ್ಲಿಗೆ ಮತ ಕೇಳಲು ಬರಲಿ, ಬಾರದಿರಲಿ, ಮತ ಹಾಕುತ್ತಿದ್ದೀರಿ. 1978ರಿಂದಲೂ ಬೆಂಬಲಿಸುತ್ತಿದ್ದೀರಿ. ಮುಂದೆಯೂ ಆಶೀರ್ವಾದ ಇದ್ದೇ ಇರುತ್ತದೆ ಎಂಬ ನಂಬಿಕೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಂತರ ಕಡಿಮೆ ಮಾಡಲು: ‘ರಾಜಕೀಯ ಪ್ರಾರಂಭ ಮಾಡಿದ ದಿನದಿಂದ ಇಲ್ಲಿವರೆಗೂ ಸಮಾಜದಲ್ಲಿ ಬದಲಾವಣೆಗೆ ಶ್ರಮಿಸಿದ್ದೇನೆ. ಬಡವರು- ಶ್ರೀಮಂತರ ನಡುವಿನ ಅಂತರ ಕಡಿಮೆಯಾಗಬೇಕು ಎನ್ನುವುದು ನನ್ನ ಮುಖ್ಯ ಆಶಯ. ಇದಕ್ಕಾಗಿಯೇ ನಾವು ಕಾರ್ಯಕ್ರಮ ಕೊಡುತ್ತಿದ್ದೇವೆ. ಎಲ್ಲ ಜಾತಿ, ಧರ್ಮದವರಿಗೂ ಸಾಮಾಜಿಕ ಆರ್ಥಿಕ ಶಕ್ತಿ ಬರಬೇಕು. ಇದಕ್ಕಾಗಿ ಬಡವರನ್ನು ಮೊದಲ ಗುರಿಯಾಗಿ ಇಟ್ಟುಕೊಂಡು ಕಾರ್ಯಕ್ರಮ ನೀಡುತ್ತಿದ್ದೇನೆ’ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ‘ವರುಣ ಕ್ಷೇತ್ರದ ಸಮಗ್ರ ಅಭಿವೃದ್ಧಿ ನಮ್ಮ ಗುರಿಯಾಗಿದೆ. ಕ್ಷೇತ್ರದ ಚಹರೆಯೇ ಈಗ ಬದಲಾಗಿದೆ. ರಸ್ತೆ ಸೇರಿದಂತೆ ಉತ್ತಮ ಮೂಲಸೌಕರ್ಯವನ್ನು ಕಂಡಿದೆ’ ಎಂದರು.

ಇದೇ ವೇಳೆ, ಗ್ರಾಮದ ರಾಕೇಶ್ ಸಿದ್ದರಾಮಯ್ಯ ಬಡಾವಣೆಯ ಫಲಕವನ್ನು ಮುಖ್ಯಮಂತ್ರಿ ಅನಾವರಣಗೊಳಿಸಿದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಮಾಹಿತಿ ಆಯೋಗದ ಅಧ್ಯಕ್ಷ ಹರೀಶ್ಕುಮಾರ್, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ರಘು, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್ ಹಾಗೂ ಮುಖಂಡರು ಪಾಲ್ಗೊಂಡಿದ್ದರು.

ಕೇಂದ್ರ ಸರ್ಕಾರ ಕೈ ಕಟ್ಟಿ ಹಾಕಿದೆ...: ವಿಧಾನಪರಿಷತ್ ಸದಸ್ಯ ಕೆ. ಶಿವಕುಮಾರ್ ಮಾತನಾಡಿ, ‘ವರುಣ ಕ್ಷೇತ್ರದ ಜನರು ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿ, ರಾಜ್ಯಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಅವರ ಹೃದಯ ಬಡವರ ಪರವಾಗಿ ಸದಾ ಮಿಡಿಯುತ್ತಿದೆ. ಅವರು ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಲೂ ನಿಲ್ಲಿಸುವುದಿಲ್ಲ. ಇನ್ನಷ್ಟು ಗ್ಯಾರಂಟಿಗಳನ್ನು ಕೊಡುವುದಕ್ಕೆ ಆಗದಂತೆ ಕೇಂದ್ರ ಸರ್ಕಾರ ಅವರ ಕೈಕಟ್ಟಿ ಹಾಕಿದೆ. ಆದರೂ ಬಡವರ ಪರವಾದ ಕಾರ್ಯಕ್ರಮಗಳನ್ನು ಮುಂದುವರಿಸುತ್ತಿದ್ದಾರೆ. ಗ್ಯಾರಂಟಿ ನಿಲ್ಲಿಸಲಾಗುತ್ತದೆ ಎಂಬ ವಿರೋಧ ಪಕ್ಷದವರ ಮಾತುಗಳನ್ನು ನಂಬಬೇಡಿ’ ಎಂದು ಹೇಳಿದರು.

‘ಸಿದ್ದರಾಮಯ್ಯ ಅವರ ಮನೆತನ ಇರುವವರೆಗೂ ಅವರ ಜೊತೆ ನೀವೆಲ್ಲರೂ ನಿಲ್ಲಬೇಕು’ ಎಂದು ಪಾಲ್ಗೊಂಡಿದ್ದ ಜನರನ್ನು ಕೋರಿದರು.

‘ಒಳಮೀಸಲಾತಿ ಜಾರಿಗೊಳಿಸಬೇಕು’: ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ‘ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧಿಸಿರುವುದು ಕ್ರಾಂತಿಕಾರಕ ಕ್ರಮವಾಗಿದೆ’ ಎಂದು ಶ್ಲಾಘಿಸಿದರು.

‘ಹಿಂದಿನ ಸರ್ಕಾರಗಳು ಒಳಮೀಸಲಾತಿ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದ್ದವೇ ಹೊರತು ಯಾರೂ ಕ್ರಮ ಕೈಗೊಂಡಿರಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆದುಕೊಂಡು ಒಳಮೀಸಲಾತಿ ಜಾರಿಗೆ ಕ್ರಮ ವಹಿಸಿದ್ದಾರೆ. ಅವರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಅಡೆತಡೆಗಳನ್ನು ಬಗೆಹರಿಸಿ ಒಳಮೀಸಲಾತಿ ಜಾರಿಗೊಳಿಸಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.