ಹಂಪಾಪುರ: 2027ಕ್ಕೆ ಪೂರ್ಣಪ್ರಮಾಣದ ಜನಗಣತಿ ನಡೆಯಲಿದ್ದು, ಎಲ್ಲ ಜನಾಂಗದವರೂ ತಮ್ಮ ಕುಟುಂಬದ ಸಂಪೂರ್ಣ ಮಾಹಿತಿ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಶಿವಕುಮಾರ್ ತಿಳಿಸಿದರು.

ಎಚ್.ಡಿ. ಕೋಟೆ ತಾಲ್ಲೂಕಿನ ಜಕ್ಕಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

‘ಹಿಂದಿನ ಗಣತಿ ಪ್ರಕಾರ ಎಸ್.ಸಿ ಮತ್ತು ಎಸ್.ಟಿ ಸಮುದಾಯ ಶೇ 30ರಷ್ಟಿತ್ತು. ಈ ಜನಗಣತಿ ಬಳಿಕ ಶೇ 40ರಿಂದ 45ಕ್ಕೆ ಏರುವ ನಿರೀಕ್ಷೆ ಇದೆ. ಇಷ್ಟು ದೊಡ್ಡ ಸಮುದಾಯಕ್ಕೆ ಕೇವಲ ಶೇ 15ರಷ್ಟು ಮೀಸಲಾತಿ ನೀಡಲಾಗಿದ್ದು, ಈ ಪ್ರಮಾಣ ಶೇ 35 ಆಗಬೇಕು. ಇದಕ್ಕಾಗಿ ನಾವು ಹೋರಾಟ ಮಾಡಬೇಕು. ಈ ಹೋರಾಟ ಜಕ್ಕಹಳ್ಳಿ ಗ್ರಾಮದಿಂದಲೇ ಆರಂಭವಾಗಲಿ’ ಎಂದರು.

ಜಕ್ಕಹಳ್ಳಿ ಮಾದರಿ ಗ್ರಾಮ. ವೀರಶೈವ ಲಿಂಗಾಯತ ಮತ್ತು ದಲಿತ ಸಮುದಾಯ ಒಟ್ಟಿಗೆ ಸೇರಿ ಇಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಿಸಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

‘ಪ್ರಸ್ತುತ ಅಂಬೇಡ್ಕರ್, ಬುದ್ಧ, ಬಸವ, ಕನಕದಾಸರನ್ನು ಜಾತಿಗಳಿಗೆ ಸೀಮಿತ ಮಾಡಲಾಗುತ್ತಿದೆ. ಇವರೆಲ್ಲ ಜಾತೀಯತೆಯ ವಿರುದ್ಧ ಹೋರಾಡಿದವರು. ಅವರನ್ನು ನಾವು ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲವಾದ ಪರಿಣಾಮ ದೇಶದಲ್ಲಿ ಇನ್ನೂ ಜಾತಿ ವ್ಯವಸ್ಥೆ ಜೀವಂತವಾಗಿದೆ’ ಎಂದು ಬೇಸರಿಸಿದರು.

‘ಗ್ರಾಮಸ್ಥರು ಗ್ರಂಥಾಲಯ ನಿರ್ಮಾಣಕ್ಕೆ ಮನವಿ ಮಾಡಿದ್ದು, ನನ್ನ ಅನುದಾನದಿಂದ ₹ 10 ಲಕ್ಷ ನೀಡುತ್ತೇನೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ‘ಗ್ರಾಮದಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಯಾಗಿದೆ. ಈಗ ಅಂಬೇಡ್ಕರ್ ಅವರು ನಮ್ಮ ಗ್ರಾಮದಲ್ಲಿ ಎಷ್ಟು ಪ್ರಮಾಣದಲ್ಲಿ ಜೀವಂತ ಇರುತ್ತಾರೆ. ಎಷ್ಟು ಪ್ರಮಾಣದಲ್ಲಿ ಜೀವಂತವಾಗಿಟ್ಟುಕೊಳ್ಳುತ್ತೀರಿ ಎಂಬುದರ ಬಗ್ಗೆ ಆಲೋಚಿಸಬೇಕು. ಅವರ ಚಿಂತನೆಗಳು, ಅವರ ತತ್ವಗಳು ಕೇವಲ ಮೂರ್ತಿಗಳಲ್ಲಿ ಆರಾಧಿಸುವ, ಆಚರಿಸುವ ವಸ್ತುವಲ್ಲ. ಅಂಬೇಡ್ಕರ್ ಎಂದರೆ ಅನುಸರಣೆ. ಅವರನ್ನು ನಾವು ಅನುಸರಿಸಬೇಕು’ ಎಂದು ಸಲಹೆ ನೀಡಿದರು.

