ಬೆಟ್ಟದಪುರ: ಸಮೀಪದ ಗೊರಹಳ್ಳಿ ಗ್ರಾಮದಲ್ಲಿ ಮೇ 22ರಂದು ರಾತ್ರಿ ಶ್ರೀದೊಡ್ಡಮ್ಮ ತಾಯಿ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಗ್ರಾಮದಲ್ಲಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

ಮೂರು ವರ್ಷಗಳ ಬಳಿಕ ಗೊರಹಳ್ಳಿ, ಕುಳ್ಳಯ್ಯಕೊಪ್ಪಲು, ಕರಡಿಪುರ ಹಾಗೂ ದೇವಿನಗರ ಗ್ರಾಮಗಳ ಎಲ್ಲಾ ಸಮುದಾಯಗಳ ಜನರು ಒಟ್ಟಾಗಿ ಹಬ್ಬ ಆಚರಿಸುತ್ತಿದ್ದಾರೆ.

ಶುಕ್ರವಾರ ಬೆಳಿಗ್ಗೆ ರಥದ ಮೇಲೆ ಕಳಸ ಪ್ರತಿಷ್ಠಾಪನೆ ನಡೆಯಲಿದ್ದು, ಬಳಿಕ ಉತ್ಸವ ಮೂರ್ತಿಯನ್ನು ಪಲ್ಲಕಿಯಲ್ಲಿ ಮೆರವಣಿಗೆ ಮಾಡಿ, ರಥದ ಮೇಲೆ ಪ್ರತಿಷ್ಠಾಪನೆ ಮಾಡಲಾಗುತ್ತದೆ.

ಬಸವೇಶ್ವರ ದೇವಸ್ಥಾನದಿಂದ ದೊಡ್ಡಮ್ಮ ಹಾಗೂ ಚಿಕ್ಕಮ್ಮ ತಾಯಿ ದೇವಸ್ಥಾನದವರೆಗೆ ರಥೋತ್ಸವ ನಡೆಯಲಿದ್ದು, ನೂರಾರು ಭಕ್ತರು ಭಾಗವಹಿಸುವರು.

ಡೊಳ್ಳುಕುಣಿತ, ಹಾಗೂ ವಿಶೇಷ ಪೂಜೆಗಳೊಂದಿಗೆ ಹಬ್ಬ ಸಂಭ್ರಮದಿಂದ ನಡೆಯಲಿದೆ. ಗ್ರಾಮದೆಲ್ಲೆಡೆ ತೋರಣ, ಬಣ್ಣಬಣ್ಣದ ದೀಪಾಲಂಕಾರ ಹಾಗೂ ಕೇಸರಿ ಬಾವುಟಗಳು ಕಂಗೊಳಿಸುತ್ತಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-38-1921072373

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.