ನಂಜನಗೂಡು (ಮೈಸೂರು): ತಾಲ್ಲೂಕಿನ ಹಗಿನವಾಳು ಗ್ರಾಮದಲ್ಲಿ ಶನಿವಾರ ನಿಗದಿಯಾಗಿದ್ದ ಗ್ರಾಮದೇವತೆ ‘ಪಟ್ಟದಮ್ಮ ರಾಣಿ ದೇವತೆ ಜಾತ್ರೆ’ ಕೊನೆ ಕ್ಷಣದಲ್ಲಿ ಸ್ಥಗಿತಗೊಂಡ ಪರಿಣಾಮ, ರಥವು ಬೀದಿಯಲ್ಲೇ ನಿಂತಿದೆ.

ಅದ್ದೂರಿಯಾಗಿ ಜಾತ್ರೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ದೇಗುಲದ ಬಳಿ ಫೋಕಸ್
ಲೈಟ್ ಕಂಬಕ್ಕಿಂತಲೂ ಮೇಲೆ ಬಸವೇಶ್ವರ ಚಿತ್ರವಿದ್ದ ಬಾವುಟ ಹಾಕಿದ್ದ ವಿಚಾರದಲ್ಲಿ ಗ್ರಾಮದ ದಲಿತರು–ಲಿಂಗಾಯತರ ನಡುವೆ ವಿವಾದ ಉಂಟಾಗಿ ಜಾತ್ರೆ ಸ್ಥಗಿತಗೊಂಡಿತು.

ಈ ವೇಳೆ, ಆ ಬಾವುಟದ ಬಳಿ ಅಂಬೇಡ್ಕರ್ ಭಾವಚಿತ್ರ ಅಳವಡಿಸಲು ಕೆಲವರು ಮುಂದಾದಾಗ ಮಾತಿನ ಚಕಮಕಿ ಜಾಸ್ತಿಯಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.