ಮಾಜಿ ಸಚಿವ ಎನ್. ಮಹೇಶ್, ‘ಜಕ್ಕಹಳ್ಳಿ ಗ್ರಾಮದವರೆಲ್ಲಾ ಒಟ್ಟಾಗಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಿರುವುದು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಯಾಗಿದೆ’ ಎಂದರು.

ದಲಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಮುಖಂಡರಾದ ಎಚ್.ಸಿ.ಮಂಜುನಾಥ್, ವೆಂಕಟಸ್ವಾಮಿ, ಎಚ್.ಸಿ. ನರಸಿಂಹಮೂರ್ತಿ, ಶಾಸಕ ಅನಿಲ್ ಚಿಕ್ಕಮಾದು ಅವರ ಪತ್ನಿ ಸೌಮ್ಯ ಅನಿಲ್ ಚಿಕ್ಕಮಾದು, ಎಸ್.ವಿ.ವೆಂಕಟೇಶ್, ಅಕ್ಕ ಅಕಾಡೆಮಿಯ ಡಾ.ಶಿವಕುಮಾರ್, ಜೆಡಿಎಸ್ ಮುಖಂಡ ಜಯಪ್ರಕಾಶ್ ಚಿಕ್ಕಣ್ಣ, ನಿವೃತ್ತ ಅಧಿಕಾರಿ ಪರಮೇಶ್ವರ, ಶಿಕ್ಷಕ ಸೋಮಯ್ಯ, ಮುಖಂಡರಾದ ಪುಟ್ಟರಾಜು, ಲಿಂಗಯ್ಯ, ಯೋಗೇಶ್, ಜೆ.ಪಿ.ನಾಗರಾಜು, ಕೆಂಡಗಣ್ಣಸ್ವಾಮಿ,ಯೂಸುಫ್, ಸುರೇಶ್, ಜವರಯ್ಯ, ಮಾಧರಾಜು, ಇಟ್ನ ರಾಜಣ್ಣ, ರಾಜು, ಜಯಲಕ್ಷ್ಮಿ, ಆನಂದ್, ನಾಗರಾಜು, ಪ್ರತಿಮೆ ನಿರ್ಮಾಣ ಸಮಿತಿಯ ಮುರಳೀಧರ್ ಜಕ್ಕಹಳ್ಳಿ, ಬಸವರಾಜು, ಮಲ್ಲೇಶ್, ರವೀಂದ್ರ, ನಾಗಮಲೆ, ರಾಜಶೇಖರ ಮೂರ್ತಿ, ನಾಗರಾಜು, ಪುಟ್ಟರಾಜು, ಟ್ರಾಕ್ಟರ್ ಕುಮಾರ್ , ಶಿವಣ್ಣ, ಸೋಮಣ್ಣ, ಮುತ್ತಯ್ಯ, ಜಿ.ಪಿ.ಶಿವರಾಜು, ಮಾದರಾಜು, ನೀಲಕಂಠಯ್ಯ, ನಿವೃತ್ತ ಪೊಲೀಸ್ ಅಧಿಕಾರಿಗಳಾದ ಗೋಪಯ್ಯ, ಶಾಂತರಾಜು, ನಿವೃತ್ತ ಶಿಕ್ಷಕ ನೀಲಕಂಠಯ್ಯ, ವಕೀಲ ಪರಶಿವಮೂರ್ತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-38-816184748

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.