ಗುರುವಾರ , ಡಿಸೆಂಬರ್ 1, 2022
20 °C

ಮೈಸೂರು: ಅಡಚಣೆ ಇಲ್ಲದೇ ಪ್ರಸಾರವಾದ ‘ಲೈವ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕುಳಿತಲ್ಲಿಯೇ ದಸರಾ ಕಾರ್ಯಕ್ರಮ ವೀಕ್ಷಣೆಗೆಂದು ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಿರುವ ನೇರಪ್ರಸಾರದ ವ್ಯವಸ್ಥೆಗೆ ಮೊದಲ ದಿನವಾದ ಸೋಮವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

‘ದಸರಾ ಹಬ್ಬ ಕಣ್ತುಂಬಿಕೊಳ್ಳಲು ಹಲವರು ಈಗಾಗಲೇ ಮೈಸೂರು ತಲುಪಿರಬಹುದು. ಹಲವರು ಊರಲ್ಲೇ ಇದ್ದು, ಲೈವ್‌ ಲಿಂಕ್‌ಗಳನ್ನು ಬಳಸಿಕೊಂಡು ಕಾರ್ಯಕ್ರಮವನ್ನು ಮೊಬೈಲ್ ಫೋನ್‌ಗಳ ಮೂಲಕವೇ ನೋಡಿದ್ದಾರೆ. ಯಾವುದೇ ಅಡಚಣೆ ಇಲ್ಲದೆ ಗುಣಮಟ್ಟದ ಪ್ರಸಾರವನ್ನು ಮಾಡಿದ್ದು, ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ’ ಎಂದು ನೋಡಲ್ ಅಧಿಕಾರಿ ಟಿ.ಕೆ.ಹರೀಶ್ ತಿಳಿಸಿದ್ದಾರೆ.

‘ಯೂಟ್ಯೂಬ್ ಹಾಗೂ ಫೇಸ್‌ಬುಕ್‌ ಲೈವ್‌ ಅನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಉದ್ಘಾಟನೆ ಹಾಗೂ ಅರಮನೆ ಆವರಣದ ಸಾಂಸ್ಕೃತಿಕ ಕಾರ್ಯಕ್ರಮ ನೇರಪ್ರಸಾರ ಉತ್ತಮವಾಗಿ ನಡೆದಿದೆ. ಅನೇಕರು ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಫೇಸ್‌ಬುಕ್‌ನಲ್ಲಿ 40ಸಾವಿರ, ಯೂಟ್ಯೂಬ್‌ ಲೈವನ್ನು 4ಸಾವಿರ ಮಂದಿ ಹಾಗೂ 45 ವಾಹಿನಿಗಳವರು ನೇರಪ್ರಸಾರವನ್ನು ಬಳಸಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು