ಎಚ್.ಡಿ.ಕೋಟೆ: ಕರ್ನಾಟಕ ಮಾದಾರ ಮಹಾಸಭಾಕ್ಕೆ ಸರಗೂರು ಹಾಗೂ ಎಚ್.ಡಿ. ಕೋಟೆ ತಾಲ್ಲೂಕುಗಳಿಂದ 2000ಕ್ಕೂ ಅಧಿಕ ಜನರನ್ನು ನೋಂದಣಿ ಮಾಡಿಸಬೇಕು ಎಂದು ಮಾಜಿ ಸಚಿವ ಕೋಟೆ ಎಂ. ಶಿವಣ್ಣ ಮಾದಿಗ ಸಮುದಾಯದ ಮುಖಂಡರಿಗೆ ಸೂಚಿಸಿದರು.

ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾದಾರ ಮಹಾಸಭಾದ ಸದಸ್ಯತ್ವ ನೋಂದಣಿ ಅಭಿಯಾನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕರ್ನಾಟಕ ಮಾದರ ಮಹಾಸಭಾದ ಉದ್ದೇಶ ಮಾದಿಗ ಸಮುದಾಯವನ್ನು ಒಂದೇ ವೇದಿಕೆಗೆ ಕರೆತಂದು ಸಂಘಟನೆ ಮಾಡುವುದು ನಮ್ಮ ಉದ್ದೇಶ’ ಎಂದರು.

‘ಸಂವಿಧಾನದ ಆಶಯದಂತೆ ನಮ್ಮ ಸಮುದಾಯಕ್ಕೆ ಸಿಗಬೇಕಾದ ನ್ಯಾಯ ಮತ್ತು ಹಕ್ಕುಗಳಿಗಾಗಿ ನಾವೆಲ್ಲರೂ ಒಗ್ಗೂಡಬೇಕಾಗಿದೆ. ಸಂಘಟನೆಯ ಮೂಲಕವೇ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಹಾಗಾಗಿ ಮಾದಾರ ಮಹಾಸಭಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸೇರಿಸಿಸಮಾಜದ ಬಲವರ್ಧನೆಗೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಡಾ.ಬಾಬು ಜಗಜೀವನ್ ರಾಂ ವಿಚಾರ ವೇದಿಕೆ ಅಧ್ಯಕ್ಷ ಸಿ.ತಿಮ್ಮಯ್ಯ, ‘ಸಮುದಾಯ ಅಭಿವೃದ್ಧಿ ಹೊಂದಲು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರತಿ ಗ್ರಾಮಗಳಿಗೆ ತೆರಳಿ, ಮಹಾಸಭಾದ ಉದ್ದೇಶವನ್ನು ಜನರಿಗೆ ತಿಳಿಸಿ ಸದಸ್ಯತ್ವ ನೋಂದಣಿ ಮಾಡಿಸಬೇಕು’ ಎಂದರು.

‘ಮಹಾಸಭಾ ಸಂಘಟನೆಯ ಪ್ರಮುಖ ಉದ್ದೇಶ ಸಮುದಾಯವನ್ನು ಒಗ್ಗೂಡಿಸುವುದು ಜೊತೆಗೆ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಮುದಾಯವನ್ನು ಉತ್ತೇಜಿಸುವ ಸಲುವಾಗಿ ಸಚಿವ ಕೆ.ಎಚ್. ಮುನಿಯಪ್ಪ ಅಧ್ಯಕ್ಷತೆಯಲ್ಲಿ ಸಂಘ ಸ್ಥಾಪಿಸಲಾಗಿದೆ’ ಎಂದು ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣಾಪುರ ಪರಶಿವಮೂರ್ತಿ ಹೇಳಿದರು.

‘ರಾಜ್ಯದಲ್ಲಿ ಮಾದಾರ ಮಹಾಸಭಾ ಪಕ್ಷಾತೀತವಾಗಿ ರಚನೆಗೊಂಡಿರುವ ಬಹುದೊಡ್ಡ ಸಂಘಟನೆ. ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಅನುಕೂಲ ಕಲ್ಪಿಸಲಾಗುವುದು’ ಎಂದು ಮಹಾಸಭಾ ಸರಗೂರು ತಾಲ್ಲೂಕು ಘಟಕದ ಅಧ್ಯಕ್ಷ ಕುರ್ಣೇಗಾಲ ಬೆಟ್ಟಸ್ವಾಮಿ ತಿಳಿಸಿದರು.

ಮಹಾಸಭಾದ ಬೆಟ್ಟಸ್ವಾಮಿ, ಹೀರಳ್ಳಿ ಪ್ರಕಾಶ್, ಉಡ ನಾಗರಾಜ್, ಚಲುವರಾಜು, ಸಿ. ಕಾಳಪ್ಪಾಜಿ, ಡಿ. ನಾಗರಾಜು, ಶಿವಯ್ಯ, ಎಡತೊರೆ ಶಿವರಾಜ್, ವೆಂಕಟಪ್ಪ, ದೇವನಾಥ್, ರವೀಶ್, ಗಿರಿ ಪ್ರಸಾದ್, ಮಹದೇವು, ಸಿಂಗಯ್ಯ, ಚೌಡಯ್ಯ, ಶಿವಲಿಂಗಯ್ಯ, ನಾಗರಾಜ್, ಮಹದೇವ, ಜಯಕುಮಾರ್, ಗುರುಮಲ್ಲು, ಶ್ರೀನಿವಾಸ್, ಶಿವರಾಜ್, ಮಂಜುನಾಥ್, ಶಿವಾಜಿ, ಚಿಕ್ಕಸ್ವಾಮಿ, ರಮೇಶ್, ವೈರ್ ಮುಡಿ, ಹನುಮಂತ, ಚೇತನ್, ಮಾದು ಸೇರಿದಂತೆ ಮುಖಂಡರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-38-495916519

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.