ಹಂಪಾಪುರ: ಶನಿವಾರ ರಾತ್ರಿ ಸುರಿದ ಮಳೆಯಿಂದಾಗಿ ಬೆಳಗನಹಳ್ಳಿಯಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ.

ಗ್ರಾಮದ ದಿಲೀಪ್ ಅವರ ಎರಡು ಎಕರೆ ಪ್ರದೇಶದ ಮುಸುಕಿನ ಜೋಳ ನೆಲಕಚ್ಚಿದೆ. ಭುಜಂಗಪ್ಪ ಅವರ ಬಾಳೆ ಬೆಳೆ ಹಾನಿಯಾಗಿದೆ.

‘ಉತ್ತಮ ಇಳುವರಿ ನಿರೀಕ್ಷಿಸಿದ್ದೆ. ಒಂದು ತಿಂಗಳಲ್ಲಿ ಕಟಾವಿಗೆ ಬರುತ್ತಿತ್ತು. ಬಿರುಗಾಳಿಗೆ ಬಾಳೆ ಸಂಪೂರ್ಣ ನೆಲಕ್ಕುರುಳಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ’ ಎಂದು ಭುಜಂಗಪ್ಪ ನೊಂದು ನುಡಿದರು.

ಸಂಬಂದಪಟ್ಟ ಅಧಿಕಾರಿಗಳು ಮಳೆಯಿಂದ ಆಗಿರುವ ಬೆಳೆ ಹಾನಿ ಪ್ರದೇಶಗಳ ಪರಿಶೀಲನೆ ನಡೆಸಿ, ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ರಾಮಾರಾಧ್ಯ ಅವರ ಕೊಟ್ಟಿಗೆ ಕುಸಿದಿದೆ. ಮಳೆಯಿಂದಾಗಿ ಚರಂಡಿ ನೀರು ಶಾಲೆ ರಸ್ತೆಯ ಪಕ್ಕದ ರಸ್ತೆ ಮೇಲೆ ಹರಿದಿದ್ದು, ಡಾಂಬರ್ ಕಿತ್ತು ಹೋಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಡಕ್ ನಿರ್ಮಿಸಬೇಕು ಎಂದು ಗ್ರಾಮದ ಪ್ರಭು ಮನವಿ ಮಾಡಿದ್ದಾರೆ.

ಬಿರುಗಾಳಿಗೆ ಹೊಸ ತೊರವಳ್ಳಿಯಲ್ಲಿ ವಿದ್ಯುತ್ ಕಂಬ ಮುರಿದಿದ್ದು, ವಿದ್ಯುತ್ ಸ್ಥಗಿತಗೊಂಡಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-38-1875930193

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.