ಮೈಸೂರು: ತಿ.ನರಸೀಪುರ - ಮೈಸೂರು ರಸ್ತೆಯ ಗುರುಕಾರ್ಪುರ ಗೇಟ್ ಬಳಿ ಮಂಗಳವಾರ ಮಧ್ಯಾಹ್ನ ಗೂಡ್ಸ್ ಕ್ಯಾಂಟರ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರು.

ತಿ.ನರಸೀಪುರ ತಾಲ್ಲೂಕಿನ ಎಸ್.ಮೇಗದಹಳ್ಳಿ ನಿವಾಸಿ ಎಸ್.ಪ್ರಭಾಕರ್ (41) ಮೃತಪಟ್ಟವರು.

‘ಮಾಲ್ ಆಫ್ ಮೈಸೂರಿನಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಪ್ರಭಾಕರ್, ಪ್ರತಿದಿನ ಕೆಲಸಕ್ಕೆ ಮನೆಯಿಂದ ಬೈಕ್ನಲ್ಲಿ ಬಂದು ಹೋಗುತ್ತಿದ್ದರು. ಮಂಗಳವಾರ ಬೈಕ್ನಲ್ಲಿ ಮೈಸೂರಿಗೆ ಬರುತ್ತಿದ್ದಾಗ, ಅದೇ ಮಾರ್ಗದಲ್ಲಿ ಬರುತ್ತಿದ್ದ ಗೂಡ್ಸ್ ಕ್ಯಾಂಟರ್ ಅತಿವೇಗವಾಗಿ ಪ್ರಭಾಕರ್ ಅವರ ಬೈಕ್ಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು. ಗೂಡ್ಸ್ ಚಕ್ರಗಳು ಪ್ರಭಾಕರ್ ಮೇಲೆ ಹರಿದಿದ್ದು, ಗಂಭೀರವಾಗಿ ಗಾಯಗೊಂಡ ಪ್ರಭಾಕರ್ ಸ್ಥಳದಲ್ಲೇ ಮೃತಪಟ್ಟರು’ ಎಂದು ಪೊಲೀಸರು ತಿಳಿಸಿದ್ದಾರೆ.

ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.