ಪಿರಿಯಾಪಟ್ಟಣ: ಪಟ್ಟಣದ ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕನ್ನಂಬಾಡಿ ಅಮ್ಮನವರ ಬ್ರಹ್ಮ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.

ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ದೇವರಿಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. 10 ಗಂಟೆಯಿಂದಲೇ ಪೂಜೆ ನಡೆಸಿ, ಅಮ್ಮನವರಿಗೆ ಕಳಸಾರೋಹಣ ನೆರವೇರಿಸಲಾಯಿತು. ನಂತರ ದೇವಿಗೆ ಬಲಿಪೂಜೆ ನಡೆಯಿತು. ಕನ್ನಂಬಾಡಿ ಅಮ್ಮನವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ಕೊಂಬು, ಕಹಳೆ, ಕೇರಳ ಚಂಡೆ ವಾದ್ಯ ಮತ್ತು ಮಂಗಳವಾದ್ಯಗಳೊಂದಿಗೆ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಮಾಡಿಸಲಾಯಿತು. ನಂತರ ಬಗೆಬಗೆಯ ಹೂವಿನಿಂದ ಸಿಂಗರಿಸಿದ್ದ ರಥಕ್ಕೆ ದೇವಿಯನ್ನು ಕೂರಿಸಿ ಭಕ್ತಾದಿಗಳ ಘೋಷಣೆಯ ನಡುವೆ ಮಧ್ಯಾಹ್ನ 12ರೊಳಗೆ ಸಲ್ಲುವ ವೃಷಭ ಲಗ್ನದಲ್ಲಿ ದೇವಸ್ಥಾನದಿಂದ ಬಿ.ಎಂ.ರಸ್ತೆ ವರೆಗೆ ರಥವನ್ನು ಎಳೆಯಲಾಯಿತು. ರಥಕ್ಕೆ ಹಣ್ಣು, ಜವನ ಎಸೆಯುವ ಮೂಲಕ ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು. ನೂರಾರು ನವ ದಂಪತಿ ಜೋಡಿ ರಥೋತ್ಸವದಲ್ಲಿ ಭಾಗವಹಿಸಿದ್ದರು.

ಜಾತ್ರಾ ಮಹೋತ್ಸವಕ್ಕೆ ಪಿರಿಯಾಪಟ್ಟಣ ತಾಲ್ಲೂಕಿನ ನೂರಾರು ಗ್ರಾಮಗಳ ಜನತೆ ಸೇರಿ ಮೈಸೂರು ಹಾಗೂ ಕೊಡಗು ಜಿಲ್ಲೆಯ ಸಾವಿರಾರು ಭಕ್ತರು ಆಗಮಿಸಿದ್ದರು. ದೇವರ ಕೃಪೆಗೆ ಪಾತ್ರರಾದರು.

ರಥೋತ್ಸವದ ಅಂಗವಾಗಿ ಪಟ್ಟಣದ ಬಿ.ಎಂ. ರಸ್ತೆಯ ಬದಿಗಳಲ್ಲಿ, ಹಲವು ಸಂಘ ಸಂಸ್ಥೆಗಳು ಬೆಳಿಗ್ಗೆಯಿಂದಲೇ ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳಿಗಾಗಿ ದಾಸೋಹ ಉಣಬಡಿಸಿದರು. ಪಾನಕ, ಮಜ್ಜಿಗೆ, ನೀರು, ಹಣ್ಣು ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.