ಹಂಪಾಪುರ: ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ಬಿಸಿಲಿನ ತಾಪದಿಂದ ಬೆಳವಣಿಗೆ ಹಂತದ ಅಡಿಕೆ ಗಿಡಗಳನ್ನು ರಕ್ಷಿಸಿಕೊಳ್ಳಲು ರೈತರು ಗಿಡಗಳ ಕಾಂಡಕ್ಕೆ ಸುಣ್ಣ ಬಳಿಯಲು ಮುಂದಾಗಿದ್ದಾರೆ.

ಬೇಸಿಗೆಯಲ್ಲಿ ಅಡಿಕೆ ಗಿಡ ಉಳಿಸಿಕೊಳ್ಳುವುದು ರೈತರಿಗೆ ಸವಾಲಿನ ಕೆಲಸ. ಬಿಸಿಲಿನ ತಾಪವನ್ನು ಗಿಡ ತಡೆದುಕೊಳ್ಳುವುದಿಲ್ಲ. ಕಾಂಡ ಒಮ್ಮೊಮ್ಮೆ ಸೀಳುವ ಸಾಧ್ಯತೆ ಇರುತ್ತದೆ. ಬಿಸಿಲು ಬಿದ್ದಾಗ ಕಾಂಡ ಹಳದಿ ಬಣ್ಣಕ್ಕೆ ತಿರುಗಿ ಒಣಗುತ್ತದೆ. ಗಿಡಗಳಿಗೆ ಸೂರ್ಯನ ಕಿರಣ ಅಗತ್ಯವಿದೆ. ಆದರೆ, ಬೇಸಿಗೆಯಲ್ಲಿ ಅತಿಯಾದ ಬಿಸಿಲಿನ ತಾಪದಿಂದ ಗಿಡಗಳನ್ನು ರಕ್ಷಿಸಲೇಬೇಕಾದ ಅನಿವಾರ್ಯ ಇರುತ್ತದೆ.

‘ರೈತರು ಅಡಿಕೆ ಗಿಡಗಳ ಕಾಂಡಕ್ಕೆ ಬುಡದಿಂದ ಸುಮಾರು ಐದಾರು ಅಡಿಗಳವರೆಗೂ ಸುಣ್ಣ ಬಳಿಯುತ್ತಾರೆ. ಗಿಡ ಬಲಿತು ಕಾಂಡ ದಪ್ಪವಾದ ಬಳಿಕ ಸುಣ್ಣ ಬಳಿಯುವ ಅಗತ್ಯವಿಲ್ಲ’ ಎನ್ನುತ್ತಾರೆ ಅನುಭವಿ ರೈತರು.

‘ಗೂಡಿನಲ್ಲಿ ಬೇಯಿಸಿದ ಕಲ್ಲು ಸುಣ್ಣ ದೊರೆಯದಿದ್ದರಿಂದ ಬಣ್ಣದ ಅಂಗಡಿಗಳಲ್ಲಿ ಸುಣ್ಣದ ಪೇಸ್ಟ್ ಖರೀದಿಸಿ ಗಿಡಕ್ಕೆ ಬಳಸಲಾಗುತ್ತಿದೆ. ಸುಣ್ಣದ ಪೇಸ್ಟ್ಅನ್ನು ಸಮ ಪ್ರಮಾಣದ ನೀರಿನಲ್ಲಿ ಮಿಶ್ರಣ ಮಾಡಿ ಬಳಿದರೆ ಹೆಚ್ಚು ಕಾಲ ಕಾಂಡದ ಮೇಲೆ ನಿಲ್ಲುತ್ತದೆ. ಹೀಗಾಗಿ ಪೇಸ್ಟ್ ಬಳಸುತ್ತಿದ್ದೇವೆ’ ಎಂದು ಅಡಿಕೆ ಬೆಳೆಗಾರ ಬೆಳಗನಹಳ್ಳಿ ರೈತ ಈಶ ‘ಪ್ರಜಾವಾಣಿ’ಗೆ ತಿಳಿಸಿದರು.

