ಹಂಪಾಪುರ: ಹೋಬಳಿಯ ಚಿಕ್ಕೆರೆಯೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡು ಉದ್ಘಾಟನೆಗೊಂಡಿದ್ದ ಶ್ರೀರಾಮ ಮತ್ತು ಬಸವೇಶ್ವರ ದೇವಸ್ಥಾನಗಳಲ್ಲಿ ಹಣ ಮತ್ತು ಚಿನ್ನಾಭರಣವನ್ನು ಶುಕ್ರವಾರ ಕಳವು ಮಾಡಲಾಗಿದೆ.

ಗ್ರಾಮಸ್ಥರೆಲ್ಲರೂ ಒಗ್ಗೂಡಿ ಲಕ್ಷಾಂತರ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದರು. ಕಳೆದ ಎರಡು ವಾರದ ಹಿಂದೆ ದೇವಾಲಯಗಳನ್ನು ಉದ್ಘಾಟಿಸಿದ್ದರು.

ಈ ವೇಳೆ ಸಹಸ್ರಾರು ಭಕ್ತರು ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಎರಡು ದೇವಸ್ಥಾನ ಇಡಲಾಗಿದ್ದ ಗೋಲಕಕ್ಕೆ ದೇಣಿಗೆ ನೀಡಿದ್ದರು. ಲಕ್ಷಾಂತರ ಹಣ ಮತ್ತು ದೇವರಿಗೆ ಚಿನ್ನಾಭರಣ ಹಾಕಲಾಗಿತ್ತು, ಇದನ್ನು ಗಮನಿಸಿದ ಖದೀಮರು ಬಾಗಿಲು ಮುರಿದು ದೇವಸ್ಥಾನದ ಒಳಗಿದ್ದ ಎರಡು ಗೋಲಕ ಕದ್ದಿದ್ದಾರೆ. ದೇವರ ಮೇಲಿದ್ದ ಒಡವೆ ಸಹ ಕಳವು ಮಾಡಲಾಗಿದೆ.

ಶನಿವಾರ ಎಂದಿನಂತೆ ಪೂಜೆ ಸಲ್ಲಿಸಲು ಆಗಮಿಸಿದ ಅರ್ಚಕ ನಂಜಪ್ಪ, ಕಳ್ಳತನವಾಗಿರುವುದನ್ನು ಗಮನಿಸಿ ಆತಂಕಗೊಂಡು ಗ್ರಾಮಸ್ಥರಿಗೆ ವಿಚಾರ ತಿಳಿಸಿದ್ದಾರೆ.

ನಂತರ ಗ್ರಾಮಸ್ಥರು ಪಟ್ಟಣದ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಸಬ್ ಇನ್ ಸ್ಪೆಕ್ಟರ್ ಸುರೇಶ್ ನಾಯಕ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲು ದಾಖಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-38-258371890

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.