ಎಚ್.ಡಿ. ಕೋಟೆ: ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ಅಮೃತ ಯೋಜನೆಯಡಿ ₹42 ಕೋಟಿ ವೆಚ್ಚದ ಕಾಮಗಾರಿ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಪಟ್ಟಣದ ಎಲ್ಲ ವಾರ್ಡ್ಗಳಿಗೂ ಕಬಿನಿ ಜಲಾಶಯದಿಂದ 24 ಗಂಟೆ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.ವಾರ್ಡ್ಗಳ ಅಭಿವೃದ್ಧಿಗಾಗಿ ₹6 ಕೋಟಿ ವೆಚ್ಚದ ಸಿಸಿ ರಸ್ತೆ, ಕಾಂಕ್ರೀಟ್ ಒಳಚರಂಡಿ ಮತ್ತು ಪುಟ್ಪಾತ್ ಅಭಿವೃದ್ಧಿ ಯೋಜನೆಗೆ ಹನುಮಂತನಗರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಪಟ್ಟಣದಲ್ಲಿ 23 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯಿದ್ದು, ಅನುಗುಣವಾಗಿ ಅಭಿವೃದ್ಧಿಪಡಿಸುವ ಕೆಲಸಗಳು ನಡೆಯುತ್ತಿದೆ. ಮುಖ್ಯಮಂತ್ರಿ ನಿಧಿ ಅನುದಾನದಲ್ಲಿ ₹6 ಕೋಟಿ ಹಣ ಮಂಜೂರು ಮಾಡಿಸಲಾಗಿದೆ ಎಂದರು.₹9 ಕೋಟಿ ವೆಚ್ಚದಲ್ಲಿ ಹ್ಯಾಂಡ್ ಪೋಸ್ಟ್ ನಿಂದ ಹೆಬ್ಬಳ್ಳದವರಗೆ ದ್ವಿಪಥ ರಸ್ತೆ ನಿರ್ಮಿಸಲಾಗುವುದು, ಬಾಪೂಜಿ ವೃತ್ತದಲ್ಲಿ ಮೈಸೂರಿನ ದೊಡ್ಡ ಗಡಿಯಾರ ಮಾದರಿಯಲ್ಲಿ ಗಡಿಯಾರ ನಿರ್ಮಾಣಕ್ಕೆ ಯೋಜನೆ ಇದೆ. ಎಲ್ಲ ಸಮುದಾಯಗಳಿಗೂಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಲಾಗುತ್ತಿದೆ. ಛಾಯಾಗ್ರಾಹಕ ಸಂಘ ಮತ್ತು ಪತ್ರಕರ್ತರ ಸಂಘಗಳಿಗೆ ಕೆಲವೇ ದಿನಗಳಲ್ಲಿ ನಿವೇಶನ ದೊರೆಯಲಿದೆ ಎಂದರು. ಕಾಂಗ್ರೆಸ್ ಅಧ್ಯಕ್ಷ ಏಜಾಜ್ ಪಾಷ, ಮುಖಂಡರಾದ ಎಚ್.ಸಿ. ನರಸಿಂಹಮೂರ್ತಿ, ಆಸಿಫ್ ಇಕ್ಬಾಲ್, ಅಶೋಕ್, ನಾಗನಹಳ್ಳಿ ಪ್ರದೀಪ್, ಪರಶಿವಮೂರ್ತಿ, ಶಿವಮಲ್ಲಪ್ಪ, ಶಫಿ, ಅನಿಲ್, ಕೃಷ್ಣ, ಪ್ರಕಾಶ್, ಕುಮಾರ್, ಪುಟ್ಟಬಸವ, ಮುಖ್ಯಾಧಿಕಾರಿ ಸುರೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-38-1723177333

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.