‘10 ಕೆ.ಜಿ. ತೂಕದ ಸುಣ್ಣದ ಪೇಸ್ಟ್ ಒಂದು ಪ್ಯಾಕೆಟ್ ₹ 75ರಿಂದ ₹ 80 ಇದೆ. ಒಂದು ಟ್ಯೂಬ್ ಗಮ್ಗೆ ₹ 35 ಇದೆ. ಒಂದು ಎಕರೆಯ ಅಡಿಕೆ ಗಿಡಗಳಿಗೆ ಸುಣ್ಣ ಬಳಿಯಲು, ಕಾರ್ಮಿಕರ ಕೂಲಿ ಸೇರಿ ₹4 ಸಾವಿರದಿಂದ ₹5 ಸಾವಿರ ವೆಚ್ಚವಾಗುತ್ತದೆ. ಸುಣ್ಣವನ್ನು ನಾವೇ ಬಳಿದರೆ ಕೂಲಿ ವೆಚ್ಚ ಮಿಕ್ಕಲಿದೆ’ ಎಂದು ತಿಳಿಸಿದರು.

‘10 ಕೆ.ಜಿ. ಸುಣ್ಣದ ಪೇಸ್ಟ್ಗೆ 100 ಮಿ.ಲೀ. ಗಮ್ ಸೇರಿಸಿ ಲೇಪಿಸುತ್ತಿದ್ದೇವೆ. ಸುಣ್ಣದ ಜೊತೆ ಗಮ್ ಬಳಸುವುದರಿಂದ ಹೆಚ್ಚು ದಿನ ಕಾಂಡದ ಮೇಲೆ ನಿಲ್ಲುತ್ತದೆ’ ಎನ್ನುತ್ತಾರೆ ಅಡಿಕೆ ಬೆಳೆಗಾರರು.

‘ಕಳೆದ ವರ್ಷ ಕೆಲವೇ ರೈತರು ಮಾತ್ರ ಅಡಿಕೆ ಗಿಡಗಳಿಗೆ ಸುಣ್ಣ ಬಳಿದಿದ್ದರು. ಆದರೆ ಈ ವರ್ಷ ಬಿಸಿಲಿನ ಝಳ ಹೆಚ್ಚಾಗುವ ಸಾಧ್ಯತೆ ಇದ್ದು, ಗಿಡಗಳನ್ನು ನೆಟ್ಟಿರುವ ಎಲ್ಲ ರೈತರೂ ಸುಣ್ಣ ಬಳಿಯುವ ಕಾರ್ಯಕ್ಕೆ ಮುಂದಾಗಿದ್ದಾರೆ. ಒಬ್ಬ ರೈತ ಸುಣ್ಣ ಬಳಿದ ಬಳಿಕ ಆ ರೈತನನ್ನು ಗಮನಿಸಿ ಉಳಿದ ರೈತರು ಸುಣ್ಣ ಬಳಿಯಲು ಮುಂದಾಗಿದ್ದಾರೆ’ ಎಂದು ಬೆಳಗನಹಳ್ಳಿ ಅಡಿಕೆ ಬೆಳೆಗಾರ ಬಸಪ್ಪ ಮಾಹಿತಿ ನೀಡಿದರು.

‘ತೋಟಗಳಿಗೆ ಹೆಚ್ಚಿನ ನೀರುಣಿಸಬೇಕು, ಹನಿ ನೀರಾವರಿ, ತುಂತುರು ನೀರಾವರಿ ಅಳವಡಿಸಿದ್ದರೂ ಪರಿಪೂರ್ಣ ನೀರುಣಿಸುವುದು ಕಷ್ಟವಾಗಿದೆ. ಕಾಂಡ ಒಣಗದಂತೆ ನೋಡಿಕೊಳ್ಳದಿದ್ದರೆ, ಅಡಿಕೆ ತೋಟ ಉಳಿಯದು’ ಎಂದು ಬೆಳಗನಹಳ್ಳಿ ರೈತ ಈಶ ಸಲಹೆ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-38-656036410

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.