ಎಚ್.ಡಿ.ಕೋಟೆ: ‘ಗ್ರಾಮೀಣ ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆ ಆರಂಭವಾಗುತ್ತಿರುವುದು ಸಂತಸದ ವಿಷಯ’ ಎಂದು ಬಿಡಗಲು ಪಡುವಲು ಮಠದ ಮಹಾದೇವ ಸ್ವಾಮೀಜಿ ಹೇಳಿದರು.

ಪಟ್ಟಣದ ಹ್ಯಾಂಡ್ಪೋಸ್ಟ್ನಲ್ಲಿನಿರ್ಮಾಣವಾದ ಪಾರ್ವತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ಹ್ಯಾಂಡ್ಪೋಸ್ಟ್ನಲ್ಲಿ ಆಸ್ಪತ್ರೆ ಆರಂಭವಾಗಿರುವುದರಿಂದ ಕಾಡಂಚಿನ ಜನರಿಗೆ ಅನುಕೂಲವಾಗಿದೆ. ಎಲ್ಲ ರೀತಿಯ ಸೌಲಭ್ಯ ದೊರಕುವಂತೆ ಮಾಡಿರುವುದು ಶ್ಲಾಘನೀಯ. ಇಲ್ಲಿನ ಜನರು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ತೆರಳಬೇಕಿತ್ತು. ಇದನ್ನು ಮನಗಂಡು ಆಸ್ಪತ್ರೆ ಮಾಲೀಕರಾದ ಪುಟ್ಟರಾಜು ದಂಪತಿ ಇಲ್ಲಿ ಆಸ್ಪತ್ರೆ ಆರಂಭಿಸಿರುವುದು ಮೆಚ್ಚುಗೆ ವಿಷಯ’ ಎಂದರು.

ಗ್ರಾಮೀಣ ಭಾಗದ ಜನರಿಗೆ ರಿಯಾಯಿತಿ ದರದಲ್ಲಿ ವೈದ್ಯಕೀಯ ಸೇವೆ ನೀಡುವ ದಿಕ್ಕಿನಲ್ಲಿ ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದರು.

ಆಸ್ಪತ್ರೆ ಮಾಲೀಕ ಪುಟ್ಟರಾಜು, ‘ಇದು ಹಿಂದುಳಿದ ತಾಲ್ಲೂಕು, ಆರೋಗ್ಯ ಸೌಲಭ್ಯಕ್ಕೆ ಮೈಸೂರಿಗೆ ಹೋಗಬೇಕಿತ್ತು. ಅದನ್ನು ಮನಗಂಡು ಆಸ್ಪತ್ರೆ ನಿರ್ಮಿಸಲಾಗಿದೆ. ಕಡಿಮೆ ದರದಲ್ಲಿ ಉತ್ತಮ ಸೇವೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದರು.

ಡಾ.ಆರೀಫ್, ಡಾ.ಅರುಣ್, ಡಾ. ಚಂದ್ರಶೇಖರ್, ವೈದ್ಯಾಧಿಕಾರಿ ಡಾ.ಭಾಸ್ಕರ್, ಆಸ್ಪತ್ರೆ ಮಾಲೀಕರಾದ ಪಾರ್ವತಿ, ಸಿಬ್ಬಂದಿ ಅನಿತಾ, ಪುಟ್ಟನಾಯಕ, ವಿಜಯ್, ಉಮೇಶ್, ಸುಧಾ, ಪುಷ್ಪ, ಸಂಗೀತಾ, ಕೃಷ್ಣವೇಣಿ, ಮನೋಜ್, ಅಭಿಷೇಕ್, ಅನಿತಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-38-470638025

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.