ಹಂಪಾಪುರ: ಎಚ್.ಡಿ. ಕೋಟೆ ತಾಲ್ಲೂಕಿನ ಡಿ. ಬಿ. ಕುಪ್ಪೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅವರು ಕೃಷಿ ಇಲಾಖೆಯ ಕೃಷಿ ಮಾಹಿತಿ ರಥಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಮಾತನಾಡಿ, ಕೃಷಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳು, ಮುಸುಕಿನ ಜೋಳ ದಲ್ಲಿ ಕಂಡುಬರುವ ಬಿಳಿಸುಳಿ ರೋಗದ ಹತೋಟಿಗೆ ಅನುಸರಿಸಬೇಕಾದ ಕ್ರಮಗಳು, ಸಮತೋಲಿತ ರಸಗೊಬ್ಬರಗಳ ಬಳಕೆ ಕುರಿತು ರೈತರಿಗೆ ಮಾಹಿತಿ ನೀಡಲು ಟ್ಯಾಬ್ಲೊ (ಕೃಷಿ ಮಾಹಿತಿ ರಥ) ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಸಂಚರಿಸಿ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಲಿದೆ ಎಂದರು.

ಬೇಸಿಗೆಯಲ್ಲಿ ಆಳವಾಗಿ ಎರಡು ಬಾರಿ ಉಳುಮೆ ಮಾಡಬೇಕು, ಮುಸುಕಿನ ಜೋಳ ಬೆಳೆ ಬದಲು ರಾಗಿ, ಅಲಸಂದೆ, ತೊಗರಿ ಮತ್ತು ಅವರೆ ಬೆಳೆಗಳೊಂದಿಗೆ ಬೆಳೆ ಪರಿವರ್ತನೆ ಮಾಡುವುದು, ಸಮಗ್ರ ಪೋಷಕಾಂಶ ನಿರ್ವಹಣೆಗಾಗಿ ಭೂಮಿಗೆ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಬೆಳೆ ಗೊಬ್ಬರಗಳ ಬಳಕೆ, ಜೈವಿಕ ಜೀವಾಣು ಮತ್ತು ಜೈವಿಕ ಗೊಬ್ಬರಗಳ ಬಳಕೆ ಹಾಗೂ ಶಿಫಾರಸು ಮಾಡಿದ ರಸಗೊಬ್ಬರಗಳ ಬಳಕೆ ಜೊತೆಗೆ ಬದುಗಳ ಳೆ ನಿರ್ವಹಣೆ ಮಾಡಬೇಕು ಎಂದರು.

ನೀರು ಬಸಿದು ಹೋಗುವಂತಹ ಬಸಿ ಕಾಲುವೆಗಳ ನಿರ್ಮಾಣ, ಬಿತ್ತನೆಗೆ ಮೊದಲು ಯಾವುದೇ ಖಾಸಗಿ ಅಥವಾ ಸರ್ಕಾರಿ ಸಂಸ್ಥೆಯಿಂದ ಖರೀದಿಸಿದ ಬೀಜವನ್ನು ಪ್ರತಿ ಕೆ.ಜಿ. ಬೀಜಕ್ಕೆ 3.0 ಗ್ರಾಂ ಮೆಟಾಲಾಕ್ಸಿಲ್, ಮ್ಯಾಂಕೋಜೆಬ್ ಎಂಬ ಸಂಯುಕ್ತ ಶಿಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡುಬೇಕು, ಬಿತ್ತನೆ ಮಾಡಿದ 15-20 ದಿನಗಳ ಅಂತರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಂಯುಕ್ತ ಶಿಲೀಂದ್ರ ನಾಶಕವಾದ ಮೆಟಲಾಕ್ಸಿಲ್ ಶೇ 4 ಡಬ್ಲೂ.ಪಿ. ಮ್ಯಾಂಕೋಜೆಬ್ ಶೇ 64 ಪ್ರತಿ ಲೀಟರ್ ನೀರಿಗೆ 2 ಗ್ರಾಂ ನಂತೆ ಮತ್ತು 2ನೇ ಸಿಂಪರಣೆಯಾಗಿ ಬಿತ್ತನೆ ಮಾಡಿದ 25-30 ದಿನಗಳ ಅಂತರದಲ್ಲಿ ರೋಗ ಲಕ್ಷಣಗಳು ಕಂಡುಬಂದಲ್ಲಿ ಅಜೋಕ್ಸಿಸ್ಟೋಬಿನ್ 18.2 ಡೈಫ್ನೊಕೊನೊಜೋಲ್ ಶೇ 11.4 ಪ್ರತಿ ಲೀಟರ್ ನೀರಿಗೆ 1 ಮಿ.ಲೀ. ಬೆರಸಿ ಸಿಂಪರಣೆ ಮಾಡಬೇಕು ಎಂದರು. ಸೌಲಭ್ಯಗಳು: ಕೃಷಿ ಯಾಂತ್ರೀಕರಣ ಯೋಜನೆಯಿಂದ ರೈತರಿಗೆ ಬೇಕಾಗುವ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಕಲ್ಟಿವೇಟರ್, ರೋಟೋವೇಟರ್, ಬ್ರಷ್ ಕಟರ್, ಹುಲ್ಲು ಕತ್ತರಿಸುವ ಯಂತ್ರ, ಒಕ್ಕಣೆ ಯಂತ್ರ ಮುಂತಾದ ಕೃಷಿ ಯಂತ್ರೋಪಕರಣಗಳನ್ನು ರಿಯಾಯ್ತಿ ದರದಲ್ಲಿ ವಿತರಿಸಲಾಗುವುದು. ಲಘು ನೀರಾವರಿ ಯೋಜನೆಗೆ ರೈತರಿಗೆ ಬೇಕಾಗುವ ತುಂತುರು ನೀರಾವರಿ , ಹನಿ ನೀರಾವರಿ ಉಪಕರಣಗಳನ್ನು ಶೇ 90 ರಿಯಾಯ್ತಿ ದರದಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.

ತಹಶೀಲ್ದಾರ್ ಶ್ರೀನಿವಾಸ್, ತಾಲೂಕು ಆರೋಗ್ಯ ಅಧಿಕಾರಿ ಡಾ. ರವಿಕುಮಾರ್, ಶಂಭುಲಿಂಗ ನಾಯಕ, ಕಲೀಮ್ ಪಾಷಾ, ಬಾಲಯ್ಯ, ವೆಂಕಟೇಗೌಡ, ತಿರುಪತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-38-324019385

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.