ಹಂಪಾಪುರ: ‘126 ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಕೆರೆ ಹಾಡಿಯಲ್ಲಿ 46 ಕುಟುಂಬಗಳಿಗೆ 21 ಹಕ್ಕುಪತ್ರ ಹಸ್ತಾಂತರಿಸಲಾಗಿದ್ದು , 15 ಮಂದಿಗೆ ಮನೆ ನಿರ್ಮಾಣ ಮಾಡಿ ಕೊಡಲಾಗಿದೆ’ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಎಚ್.ಡಿ. ಕೋಟೆ ತಾಲ್ಲೂಕಿನ ಉದ್ಬೂರು ಕೆರೆ ಹಾಡಿಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಆದಿವಾಸಿಗಳಿಗೆ ನಿರ್ಮಿಸಲಾದ ₹ 75 ಲಕ್ಷ ವೆಚ್ಚದ 15 ಮನೆ ಹಸ್ತಾಂತರ ಹಾಗೂ ಡಿ.ಬಿ.ಕುಪ್ಪೆ ಪಂಚಾಯಿತಿ ವ್ಯಾಪ್ತಿಯಲ್ಲಿ ₹4.5 ಕೋಟಿ ವೆಚ್ಚದಲ್ಲಿ ಸೆಸ್ಕ್ ನಿರ್ಮಿಸಿರುವ ಯುಜಿ ಕೇಬಲ್ ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಆದಿವಾಸಿಗಳಿಗೆ ಕೇವಲ ಆರು ತಿಂಗಳು ಪೌಷ್ಟಿಕ ಆಹಾರದ ಧಾನ್ಯಗಳನ್ನು ನೀಡಲಾಗುತ್ತಿತ್ತು. ಈಗ 12 ತಿಂಗಳು ಪೌಷ್ಟಿಕ ಆಹಾರ, ಧಾನ್ಯಗಳನ್ನು ನೀಡಲಾಗುತ್ತಿದೆ ಎಂದರು. ಡಿಬಿಕುಪ್ಪೆ ಭಾಗದಲ್ಲಿ ₹50 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಯನ್ನು ಮಾಡಲಾಗಿದೆ. ಅರಣ್ಯದೊಳಗಿನ ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆ, ಶಾಲೆಗಳ ಅಭಿವೃದ್ಧಿ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿಕೊಡಲಾಗಿದೆ’ ಎಂದು ತಿಳಿಸಿದರು.

‘ಆದಿವಾಸಿಗಳ ಬೇಡಿಕೆಯಂತೆ ಹಕ್ಕುಪತ್ರದ ಆಧಾರದ ಮೇಲೆ ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ನೀಡುವಂತೆ ಕೃಷಿ ಇಲಾಖೆಗೆ ಸೂಚಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನೂತನ ನೀರಿನ ತೊಂಬೆ ನಿರ್ಮಾಣಕ್ಕೂ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾನೀಡಲಾಗುವುದು ಎಂದು ಆದಿವಾಸಿಗಳಿಗೆ ಭರವಸೆ ನೀಡಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಮಹೇಶ್ ಮಾತನಾಡಿ, ಆದಿವಾಸಿಗಳಿಗೆ 7 ವರ್ಷಗಳಲ್ಲಿ 1,800 ಮನೆಗಳನ್ನು ನೀಡಲಾಗಿದೆ ಎಂದರು. ತಹಶೀಲ್ದಾರ್ ಶ್ರೀನಿವಾಸ್, ಎಸಿಎಫ್ ಮಧು, ಮೈಮುಲ್ ನಿರ್ದೇಶಕ ಈರೇಗೌಡ, ಮುಖಂಡರಾದ ವಡ್ಡರಗುಡಿ ಚಿಕ್ಕಣ್ಣ, ಮಂಜುನಾಥ್, ಪರಶಿವಮೂರ್ತಿ, ಸೋಮೇಶ್, ಬಾಲಯ್ಯ, ಲೋಹಿತ್, ಕಲೀಂ, ಮಹದೇವೇಗೌಡ, ರವಿ, ಟಿಎಚ್ಒ ರವಿಕುಮಾರ್, ಸಿಡಿಪಿಒ ದೀಪಾ, ಉಪ ತಹಶೀಲ್ದಾರ್ ಸಂಜೀವಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಧರಣೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಸಾದ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಶಿಕಲಾ, ಕಾರ್ಮಿಕ ಇಲಾಖೆಯ ಪರಮೇಶ್, ಆರ್ಎಫ್ಒ ಸಿದ್ದರಾಜು, ನಾಗರಾಜು, ಚಲುವೇಗೌಡ, ಮಹೇಶ್, ಮಲ್ಲೇಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-38-388265799

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.